ಫೆ.15 ವಾಲಿಬಾಲ್ ಪಂದ್ಯಾಟ (ಉಡುಪಿ ವಲಯ)

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿ ವಿ ಯ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 15 ಗುರುವಾರ ಕಟೀಲು ಕಾಲೇಜು ಕ್ರೀಡಾಂಗಣದಲ್ಲಿ ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ಉಡುಪಿ ವಲಯದ ಪುರುಷರ ವಾಲಿಬಾಲ್ ಪಂದ್ಯಾಟ ಜರಗಲಿದೆ. ಪಂದ್ಯಾಟವನ್ನು ಮುಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜ್ಯೆನ್ ಉದ್ಘಾಟಿಸಲಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಕಾಲೇಜು ಸಂಚಾಲಕ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಯುಪಿಸಿಎಲ್ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ರಕ್ಷಕ-ಶಿಕ್ಷಕರ ಸಂಘದ ಅಧ್ಯಕ್ಷ ಯಾದವ ಕೋಟ್ಯಾನ್ ಅವರನ್ನು ಸನ್ಮಾನಿಸಲಾಗುವುದು.
ಸಂಜೆ ಜರಗಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ, ಕಾಲೇಜು ಸಂಚಾಲಕ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ವಹಿಸಲಿದ್ದು ದೇವಳದ ಅರ್ಚಕರಾದ ಹರಿನಾರಾಯಣ ದಾಸ ಆಸ್ರಣ್ಣ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ. ಮರವೂರು ಸಂದೀಪ್ ಶೆಟ್ಟಿ, ಕಟೀಲು ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಶೆಟ್ಟಿ, ಕರಾಟೆ ಶಿಕ್ಷಕ ಈಶ್ವರ್ ಕಟೀಲು, ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ಬ್ ಅಧ್ಯಕ್ಷ ಕೇಶವ, ಸುಧೀರ್ ಶೆಟ್ಟಿ ಕೊಡೆತ್ತೂರು ಗುತ್ತು, ಮಂಗಳೂರು ವಿ ವಿ ಯ ದ್ಯೆಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-10021803
ಆಕಾಶವಾಣಿ ಪ್ರತಿಭಾನ್ವೇಷಣೆ ಬಹುಮಾನ ವಿತರಣೆ

ಕಿನ್ನಿಗೋಳಿ: ಕಲೆಯ ಮೂಲ ಜೀವಾಳ ಅಮೂರ್ತವಾದುದು. ವ್ಯಸನಗಳಲ್ಲಿ ಮುಳುಗಿರುವ ಮನುಷ್ಯನಿಗೆ ಕಲೆಯು ಜೀವನ ಹೇಗೆ ಸಾಗಿಸಬೇಕೆಂದು ಕಲಿಸುತ್ತದೆ ಎಂದು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಪಸ್ಯಾಸಕ ಮಿಥುನ್ ಚಕ್ರವರ್ತಿ...

Close