ಫೆ. 18 ತೋಕೂರು ಆರೋಗ್ಯ ಶಿಬಿರ

ಕಿನ್ನಿಗೋಳಿ: ತೋಕೂರಿನ ಫೇಮಸ್ ಯೂತ್ ಕ್ಲಬ್ ಮತ್ತು ಹಳೆಯಂಗಡಿಯ ಪೂಜಾ ಫ್ರೆಂಡ್ಸ್ ಸಂಯೋಜನೆಯಲ್ಲಿ ಮಂಗಳೂರು ಎ ಜೆ ಆಸ್ಪತ್ರೆ ಸಹಯೋಗದೊಂದಿಗೆ ಫೆ.18 ರ ಭಾನುವಾರ ಬೆಳಿಗ್ಗೆ ತೋಕೂರಿನ ಫೇಮಸ್ ಯೂತ್ ಕ್ಲಬ್ ಆವರಣದಲ್ಲಿ ರಕ್ತದಾನ, ಉಚಿತ ನೇತ್ರ ತಪಾಸಣೆ, ಬೆನ್ನು ನೋವು, ಮಂಡಿ ನೋವು ತಪಾಸಣಾ ಶಿಬಿರ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮ ಜರಗಲಿದೆ. ಶಿಬಿರವನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾ ಉದ್ಘಾಟಿಸಲಿದ್ದು ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಾದ ಸದಸ್ಯ ಎಚ್ ವಸಂತ ಬೆರ್ನಾಡ್, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಜಲಜಾ, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-17021805
ಗುರು ಮೂರ್ತಿಯ ಮೆರವಣಿಗೆ

ಕಿನ್ನಿಗೋಳಿ: ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ ತಾಳಿಪಾಡಿ ನೂತನ ಗುರು ಮಂದಿರ, ಗುರು ಮೂರ್ತಿ ಪ್ರತಿಷ್ಟೆ ಹಾಗೂ 48 ಕಲಶದ ಕುಂಭಾಭಿಷೇಕದ ಪೂರ್ವಬಾವಿಯಾಗಿ ಗುರು ಮೂರ್ತಿಯ ಮೆರವಣಿಗೆ ಕಿನ್ನಿಗೋಳಿ ಸಾರ್ವಜನಿಕ...

Close