ಮೆನ್ನಬೆಟ್ಟು ಗ್ರಾಮ ಸಭೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಸರೋಜಿನಿ ಗುಜರನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಮೂರುಕಾವೇರಿಯಿಂದ ಕಾರ್ನಾಡ್ ತನಕದ ರಾಜ್ಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಕೆಲವು ತಿಂಗಳು ಕಳೆದರೂ ಆಮೆಗತಿಯಲ್ಲಿ ಸಾಗುತ್ತಿದೆ. ಕೇವಲ ಜಲ್ಲಿ ಹಾಕಿ ರಸ್ತೆಯುದ್ದಕ್ಕೂ ಧೂಳುಮಯ ಮಾಡಿ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಯನ್ನು ಮಾಡದೆ ಕಾಲಕಳೆಯುತ್ತಿದ್ದಾರೆ, ಮೆನ್ನಬೆಟ್ಟು ಭಾಗದ ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿ ಅಗಲಗೊಳಿಸುವ ನೆಪದಲ್ಲಿ ಅಗೆದು ಹೋಗಿ ಎರಡು ತಿಂಗಳು ಕಳೆಯಿತು. ಮುಂದಿನ ಮೂರು ತಿಂಗಳಲ್ಲಿ ಮಳೆಬರಲಿದೆ ಸಮಸ್ಯೆ ಪರಿಹಾರ ಮಾಡಿ ರಸ್ತೆ ಚರಂಡಿ ನಿರ್ಮಿಸಿ ಎಂದು ಗ್ರಾಮಸ್ಥರು ಆಕ್ರೋಶಿತರಾಗಿ ರಾದ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಲಾಖೆಯ ಇಂಜಿನಿಯರ್ ಗೋಪಾಲ್ ಅದಕ್ಕೆ ಉತ್ತರಿಸಿ ಕೆಲವು ತಾಂತ್ರಿಕ ತೊಂದರೆಗಳಿವೆ ಮೆಸ್ಕಾಂ ಇಲಾಖೆಯ ಕಂಬಗಳು ತೆರವು ಹಾಗೂ ರಸ್ತೆ ಬದಿಯ ಮರಗಳ ತೆರವು ಆಗಿಲ್ಲ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯುತ್ತಿದ್ದೇವೆ ಎಲ್ಲಾ ಕಡತಗಳು ಬೆಂಗಳೂರಿನಲ್ಲಿ ಇದೆ ಎಂದು ಹೇಳಿದಾಗ ಕಾರಣಗಳು ನಮಗೆ ಬೇಟ ಮೋದಲು ತಾಂತ್ರಿಕ ಆಡಚಣೆಗಳನ್ನು ದೂರ ಮಾಡಬೇಕಿತ್ತು ನಂತರ ಕಾಮಗಾರಿ ನಡೆಸಬೇಕಿತ್ತು. ಕಾಮಗಾರಿ ಯಾವಾಗ ಮಾಡಿ ಮುಗಿಸುತ್ತಿರಿ ಎಂದು ಗ್ರಾಮಸ್ಥರು ಪಟ್ಟು ಬಿಡದೆ ಒತ್ತಾಯಿಸಿದಾಗ ಎರಡು ದಿನದಲ್ಲಿ ಗ್ರಾಮಸ್ಥರ ಸಭೆ ಸೇರಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು ಎಂದು ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜ ಸಲಹೆ ನೀಡಿದರು.
ಕೆಮ್ಮಡೆಯಲ್ಲಿ ೨೭ ಸೈಟುಗಳು ಮಂಜೂರು ಆಗಿದ್ದು ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಹೇಳುತ್ತಾರೆ. ತಾಂತ್ರಿಕ ತೊಂದರೆಗಳನ್ನು ನಿವಾರಿಸಿ. ಮುಂದಿನ ಮೂರು ತಿಂಗಳಲ್ಲಿ ಮಳೆಗಾಲ ಬರುತ್ತದೆ ಶೀಘ್ರ ಹಕ್ಕು ಪತ್ರಗಳನ್ನು ನೀಡಿ ಗ್ರಾಮ ಪಂಚಾಯತ್ ಅರ್ಹರಿಗೆ ಸ್ಪಂದನೆ ನೀಡಬೇಕು ಎಂದು ಗ್ರಾಮಸ್ಥ ಅಣ್ಣಪ್ಪ ಹಾಗೂ ಶೈಲಾ ಸಿಕ್ವೇರಾ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಮಾಡಿ ತಾಲೂಕು ತಹಶೀಲ್ದಾರರಿಗೆ ಸೈಟ್ ತೋರಿಸಿ ತಾಂತ್ರಿಕ ಕಾರಣಗಳನ್ನು ನಿವಾರಿಸುವ ಬಗ್ಗೆ ಗ್ರಾಮಸ್ಥರ ಅನುಮತಿ ಮೇರೆಗೆ ನಿರ್ಣಯ ಮಾಡಲಾಯಿತು.
