ತನ್ನದಲ್ಲದ ತಪ್ಪಿಗೆ ಕೆಲಸ ಕಳೆದುಕೊಂಡರು

ಕಿನ್ನಿಗೋಳಿ: ಕಳೆದ ಎರಡು ವರ್ಷದ ಹಿಂದೆ ಕುವೈಟ್‌ನಲ್ಲಿ ಸತ್ಯನಾರಾಯಣ ಪೂಜೆಯನ್ನು ಆಯೋಜನೆ ಮಾಡಿ ಸರಿಯಾದ ಕಾರಣವಿಲ್ಲದೆ ಬಂಧನಕೊಳ್ಳಗಾಗಿ ಭಾರತಕ್ಕೆ ವಾಪಸ್ಸು ಕಳುಹಿಸಲಾದ ವ್ಯಕ್ತಿಯೋರ್ವರು ಊರಿನಲ್ಲಿ ಗಾರೆ ಕೆಲಸದಲ್ಲಿ ಸಹಾಯಕರಾಗಿ ದುಡಿಯುತ್ತಿರುವ ಪರಿಸ್ಥಿತಿ ಬಂದಿದೆ.
ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಯಾದವ ಸನಿಲ್ 15 ವರ್ಷಗಳ ಕಾಲ ಕುವೈಟ್ ನಲ್ಲಿ ಪ್ರತಿಷ್ಠಿತ ಕ್ಯಾಟರಿಂಗ್ ಸಂಸ್ಥೆಯಲ್ಲಿ ವೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನವಚೇತನ ವೆಲ್‌ಫೇರ್ ಅಸೋಶಿಯೇಶನ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು 15 ವರ್ಷಗಳ ಕಾಲ ಪ್ರತೀವರ್ಷ ಸತ್ಯನಾರಾಯಣ ಪೂಜೆ, ಅಯ್ಯಪ್ಪ ಪೂಜೆ, ದಸರಾ ಮುಂತದ ಹಿಂದು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರಲ್ಲದೆ ಸಂಸ್ಥೆಯ ಮೂಲಕ ವಿವಿಧ ಕಡೆಗಳಿಗೆ ಪ್ರವಾಸ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.
ಪ್ರತೀ ವರ್ಷದಂತೆ 2015 ರಲ್ಲಿಯೂ ಕೂಡ ಸತ್ಯನಾರಾಯಣ ಪೂಜೆಯನ್ನು ಸರ್ವ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸಿದ್ದರು. ಆದರೆ ಪೂಜೆ ಮುಗಿದು ಕೆಲ ದಿನಗಳಲ್ಲೇ ಅಲ್ಲಿನ ಪೋಲೀಸ್ ಅಧಿಕಾರಿಗಳು ಸಂಶಯದಿಂದ ಅವರ ಮನೆಗೆ ಬಂದು ಯಾವುದೇ ಮಾಹಿತಿ ನೀಡದೆ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿ ಕರೆದುಕೊಂಡು ಹೋಗಿ ಒಂದು ಕೋಣೆಯಲ್ಲಿ ಬಂಧನದಲ್ಲಿರಿಸಿದರು. ಸುಮಾರು 14 ದಿನಗಳ ಕಾಲ ಕೋಣೆಯಲ್ಲಿರಿಸಿ ಅವರು ನಡೆಸುತ್ತಿದ್ದ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅವರ ಸಂಘದ ಅಧ್ಯಕ್ಷ ಅಶೋಕ್ ಕೋಡಿಕಲ್ ಮತ್ತು ಪೂಜೆಯಲ್ಲಿ ಪಾಲ್ಗೊಂಡ ಪ್ರಮುಖ 11 ಮಂದಿಯ ವಿವರಗಳನ್ನು ಪಡೆದು ಬಂಧನದಲ್ಲಿರಿಸಿ. ಅವರಲ್ಲಿನ ಪಾಸ್ ಪೋರ್ಟ್ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡು ಎಲ್ಲಾ ವಿಚಾರಣೆ ಮುಗಿದ ಮೇಲೆ ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಕರೆತಂದು ಮುಂಬೈ ವಿಮಾನದ ಮೂಲಕ ಭಾರತಕ್ಕೆ ವಾಪಾಸು ಕಳುಹಿಸಿಕೊಟ್ಟರು. ಆದರೆ ಯಾದವ ಸನಿಲ್ ಸೇರಿ 11 ಮಂದಿಗೆ ತಮ್ಮನ್ನು ಯಾವ ಕಾರಣಕ್ಕಾಗಿ ಭಾರತಕ್ಕೆ ವಾಪಾಸ್ ಕಳುಹಿಸಿದ್ದಾರೆ ಎಂಬ ಸರಿಯಾದ ಮಾಹಿತಿ ಇದುವರೆಗೆ ಕೂಡಾ ದೊರಕಿಲ್ಲ. ಒಬ್ಬ ಅಧಿಕಾರಿಯೊಂದಿಗೆ ಯಾದವ ಸನಿಲ್ ಈ ಬಗ್ಗೆ ಕಾರಣ ಕೇಳಿದಾಗ ನಿನ್ನ ಪೂಜೆ ಏನಿದ್ದರೂ ಭಾರತಕ್ಕೆ ಹೋಗಿ ಮಾಡು ಎಂಬ ಉತ್ತರವಷ್ಟೆ ಸಿಕ್ಕಿತು. ಕುವೈಟ್ ನಲ್ಲಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡ ಸಂದರ್ಭ ಇವರೊಂದಿಗೆ ದುಡಿಯುತ್ತಿದ್ದ ಮುಸ್ಲೀಮರು ಮತ್ತು ಕೆಲ ಸಂಘ ಸಂಸ್ಥೆಯವರು ಇವರ ಪರವಾಗಿ ಕುವೈಟ್ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ ಭಾರತಕ್ಕೆ ಬಂದ ನಂತರ ಸಂಸದ ನಳಿನ್ ಕುಮಾರ್ ಸುಷ್ಮಾ ಸ್ವರಾಜ್ ಬಳಿ ಕರೆದುಕೊಂಡು ಹೋಗಿ ಇವರಿಗೆ ನ್ಯಾಯ ಸಿಗುವಂತೆ ಪ್ರಯತ್ನಿಸಿದ್ದಾರೆ ಆದರೆ ಏನೂ ಪ್ರಯೋಜನವಾಗಿಲ್ಲ.
ಕುವೈಟ್ ನಲ್ಲಿ ಯಾದವ ಸನಿಲ್ ರವರ ತಂಡ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಹೊಸತಾಗಿರಲಿಲ್ಲ. ಅಲ್ಲದೆ ತುಳುಕೂಟ, ಕನ್ನಡ ಸಂಘ, ಬಂಟರ ಸಂಘ, ಬಿಲ್ಲವ ಸಂಘ ಹೀಗೆ ಹಲವಾರು ಸಂಘ ಸಂಸ್ಥೆಗಳು ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದೆಯಾದರೂ ಇವರ ಸಂಘದ ಮೇಲೆ ಪೋಲೀಸ್ ಇಳಾಖೆ ಕಣ್ಣಿರುವುದು ಮಾತ್ರಾ ಯಕ್ಷ ಪ್ರಶ್ನೆಯಾಗಿಒಯೇ ಉಳಿದುಕೊಂಡಿದೆ.
ಯಾದವ ಸನಿಲ್ ಚಿಕ್ಕಂದಿನಿಂದಲೂ ಕಡು ಬಡತನದಿಂದಲೇ ಜೀವನ ಸವೆಸಿದವರು. ಊರಿನಲ್ಲಿ ಊರಲ್ಲಿ ಎಂಟನೇ ತರಗತಿವರೆಗೆ ವಿದ್ಯಾಭ್ಯಾಸ ಪೂರೈಸಿ ಕೆಲ ವರ್ಷಗಳಲ್ಲಿ ಮುಂಬೈಯಲ್ಲಿ ದುಡಿಯುತ್ತಿದ್ದರು. ಕುಟುಂಬ ನಿರ್ವಹಣೆಗೆ ಕಷ್ಟವಾದ ಕಾರಣ 2001 ರಲ್ಲಿ ಕುವೈಟ್ ಗೆ ಹೋಗಿ 15 ವರ್ಷಗಳ ಕಾಲ ಅಲ್ಲಿ ಕ್ಯಾಟರಿಂಗ್ ಸಂಸ್ಥೆಯಲ್ಲಿ ವೈಟರ್ ಆಗಿ ದುಡಿದು ಸಮಯವಿದ್ದಾಗ ಬೇರೆ ಬೇರೆ ಸಣ್ಣಪುಟ್ಟ ಕೆಲಸವನ್ನು ನಿರ್ವಹಿಸಿ ಜೀವನ ಸಾಗಿಸುತ್ತಿದ್ದರು. ಇನ್ನೇನು ಕೆಲವೇ ತಿಂಗಳು ದುಡಿದು ನಂತರ ಊರಿಗೆ ಬಂದು ಇಲ್ಲಿಯೇ ನೆಲೆ ನಿಂತು ತನಗೆ ಸಿಗುವ 15 ವರ್ಷದ ಸರ್ವಿಸ್ ಹಣದಲ್ಲಿ ಏನಾದರೂ ಸ್ವಉದ್ಯೋಗ ಪ್ರಾರಂಭಿಸುವ ಆಲೋಚನೆಯಲ್ಲಿದ್ದರು ಆದರೆ ಅವರ ಕನಸು ಯಾವುದೂ ಸಾಕಾರಗೊಳ್ಳಲಿಲ್ಲ.
ಯಾದವ ಸನಿಲ್ ನಡೆದ ಘಟನೆ ಬಗ್ಗೆ ಮಾನಸಿಕವಾಗಿ ಕುಗ್ಗಿ ಮನೆಯಲ್ಲಿಯೇ ಇದ್ದಾಗ ಏಳಿಂಜೆ ರಘರಾಮ ಶೆಟ್ಟಿ ಯಾದವರ ಮನಸ್ಸನ್ನು ತಿಳಿಗೊಳಿಸಿ ತನ್ನ ಬಾವಿ ರಿಂಗ್ ತಯಾರಿಕಾ ಘಟಕಕ್ಕೆ ಕೆಲಸಕ್ಕೆ ಸೇರಿಸಿ ಆದ ದುರ್ಘಟನೆಯನ್ನು ಮರೆಯುವಂತೆ ಮಾಡಿ ಸುಖೀ ಜೀವನ ಹಾಗೂ ಕುಟುಂಬ ನಿರ್ವಹಣೆಗೆ ಗಾರೆ ಕೆಲಸಕ್ಕೆ ಹಚ್ಚಿ ಅವರ ಉತ್ತಮ ಜೀವನಕ್ಕೆ ಮುನ್ನಡಿ ಬರೆದಿದ್ದಾರೆ. ಈ ವೃತ್ತಿ ಬಗ್ಗೆ ಅರಿವಿಲ್ಲದಿದ್ದರೂ ಇದೀಗ ಅವರು ಸುಮಾರು ಒಂದೂವರೆ ವರ್ಷದಿಂದ ಗಾರೆ ಸಹಾಯಕರಾಗಿ ದುಡಿಯುತ್ತಿದ್ದಾರೆ. ತನ್ನ ಹೆಂಡತಿ ಎರಡು ಮಂದಿ ಮಕ್ಕಳು ಮತ್ತು ತನ್ನ ತಂಗಿಯ ಮೂರು ಮಂದಿ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಐದು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡುವ ಜವಾಬ್ದಾರಿ ಇವರ ಮೇಲಿದೆ.

