ಎ.29 : ಕಟೀಲು ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇವರ ಜಂಟಿ ಆಶ್ರಯದಲ್ಲಿ ಸಾಮೂಹಿಕ ವಿವಾಹ ಸಮಾರಂಭವು 2018 ರ ಎಪ್ರಿಲ್ 29ರಂದು ಸಾಯಂ.ಗಂಟೆ 6.25 ರ ಗೋಧೂಳಿ ಲಗ್ನದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಜರಗಲಿರುವುದು.
ನಿಬಂಧನೆಗಳು:
ವಧೂ ವರರು ಸಂಬಂಧಪಟ್ಟ ಪಂಚಾಯಿತಿಯಿಂದ ದೃಡೀಕರಣ ಪತ್ರ ತರುವುದು (ವಾಸ್ತವ್ಯದ ದೃಢೀಕರಣ) ಜನನ ಪ್ರಮಾಣ ಪತ್ರ ಅಥವಾ ಶಾಲಾ ದೃಢೀಕರಣ ಪತ್ರ ( ಸರ್ಟಿಫಿಕೇಟ್) ಗುರುತು ಚೀಟಿ ( ಐ. ಡಿ. ಕಾರ್ಡ್) ಎರಡೂ ಕಡೆಯಿಂದ ಮದುವೆಗೆ ತಂದೆ ತಾಯಿ ಸೇರಿ ಗರಿಷ್ಠ 10 ಜನರಿಗಿಂತ ಮೀರಿರಬಾರದು. ಯಾವುದೇ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ವರದಕ್ಷಿಣೆ ವಧುದಕ್ಷಿಣೆ ವಿವಾಹಕ್ಕೆ ಅವಕಾಶವಿರುವುದಿಲ್ಲ/ ವಧು ವರರನ್ನು ದೃಢೀಕರಿಸುವ ಸಮಾಜ ಗಣ್ಯ ವ್ಯಕ್ತಿಗಳ (ಪರಿಚಯದ ಬಗ್ಗೆ) ಶಿಫಾರಸ್ಸು ಇರಬೇಕು.
ಮದುವೆಯ ಸಮಯದಲ್ಲಿ ಸಾಕಷ್ಟು ಸಮಯಕ್ಕೆ ಮುಂಚಿತವಾಗಿ ಹಾಜರಿರಬೇಕು.
ಮದುಮಗನಿಗೆ ಧೋತಿ, ಶಾಲು ಹಾಗೂ ಮದುಮಗಳಿಗೆ ಸೀರೆ, ರವಕೆ ಕಣ, ಕರಿಮಣಿ ಮತ್ತು ಚಿನ್ನದ ತಾಳಿ ನೀಡಲಾಗುವುದು. ವಧು ವರರ ವಿವರವನ್ನು ತಾ. 10-04-2018 ರ ಒಳಗೆ ತಲುಪಿಸಬೇಕು ಎಂದು ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ (ಶ್ರೀ ಕ್ಷೇತ್ರ ಕಟೀಲು ದೇವಸ್ಥಾನ) ತಿಳಿಸಿದ್ದಾರೆ.
ಈ ಕೆಳಗೆ ಕಾಣಿಸಿದ ಮಹನೀಯರನ್ನು ದಯವಿಟ್ಟು ಸಂಪರ್ಕಿಸಿರಿ :
ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ (ಶ್ರೀ ಕ್ಷೇತ್ರ ಕಟೀಲು ದೇವಸ್ಥಾನ), ಮೊಬೈಲ್ : 9448529995, 0824-2200644
ಕೆ. ಭುವನಾಭಿರಾಮ ಉಡುಪ ಕಿನ್ನಿಗೋಳಿ, ಮೊಬೈಲ್ : 0824-2295423
ಸತೀಶ್ ರಾವ್, ಸ್ವಾತಿ ಸ್ವೀಟ್ಸ್, ಕಿನ್ನಿಗೋಳಿ, ಮೊಬೈಲ್ : 9449102149, ದೂರವಾಣಿ : 2296967, ಮನೆ : 2295635

Comments

comments

Comments are closed.