ಆಕಾಶವಾಣಿ ಪ್ರತಿಭಾನ್ವೇಷಣೆ ಬಹುಮಾನ ವಿತರಣೆ

ಕಿನ್ನಿಗೋಳಿ: ಕಲೆಯ ಮೂಲ ಜೀವಾಳ ಅಮೂರ್ತವಾದುದು. ವ್ಯಸನಗಳಲ್ಲಿ ಮುಳುಗಿರುವ ಮನುಷ್ಯನಿಗೆ ಕಲೆಯು ಜೀವನ ಹೇಗೆ ಸಾಗಿಸಬೇಕೆಂದು ಕಲಿಸುತ್ತದೆ ಎಂದು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಪಸ್ಯಾಸಕ ಮಿಥುನ್ ಚಕ್ರವರ್ತಿ ಹೇಳಿದರು.
ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳೂರು ಆಕಾಶವಾಣಿ, ಕಿನ್ನಿಗೋಳಿಯ ಅನಂತ ಪ್ರಕಾಶ ಹಾಗೂ ಅರೆಹೊಳೆ ಪ್ರತಿಷ್ಟಾನದ ಸಹಯೋಗದಲ್ಲಿ ಆಕಾಶವಾಣಿಯ ಯುವವಾಣಿಗಾಗಿ ಆಯೋಜಿಸಿದ ಪ್ರತಿಭಾನ್ವೇಷಣೆ ಕವನ ಕಥಾ ಸ್ಪರ್ಧೆಗಳ ಬಹುಮಾನ ವಿತರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕವನ ಸ್ಪರ್ಧೆಯಲ್ಲಿ ವಿಜೇತರಾದ ಸವಿರಾಜ ಆನಂದೂರು ಮೂಡುಬಿದ್ರೆ (ಪ್ರಥಮ), ಕುಮಾರಿ ಯಶಸ್ವಿನಿ ಕದ್ರಿ(ದ್ವಿತೀಯ), ರಾಘವೇಂದ್ರ ಆಲೂರು(ತೃತೀಯ), ಕಥಾ ಸ್ಪರ್ಧೆಯಲ್ಲಿ ಯೋಗೀಶ ಪೇರಂದಡ್ಕ(ಪ್ರಥಮ), ಮಹಾಲಕ್ಷ್ಮೀ ಉಪ್ಪಿನಕುದ್ರು (ದ್ವಿತೀಯ), ಯೋಗೀಶ ಮಲ್ಲಿಗೆಮಾಡು(ತೃತೀಯ).
ವಿಜೇತರಿಗೆ ಕಟೀಲು ದೇಗುಲದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಬಹುಮಾನ ವಿತರಿಸಿದರು.
ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥೆ ಎಸ್. ಉಷಾಲತಾ, ಅನಂತ ಪ್ರಕಾಶ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ, ಅರೆಹೊಳೆ ಪ್ರತಿಷ್ಟಾನದ ಅಧ್ಯಕ್ಷ ಸದಾಶಿವ ರಾವ್, ಕಟೀಲು ಕಾಲೇಜು ಪ್ರಿನ್ಸ್‌ಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಮತ್ತಿತಲ್ರು ಉಪಸ್ಥಿತರಿದ್ದರು.
ದೇವು ಹನೆಹಳ್ಳಿ ಪ್ರಸ್ತಾವನೆಗೈದು, ಸ್ಪರ್ಧೆಗೆ ಬಂದ 70ಕ್ಕೂ ಹೆಚ್ಚು ಕಥೆ ಹಾಗೂ ಕವನ ಆಕಾಶವಾಣಿಯಲ್ಲಿ ಪ್ರಸಾರ ಕಾಣಲಿವೆ ಎಂದರು. ಉಪನ್ಯಾಸಕ ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Kinnigoli-10021803

Comments

comments

Comments are closed.

Read previous post:
Kinnigoli-10021802
ಪುನರೂರು ಸನ್ಮಾನ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವದ ಸಂದರ್ಭ ಮಂಗಳೂರಿನ ಶರವು ಕಲಾವಿದರು ತಂಡದ ನಾಟಕ ನಿರ್ದೇಶಕ ಹಾಗೂ ಪ್ರಸಿದ್ದ ನಳಪಾಕ ತಜ್ಞ ಯು.ರಾಘವೇಂದ್ರ...

Close