ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಗ್ರಾಮ ಅಭಿವೃದ್ಧಿ

ಕಿನ್ನಿಗೋಳಿ: ಮೂಲ್ಕಿ ಮೂಡಬಿದಿರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಗ್ರಾಮ ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ, ಗ್ರಾಮಗಳ ಅಭಿವೃದ್ಧಿಯೇ ಸರಕಾರದ ಮೂಲ ಉದ್ದೇಶ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಿಂದ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಿರೆ ಯಿಂದ ವಿಷ್ಣುಮೂರ್ತಿ ದೇವಳಗಾಗಿ ಕವತ್ತಾರು ಹೋಗುವರಸ್ತೆ ಕಾಂಕ್ರೀಕರಣ 50 ಲಕ್ಷ, ಕರ್ನಿರೆ ಕವತ್ರಾರು ಎಸ್.ಸಿ ಕಾಲನಿ ರಸ್ತೆ ಕಾಂಕ್ರೀಟೀಕರಣ, ಕವತ್ತಾರು ಎಸ್‌ಟಿ ಕಾಲನಿ ರಸ್ತೆ ಕಾಂಕ್ರೀಕರಣ ರಸ್ತೆ 10 ಲಕ್ಷ ಹಾಗೂ ಬಳ್ಕುಂಜೆ ಸಂತ ಪೌಲರ ರಸ್ತೆ ಕಾಂಕ್ರೀಟೀಕರಣ 10 ಲಕ್ಷ ಹಾಗೂ ಬಳ್ಕುಂಜೆ ಮಸೀದಿ ರಸ್ತೆ ಕಾಂಕ್ರೀಟೀಕರಣ 10 ಲಕ್ಷಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿ ಸಿದ್ದರಾಮಯ್ಯ ಸರಕಾರದ ಅನುದಾನದಲ್ಲಿ ಕಳೆದ ೨೦ ವರ್ಷಗಳಿಗಿಂತ ಈ ಬಾರೀ ಅತೀ ಹೆಚ್ಚು ಅನುದಾನಗಳು ಗ್ರಾಮೀಣ ಪ್ರದೇಶಕ್ಕೆ ಹರಿದು ಬಂದಿವೆ. ಬಳ್ಕುಂಜೆಗೆ ಒಂದು ಕೋಟಿ ರೂ ವಿನಿಯೋಗಿಸಲಾಗಿದೆ ಎಂದರು.
ಈ ಸಂದರ್ಭ ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಬಳ್ಕುಂಜೆ ಚರ್ಚ್ ಧರ್ಮಗುರು ಫಾ. ಮೈಕಲ್ ಡಿಸೋಜ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಜಂಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನೆಲ್ಸನ್ ಲೋಬೊ, ಬಿ ಎಮ್ ಆಸೀಫ್, ಮುತ್ತುಬಾವ, ನವೀನ್ ಕವತ್ತಾರು, ರಾಜೇಶ್ ಕವತ್ತಾರು, ರಾಮದಾಸ್, ರವೀಂದ್ರ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ ಕರ್ನಿರೆ, ಕಾಸಿಂ ಕರ್ನಿರೆ, ಗಣೇಶ್ ಪೂಜಾರಿ, ಮಿಥುನ್ , ವಸಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-13021801

Comments

comments

Comments are closed.

Read previous post:
Kinnigoli-12021806
ಏಳಿಂಜೆ : ಕೆಸರ್‌ಡೇರ್ ಬಿರ್ಸೆರ್

ಕಿನ್ನಿಗೋಳಿ : ನಾವು ನಮ್ಮ ಸಂಸ್ಕ್ರತಿ ಆಚಾರ ವಿಚಾರಗಳನ್ನು ಮರೆತು ಆಧುನಿಕತೆಯತ್ತ ಮಾರುಹೋಗುತ್ತಿದ್ದೇವೆ. ಯುವ ಜನತೆಗೆ ಕೃಷಿ ಹಾಗೂ ಮಣ್ಣಿನ ಬಗ್ಗೆ ಅರಿವು ಮೂಡಲು ಇಂತಹ ಕ್ರೀಡೆಗಳು ಸಹಕಾರಿಯಾಗಲಿದೆ...

Close