ಏಳಿಂಜೆ ನವಚೇತನ ಯುವಕ ಮಂಡಲ

ಕಿನ್ನಿಗೋಳಿ: ಸಂಘಸಂಸ್ಥೆಗಳು ಗ್ರಾಮದಲ್ಲಿ ಸೇವಾ ಮನೋಭಾವನೆ ಹಾಗೂ ಜನಪರ ಕಾಳಜಿಯ ಮೂಲಕವಾಗಿ ಅಭಿವೃದ್ಧಿಯಲ್ಲಿ ತೊಡಗಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಗಬೇಕು ಎಂದು ಏಲಿಂಜೆ ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ ಹೇಳಿದರು.
ಶನಿವಾರ ನಡೆದ ನವಚೇತನ ಯುವಕ ಮಂಡಲದ 31 ನೇ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಹಾಗೂ ನವ ಪದವೀಧರರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೋಂಜಾಲುಗುತ್ತು ದಿವಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ನವಚೇತನ ಯುವಕ ಮಂಡಲದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕೃಷಿಕೆ ಲಕ್ಷ್ಮಿ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ದೇವಳದ ಅರ್ಚಕ ಗಣೇಶ್ ಭಟ್ ಏಳಿಂಜೆ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ದಯಾನಂದ ಶೆಟ್ಟಿ ಕೋಂಜಾಲುಗುತ್ತು, ಅನಿಲ್ ಶೆಟ್ಟಿ ಕೊಂಜಾಲಗುತ್ತು, ಏಳಿಂಜೆ ಶಾಲಾ ಮುಖ್ಯ ಶಿಕ್ಷಕಿ ಜೂಲಿಯಾನ ಡಿಸೋಜ, ಸುಧಾಕರ ಶೆಟ್ಟಿ ಕೋಂಜಾಲಗುತ್ತು, ಪ್ರಭಾಕರ ಆಚಾರ್ಯ, ಕೃಷ್ಣ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಮತ್ತು ಲಕ್ಷಣ್ ಬಿ.ಬಿ ಕಾರ್ಯಕ್ರಮ ನಿರೂಪಿಸಿದರು.
ಏಳಿಂಜೆ ಶಾಲಾ ವಿದ್ಯಾರ್ಥಿಗಳಾದ ಸಾಕ್ಷಿ, ತೇಜಸ್ವಿ, ಶ್ವೇತಾ, ಎಸೆಸೆಲ್ಸಿಯಲ್ಲಿ ಸಾಧನೆಗೈದ ಚೇತನ್, ಅನ್ವಿತಾ ಆಚಾರ್ಯ, ಪಿಯುಸಿ ವಿಭಾಗದಲ್ಲಿ ಮೆಲಿಟಾ ಹಿಲ್ಡಾ ಆರಾಹ್ನ, ರೇಷ್ಮಾ ನತಾಲಿಯಾ, ಜಹೀರಾ ಭಾನು ಹಾಗೂ ಗ್ರಾಮದ ನವ ಪದವೀಧರರನ್ನು ಗೌರವಿಸಲಾಯಿತು.

Kinnigoli-13021803

Comments

comments

Comments are closed.

Read previous post:
Kinnigoli-13021802
ಪುನರೂರು ಶಿವರಾತ್ರಿ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳವಾರ ಮಹಾ ಶಿವರಾತ್ರಿಯ ಪ್ರಯುಕ್ತ ಆಹೋರಾತ್ರಿ ಭಜನೆ ಕಾರ್ಯಕ್ರಮವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ದೀಪ ಬೆಳಗಿಸಿ ಉದ್ಘಾಟಿಸಿದರು. ದೇವಳದ ಆಡಳಿತ...

Close