ಕಿನ್ನಿಗೋಳಿ ಬಿಜೆಪಿ ಸಭೆ ವಿಕ ಸುದ್ದಿಲೋಕ

ಕಿನ್ನಿಗೋಳಿ: ರಾಜ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಗಳಿಸಿಬೇಕು ಈ ನಿಟ್ಟಿನಲ್ಲಿ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರದ ಜನಪರ ಯೋಜನೆಗಳು ಜನರ ಮನಸ್ಸು ಮುಟ್ಟಬೇಕು ಎಂದು ಮೂಲ್ಕಿ – ಮೂಡಬಿದರೆ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು ಹೇಳಿದರು. ಕಿನ್ನಿಗೋಳಿ ಯುಗಪುರುಷದಲ್ಲಿ ಬುಧವಾರ ನಡೆದ ಮೂಲ್ಕಿ ಶಕ್ತಿಕೇಂದ್ರದ ಮಹಿಳಾ ವಿಭಾಗದ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿ ಇಡೀ ರಾಜ್ಯದಲ್ಲಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಮೇಲೆ ಜನರ ಕಣ್ಣು ಇದೆ ಆದರಿಂದ ಕಾರ್ಯಕರ್ತರ ಕೆಲಸ ಹೊಣೆಗಾರಿಕೆ ಹೆಚ್ಚಿದೆ ಎಂದು ಹೇಳಿದರು.
ಫೆ. 23 ರಂದು ನಡೆಯುವ ದ.ಕ, ಉಡುಪಿ, ಉತ್ತರಕನ್ನಡ ಸೇರಿ ಮೂರು ಜಿಲ್ಲೆಗಳ ಬಿಜೆಪಿ ಮಹಿಳಾ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ನಾವು ಪ್ರತಿ ಗ್ರಾಮದಿಂದ ಜನರನ್ನು ಕಾರ್ಯಕರ್ತರನ್ನು ಸಂಘಟಿಸಿ ಕಾರ್ಯಕ್ರಮ ಯಶಸ್ಸು ಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು. ಬೂತ್ ಮಟ್ಟದಲ್ಲಿ ಕಮಿಟಿ ಹಾಗೂ ಹೊಣೆಗಾರಿಕೆ ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಸಮಿತಿಯ ಕೆ.ಭುವನಾಭಿರಾಮ ಉಡುಪ, ಜಿಲ್ಲಾ ಸಮಿತಿ ಲೀಲಾ ಬಂಜನ್, ಶಶಿಕಲಾ ಬಂಗೇರ, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಚಿತ್ರಾ ಸುಖೇಶ್, ಮಹಿಳಾ ಮೊರ್ಛಾದ ಸುರೇಖಾ ಬೆಳ್ಳಾಯರು, ಮಾಜಿ ತಾ. ಪಂ. ಸದಸ್ಯೆ ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-10021801

Comments

comments

Comments are closed.

Read previous post:
ತನ್ನದಲ್ಲದ ತಪ್ಪಿಗೆ ಕೆಲಸ ಕಳೆದುಕೊಂಡರು

ಕಿನ್ನಿಗೋಳಿ: ಕಳೆದ ಎರಡು ವರ್ಷದ ಹಿಂದೆ ಕುವೈಟ್‌ನಲ್ಲಿ ಸತ್ಯನಾರಾಯಣ ಪೂಜೆಯನ್ನು ಆಯೋಜನೆ ಮಾಡಿ ಸರಿಯಾದ ಕಾರಣವಿಲ್ಲದೆ ಬಂಧನಕೊಳ್ಳಗಾಗಿ ಭಾರತಕ್ಕೆ ವಾಪಸ್ಸು ಕಳುಹಿಸಲಾದ ವ್ಯಕ್ತಿಯೋರ್ವರು ಊರಿನಲ್ಲಿ ಗಾರೆ ಕೆಲಸದಲ್ಲಿ ಸಹಾಯಕರಾಗಿ...

Close