ನವೋದಯ ನಗರ ನೀರಿನ ಸಮಸ್ಯೆ ಪರಿಹಾರ ಆಗಿಲ್ಲ ವಾರಕ್ಕೊಮ್ಮೆ ನೀರು
ನವೋದಯ ನಗರ ಪ್ರದೇಶದಲ್ಲಿ ವಾರಕ್ಕೆ ಒಂದು ಸಲ ಮಾತ್ರ ನೀರು ಬರುತ್ತಿದೆ ಸೂಕ್ತ ಕಾರಣ ನೀಡಿ ಎಂದು ಗ್ರಾಮದ ೧೦ ಕ್ಕೂ ಹೆಚ್ಚು ಮಹಿಳೆಯರು ಒತ್ತಾಯಿಸಿದಾಗ ಅದಕ್ಕೆ ಉತ್ತರಿಸಿದ ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್ ಗ್ರಾಮದ ಕೆಲವು ಕುಡಿಯುವ ನೀರಿನ ಕೊಳವೆ ಬಾವಿ ಬತ್ತಿ ಹೋಗಿದೆ. ರಾಜಾಂಗಣದ ಬಳಿಯ ಬೊರ್‌ವೆಲ್ ಕುಡಿಯಲು ಅಯೋಗ್ಯ ಎಂದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೊಸ ಬಾವಿ ತೋಡಲಾಗಿದ್ದು ಅದಕ್ಕೆ ಪಂಪ್ ಅಳವಡಿಸಿ ನೀರು ಸರಬರಾಜು ಮಾಡಲಾಗುವುದು ಬಹುಗ್ರಾಮ ಯೋಜನೆಯ ನೀರು ಕಿನ್ನಿಗೋಳಿಯಿಂದ ಮೆನ್ನಬೆಟ್ಟು ಪಂಚಾಯಿತಿಗೆ ಬರುವಲ್ಲಿ ರಾಜ್ಯ ಹೆದ್ದಾರಿ ರಸ್ತೆ ದುರಸ್ಥಿ ವೇಳೆ ನೀರಿನ ಪೈಪ್ ಲೈನ್‌ಗಳು ಅಲ್ಲಲ್ಲಿ ತುಂಡರಿಸಲ್ಪಡುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ತಿಳಿಸಿದರು.
ಆಮೆಗತಿಯ ಬಹುಗ್ರಾಮ ಯೋಜನೆ ನೀರು
2010 ರಲ್ಲಿ ಪ್ರಾರಂಭವಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಇನ್ನೂ ಮುಗಿದಿಲ್ಲ ಯಾಕೇ ಎಂದು ಶ್ರೀಧರ ಶೆಟ್ಟಿ ಹಾಗೂ ಕೆ. ಭುವನಾಭಿರಾಮ ಉಡುಪ ಒತ್ತಾಯಿಸಿದರು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಉತ್ತರಿಸಿ ಮಾತಾನಾಡಿ ಸದ್ಯ ಕಾಮಗಾರಿ ಬೇರೆ ಗುತ್ತಿಗೆದಾರರಿಗೆ ವಹಿಸಿ ಕೊಡಲಾಗಿದ್ದು ಇನ್ನು ಕುಡಿಯುವ ನೀರು ಸೂಕ್ತವಾಗಿ ಸರಭರಾಜು ಆಗಲು ಕನಿಷ್ಠ ೪೫ ದಿನವಾದರೂ ಬೇಕಾಗಿದೆ. ಅಲ್ಲಿಯವರೆಗೆ ಬದಲಿ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಸ್ಪಷ್ಟ ಮಾಹಿತಿ ನೀಡಿದರು.