ನವಚೇತನ ವೆಲ್ ಪೇರ್ ಅಸೋಶಿಯೇಶನ್ ಮೂಲಕ ನಾವು ಅನೇಕ ಕಾರ್ಯಕ್ರಮಗಅನ್ನು ಆಯೋಜಿಸಿದ್ದೇವೆ. ಪ್ರತೀ ವರ್ಷ ಸತ್ಯನಾರಾಯಣ ಪೂಜೆಯನ್ನು ಮಾಡಿದ್ದರೂ ಯಾರಿಂದಲೂ ಯಾವುದೇ ವಿರೋಧ ಆಕ್ಷೇಪಣೆ ಬಂದಿರಲಿಲ್ಲ ಆದರೆ ನಮ್ಮ ಮೇಲೆ ಮತಾಂತರ ಮಾಡುತ್ತಾರೆ ಎಂಬ ಆರೋಪ ಇತ್ತು ಹೇಳಲಾಗುತ್ತಿದ್ದರೂ ಸರಿಯಾದ ಕಾರಣ ತಿಳಿದು ಬಂದಿಲ್ಲ. ಅಲ್ಲಿ ಉದೋಗದಲ್ಲಿರುವ ಭಾರತದ ಮುಸ್ಲೀಮರೂ ಸೇರಿ ಎಲ್ಲರೂ ಕಾರ್ಯಕ್ರಮಗಳಿಗೆ ತುಂಬು ಸಹಕಾರ ನೀಡಿದ್ದಾರೆ. ನಾವು ಮಾಡದ ತಪ್ಪಿಗೆ ನಮಗೆ ಶಿಕ್ಷೆ ಆಗಿದೆ. ನಮ್ಮನ್ನು ಮುಂಬೈಗೆ ಕಳುಹಿಸುವಾಗ ಭಜರಂಗ ದಳದವರು ಅಲ್ಲಿ ನಮ್ಮನ್ನು ಬರಮಾಡಿಕೊಂಡು ನಮಗೆ ಸಹಾಯ ಮಾಡಿದ್ದಾರೆ, ಊರಿಗೆ ಬಂದ ನಂತರ ನನ್ನ ಮುಸ್ಲಿಂ ಗೆಳೆಯರು ಧನ ಸಹಾಯ ಕಳುಹಿಸಿಕೊಟ್ಟಿದ್ದಾರೆ.

ಯಾದವ ಸನಿಲ್ ಏಳಿಂಜೆ,

Kinnigoli-08021801 Kinnigoli-08021802

 

Comments

comments

Comments are closed.