ಕಲ್ಲಾಪು ದೇವಳದ ಜಲಕದ ಕೆರೆ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿ, ಕುಡಿಯುವ ನೀರು ಹಾಗೂ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಬಾರಿ ಅತೀ ಹೆಚ್ಚು ಹೈಮಾಸ್ಟ್ ದೀಪ ಮತ್ತು ರಸ್ತೆ ಉಬ್ಬುಗಳಿಗೆ ಅನುದಾನ ಒದಗಿಸಲಾಗಿದೆ ಎಂದು ದ.ಕ.ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು. ದ.ಕ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಪಡುಪಣಂಬೂರು ಗ್ರಾಮ ಪಂಚಾಯಿತಿಯ ಒಟ್ಟು 5.75 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡ ಕಲ್ಲಾಪು ವೀರಭದ್ರ ಮಹಾಮ್ಮಾಯೀ ದೇವಳದ ಜಲಕದ ಕೆರೆ ರಸ್ತೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಜೀವನ್ ಪ್ರಕಾಶ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಗ್ರಾ.ಪಂ. ಉಪಾಧ್ಯಕ್ಷೆ ಸುರೇಖಾ, ಸದಸ್ಯರಾದ ಹರಿಪ್ರಸಾದ್, ಕುಸುಮಾ ಚಂದ್ರಶೇಖರ್, ಮಂಜುಳ , ವೀರಭದ್ರ ಮಹಾಮ್ಮಾಯೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ವೀರಪ್ಪ ಶೆಟ್ಟಿಗಾರ್, ದೇವಳದ ರಾಮ ಗುರಿಕಾರ, ರತ್ನಾಕರ ಯಾನೆ ಕಾಂತಣ್ಣ ಗುರಿಕಾರ, ಅಪ್ಪು ಗುರಿಕಾರ, ಲಕ್ಷಣ ಗುರಿಕಾರ, ಕಾರ್ಯದರ್ಶಿ ಆರ್, ನಾರಾಯಣ ಶೆಟ್ಟಿಗಾರ್ , ಕೃಷ್ಣ ಎಸ್ ಶೆಟ್ಟಿಗಾರ್, ನಂದಾಕಿಶೋರ್ ಶೆಟ್ಟಿ, ಶ್ರೀನಿವಾಸ ಶಾನುಬೋಗ, ಧನಂಜಯ ಸಾಲಿಯಾನ್, ಧನಂಜಯ ಜೈನ್, ಹರೀಶ್ ಜೈನ್, ವಾಸು ಆಚಾರ್ಯ, ಪಿ.ಎ. ವಿಶ್ವನಾಥ ರಾವ್ ಪಾವಂಜೆ, ಡಾ. ಸಂತೋಷ್ ಸಿಂಗ್, ಉಮೇಶ್ ಪೂಜಾರಿ, ಪಿತಾಂಬರ್ ಶೆಟ್ಟಿಗಾರ್, ಏಕನಾಥ ಶೆಟ್ಟಿಗಾರ್, ಆನಂದ ಅಂಚನ್, ದಿನೇಶ್ ಶೆಟ್ಟಿ ಬರ್ಕೆ, ಸಿ.ಎ ಚಂದ್ರ ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10021804

Comments

comments

Comments are closed.

Read previous post:
ಫೆ.15 ವಾಲಿಬಾಲ್ ಪಂದ್ಯಾಟ (ಉಡುಪಿ ವಲಯ)

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿ ವಿ ಯ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 15 ಗುರುವಾರ ಕಟೀಲು ಕಾಲೇಜು ಕ್ರೀಡಾಂಗಣದಲ್ಲಿ...

Close