ಕೊಡೆತ್ತೂರು ಮುಕ್ಕ ರಸ್ತೆಗೆ ಕಾಂಕ್ರೀಟನ್ನು ಪೂರ್ತಿ ಉದ್ದಕ್ಕೂ ಮಾಡಿ ಇಲ್ಲವಾದರೇ ಬೇಡ ಮಧ್ಯ ರಸ್ತೆಯಲ್ಲಿ ಸ್ವಲ್ಪಭಾಗಕ್ಕೆ ಮಾಡಿದರೇ ರಸ್ತೆ ಬ್ಲಾಕ್ ಆಗುತ್ತೆ ಪರ್ಯಾಯ ದಾರಿ ಇಲ್ಲ ಅಲ್ಲಿನ ಭಾಗಕ್ಕೆ ಡಾಮರೀಕರಣ ಮಾಡಿ ಎಂದು ಗ್ರಾಮಸ್ಥರಾದ ರಾಜೇಶ್ ಹಾಗೂ ಶ್ರೀಧರ ಶೆಟ್ಟಿ ಒತ್ತಾಯಿಸಿದರು. ಆದರೆ ಈಗ ಹೆಚ್ಚಿನ ಕಡೆಗಳಲ್ಲಿ ಹೆಚ್ಚು ಬಾಳಿಕೆಯ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ ಸರಕಾರವು ಇದಕ್ಕೆ ಒತ್ತು ಕೊಡುತ್ತಿದೆ. ಅನುದಾನದ ಪ್ರಕಾರ ರಸ್ತೆ ಕಾಂಕ್ರೀಟೀಕರಣಗೊಳಿಸಲಾಗುತ್ತದೆ ಗ್ರಾಮಸ್ಥಾರ ಸಹಕಾರ ಮುಖ್ಯ ಈ ಬಗ್ಗೆ ಗ್ರಾಮಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಆಡಳಿತ ತಿಳಿಸಿತು.
ಕಿನ್ನಿಗೋಳಿ ಮೆನ್ನಬೆಟ್ಟು ಐಕಳ ಪರಿಸರದಲ್ಲಿ ರೈತರು ಹೆಚ್ಚಿದ್ದು ಕಿನ್ನಿಗೋಳಿ ಅಥವ ಮೆನ್ನಬೆಟ್ಟು ಪರಿಸರದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು. ಮೂಲ್ಕಿಯ ಕಾರ್ನಾಡಿನಲ್ಲಿರುವ ರೈತಸಂಪರ್ಕ ಕೇಂದ್ರ ಹೆಸರಿಗೆ ಮಾತ್ರ ಇದ್ದು ಹೆಚ್ಚಿನ ಗ್ರಮಗಳಿಗೆ ದೂರವಾಗಿದ್ದು ಅದರ ಪ್ರಯೋಜನ ಇಲ್ಲ ಅಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಹೋಗುವಂತಿಲ್ಲ ಅಷ್ಟು ಇಳಿಜಾರು ಪ್ರದೇಶ ಜಾರಿ ಬಿದ್ದರೆ ಸೊಂಟ ಮುರಿಯ ಬಹುದು, ಕೃಷಿ ಸಾಮಾಗ್ರಿಗಳನ್ನು ಸಾಗಿಸಲೂ ಕಷ್ಟ ಎಂದು ರೈತ ಹಿತರಕ್ಷಣಾ ವೇದಿಕೆಯ ಶ್ರೀಧರ ಶೆಟ್ಟಿ, ಭುವನಾಭಿರಾಮ ಉಡುಪ ಒತ್ತಾಯಿಸಿದರು. ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಕಳುಹಿಸಲಾಗುವುದು ಎಂದು ಅಧ್ಯಕ್ಷೆ ಸರೋಜಿನಿ ಹೇಳಿದರು.
ರಾಜರತ್ನಪುರ ಅಂಗನವಾಡಿ ಕೇಂದ್ರಕ್ಕೆ ಅವರಣ ಗೋಡೆ ನಿರ್ಮಾಣ ಮಾಡಿ, ಬಲ್ಲಣ ನೀರಿನ ಟ್ಯಾಂಕ್ ಹತ್ತಿರ ಕಸ, ಮನೆ ನಿವೇಶನ ಹಂಚಿಕೆ ಮಾಡಿ, ಮುಕ್ಕ ರಸ್ತೆ ಸಮಸ್ಯೆ ಪರಿಹಾರ ಮಾಡಿ, ತ್ಯಾಜ್ಯದ ವಿಲೇವಾರಿ ವಿಷಯಗಳ ಬಗ್ಗೆ ಗ್ರಾಮ ಸಭೆಯಲ್ಲಿ ಚರ್ಚಿಸಲಾಯಿತು.
ತೋಟಗಾರಿಕೆ ಇಲಾಖೆಯ ಪ್ರದೀಪ್ ಡಿಸೋಜ ನೋಡಲ್ ಅಧಿಕಾರಿಯಾಗಿದ್ದರು. ತಾ. ಪಂ. ಸದಸ್ಯೆ ಶುಭಲತಾ ಶೆಟ್ಟಿ, ಗ್ರಾ. ಪಂ. ಸದಸ್ಯರು, ಕಟೀಲು ಪ್ರಾಥಮಿಕ ಆರೊಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಭಾಸ್ಕರ ಕೋಟ್ಯಾನ್, ಜಿ. ಪಂ ಎಂಜಿನಿಯರ್ ಹರೀಶ್, ಕಂದಾಯ ಇಲಾಖೆಯ ಕಿರಣ್, ಮೆಸ್ಕಾಂ ಇಲಾಖೆಯ ದಾಮೋದರ್, ಶಿಶುಅಭಿವೃದ್ಧಿ ಇಲಾಖೆಯ ಶೀಲಾವತಿ, ಪಶು ಇಲಾಖೆಯ ಡಾ. ಸತ್ಯ ಶಂಕರ್, ಪಂಚಾಯಿತಿ ಲೆಕ್ಕ ಪರಿಶೋಧಕಿ ಮೋಹಿನಿ ಗುಮಾಸ್ತೆ ರೇವತಿ ಉಪಸ್ಥಿತರಿದ್ದರು.
ಪಿಡಿಒ ರಮ್ಯ ಕೆ. ವಂದಿಸಿದರು.

