ಏಳಿಂಜೆ : ಕೆಸರ್‌ಡೇರ್ ಬಿರ್ಸೆರ್

ಕಿನ್ನಿಗೋಳಿ : ನಾವು ನಮ್ಮ ಸಂಸ್ಕ್ರತಿ ಆಚಾರ ವಿಚಾರಗಳನ್ನು ಮರೆತು ಆಧುನಿಕತೆಯತ್ತ ಮಾರುಹೋಗುತ್ತಿದ್ದೇವೆ. ಯುವ ಜನತೆಗೆ ಕೃಷಿ ಹಾಗೂ ಮಣ್ಣಿನ ಬಗ್ಗೆ ಅರಿವು ಮೂಡಲು ಇಂತಹ ಕ್ರೀಡೆಗಳು ಸಹಕಾರಿಯಾಗಲಿದೆ ಎಂದು ಏಳಿಂಜೆ ಕೋಂಜಾಲಗುತ್ತು ಅನಿಲ್ ಶೆಟ್ಟಿ ಹೇಳಿದರು
ನವಚೇತನ ಯುವಕ ಮಂಡಲದ ಆಶ್ರಯಲ್ಲಿ ಏಳಿಂಜೆ ಕೋಂಜಾಲಗುತ್ತು ಶೈಲಜ ಕೆ. ಶೆಟ್ಟಿ ಅವರ ಸವಿನೆನಪಿಗಾಗಿ ಕೆಸರ್‌ಡೇರ್ ಬಿರ್ಸೆರ್ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಮಾತನಾಡಿದರು.
ಕುಂಜಪ್ಪ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಏಳಿಂಜೆ ಪರಿಸರದ ಗ್ರಾಮಸ್ಥರಿಗಾಗಿ ಕೆಸರುಗದ್ದೆ ಒಟ, ತೆಂಗಿನ ಗರಿ ಹೆಣೆಯುವ ಸ್ಪರ್ಧೆ, ನಿಧಿ ಶೋಧನೆ, ಹಗ್ಗ ಜಗ್ಗಾಟ, ವಾಲಿಬಾಲ್, ಮೂರು ಕಾಲಿನ ಒಟ, ಸಂಗೀತ ಕುರ್ಚಿ, ಅಡಿಕೆ ಹಾಳೆ ಎಳೆಯುವ ಸ್ಪರ್ಧೆ ನಡೆದವು.
ಈ ಸಂದರ್ಭ ನವಚೇತನ ಯುವಕ ಮಂಡಲದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಐಕಳ ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್ ಶೆಟ್ಟಿ, ಸುಧಾಕರ ಸಾಲ್ಯಾನ್, ಗಣೇಶ್ ಭಟ್ ಏಳಿಂಜೆ, ಕೆ. ಭುವನಾಭಿರಾಮ ಉಡುಪ, ಸುಧಾಕರ ಶೆಟ್ಟಿ ಕೋಂಜಾಲ ಗುತ್ತು, ಕೃಷ್ಣ ಮಾರ್ಲ, ಸಾಯಿನಾಥ ಶೆಟ್ಟಿ, ಸ್ವರಾಜ್ ಶೆಟ್ಟಿ, ಪ್ರಭಾಕರ ಆಚಾರ್ಯ, ಕೃಷ್ಣ ಮೂಲ್ಯ, ಜಯ ಶೆಟ್ಟಿ, ಬಾಸ್ಕರ ಶೆಟ್ಟಿ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ಮತ್ತು ಲಕ್ಷಣ್ ಬಿ.ಬಿ ಕಾರ್ಯಕ್ರಮ ನಿರೂಪಿಸಿದರು.
Kinnigoli-12021802 Kinnigoli-12021803 Kinnigoli-12021804 Kinnigoli-12021805 Kinnigoli-12021806 Kinnigoli-12021807

Comments

comments

Comments are closed.