ಹರಿಹರ ಶ್ರೀ ರಾಮ ಭಜನಾ ಮಂದಿರ ಮಂಗಲೋತ್ಸವ

ಕಿನ್ನಿಗೋಳಿ : ಪುರಂದರದಾಸ, ಕನಕದಾಸರಂತಹ ದಾಸ ಶ್ರೇಷ್ಠರು ಭಜನೆ ಮೂಲಕ ಭಗವಂತನನ್ನು ಸಾಕ್ಷತ್ಕಾರಿಸಿ ಜಗತ್ತಿಗೆ ದಿವ್ಯ ಸಂದೇಶ ನೀಡಿದ್ದಾರೆ. ಎಂದು ದ. ಕ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಕಿನ್ನಿಗೋಳಿ ಸಮೀಪದ ಗೋಳಿಜೋರ ರಾಮನಗರದ ಹರಿಹರ ಶ್ರೀ ರಾಮ ಭಜನಾ ಮಂದಿರದಲ್ಲಿ ಶನಿವಾರ ಭಜನಾ ಮಂದಿರದ 43ನೇ ವಾರ್ಷಿಕ ಭಜನಾ ಮಂಗಲೋತ್ಸವದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ಭಜನಾ ಮಂದಿರದ ಅಧ್ಯಕ್ಷ ಉಮೇಶ್ ಎಮ್, ಪ್ರಕಾಶ್ ಸಾಲ್ಯಾನ್, ಶಂಕರ ಮಾಸ್ಟರ್, ಚಂದ್ರಶೇಖರ್ ಗೋಳಿಜೋರ, ವೆಂಕಪ್ಪ, ರಾಮ ಸಾಲ್ಯಾನ್, ಸಂಜೀವ, ಯೋಗೀಶ್, ಪ್ರಕಾಶ್ ಆಚಾರ್ಯ, ಜೀವನ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-12021801

Comments

comments

Comments are closed.

Read previous post:
Kinnigoli-10021805
ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು

ಕಿನ್ನಿಗೋಳಿ: ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಾವಲಂಬಿ ಜೀವನ ನಡೆಸಿ ಎಲ್ಲರಿಗು ಮಾದರಿಯಾಗಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು ಹೇಳಿದರು. ಹತ್ತನೇ ತೋಕೂರು ಹಾಲು...

Close