ಗಡಿ ಪ್ರದೇಶದ ವಿಚಿತ್ರ ಸನ್ನಿವೇಶ : ನಮಗೆ ನ್ಯಾಯ ಕೊಡಿ
ನಮ್ಮ ಮನೆ ಮೆನ್ನಬೆಟ್ಟು ಹಾಗೂ ಕಟೀಲು ಪಂಚಾಯಿತಿ ಗಡಿ ಭಾಗದಲ್ಲಿ ಇದೆ ನಮಗೆ ಹಕ್ಕು ಪತ್ರ ಕೊಡಿಸಿ. ಮೆನ್ನಬೆಟ್ಟು ಕಟೀಲು ಪಂಚಾಯಿತಿ ವಿಂಗಡನೆ ಸಮಯದ ಸಂದರ್ಭ ನಾವು ಅಲ್ಲಿಗೂ ಇಲ್ಲಿಗೂ ಸಲ್ಲದಂತಿದ್ದೇವೆ. ಎರಡು ಗ್ರಾಮ ಪಂಚಾಯಿತಿಗಳೂ ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ ನಮ್ಮನ್ನು ನಿರ್ಲಕ್ಷ ಮಾಡದೆ ನಮ್ಮ ಸಮಸ್ಯೆಗೆ ಪರಿಹಾರ ನೀಡಿ ಎಂದು ಬಲ್ಲಣ ನಿವಾಸಿ ರಾಣಿ ತಿಳಿಸಿದಾಗ ಈ ಬಗ್ಗೆ ಇಲಾಖೆಯ ಸರ್ವೆ ಇಂಜಿನಿಯರ್ ಬಂದು ನಿರ್ಣಯ ಮಾಡಲಿ ಎಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು.

Kinnigoli-16021805

Comments

comments

Comments are closed.

Read previous post:
Kinnigoli-16021804
ಸುರಗಿರಿ: ಮಹಾಶಿವರಾತ್ರಿ

ಕಿನ್ನಿಗೋಳಿ: ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಮಹಿಳಾ ಮತ್ತು ಯುವತಿ ಮಂಡಲದ ನೇತೃತ್ವದಲ್ಲಿ ಶನಿಪೂಜೆ ನಡೆಯಿತು.

Close