ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು

ಕಿನ್ನಿಗೋಳಿ: ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಿ ಎಲ್ಲರಿಗು ಮಾದರಿಯಾಗಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು ಹೇಳಿದರು.
ಹತ್ತನೇ ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ದ.ಕ. ಜಿಲ್ಲಾ ಪಂಚಾಯಿತಿ ಮೂಲಭೂತ ಸೌಕರ್ಯ ಅಭಿವೃದ್ದಿ ಅನುದಾನದಿಂದ ನೀಡುವ 50 ಸಾವಿರದ ಚೆಕ್ ವಿತರಿಸಿ ಮಾತನಾಡಿ ಸರಕಾರ ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ರೈತರು ಸಾವಯವ ಗೊಬ್ಬರವನ್ನು ಬಳಸಿ ಮಾಲಿನ್ಯ ರಹಿತ ಸ್ವಚ್ಛ ಪರಿಸರಕ್ಕೆ ಕೈ ಜೋಡಿಸಬೇಕು ಎಂದರು.
ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಜಯ ಶೆಟ್ಟಿ, ಹೇಮಂತ್ ಅಮೀನ್, ಸಂಘದ ಅಧ್ಯಕ್ಷೆ ಲತಾ ಎಸ್, ಕಾರ್ಯದರ್ಶಿ ಮಮತಾ ನಿರ್ದೇಶಕರಾದ ಪ್ರಮೀಳ ಡಿ ಶೆಟ್ಟಿ, ಇಂದಿರಾ, ಚಿತ್ರಾ, ವಿಮಲಾ ಕೆ, ಗಿರಿಜಾ, ಲತಾ ಡಿ, ಹಾಲು ಪರೀಕ್ಷಕಿ ಜಯಲಕ್ಷೀ ಡಿ. ಮತ್ತಿತರರು ಉಪಸ್ಥಿತರಿದ್ದರು.
ಲತಾ ಎಸ್ ಸ್ವಾಗತಿಸಿ, ಜಯಲಕ್ಷೀ ಜಿ ವಂದಿಸಿದರು.

Kinnigoli-10021805

Comments

comments

Comments are closed.

Read previous post:
Kinnigoli-10021804
ಕಲ್ಲಾಪು ದೇವಳದ ಜಲಕದ ಕೆರೆ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿ, ಕುಡಿಯುವ ನೀರು ಹಾಗೂ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಬಾರಿ ಅತೀ ಹೆಚ್ಚು ಹೈಮಾಸ್ಟ್ ದೀಪ ಮತ್ತು...

Close