ಗುರು ಮೂರ್ತಿಯ ಮೆರವಣಿಗೆ

ಕಿನ್ನಿಗೋಳಿ: ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ ತಾಳಿಪಾಡಿ ನೂತನ ಗುರು ಮಂದಿರ, ಗುರು ಮೂರ್ತಿ ಪ್ರತಿಷ್ಟೆ ಹಾಗೂ 48 ಕಲಶದ ಕುಂಭಾಭಿಷೇಕದ ಪೂರ್ವಬಾವಿಯಾಗಿ ಗುರು ಮೂರ್ತಿಯ ಮೆರವಣಿಗೆ ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಕಟ್ಟೆಯಿಂದ ತಾಳಿಪಾಡಿ ಬಿಲ್ಲವ ಸಂಘದವರೆಗೆ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭ ಕಾರ್ಯಕಾರಿ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ, ಉಪಾಧ್ಯಕ್ಷ ಗಣೇಶ್ ಸುವರ್ಣ, ಕಾರ್ಯದರ್ಶಿ ಹರೀಶ್ ಸಾಲಿಯಾನ್, ಜೊತೆ ಕಾರ್ಯದರ್ಶಿ ಪ್ರಕಾಶ್ ಗುತ್ತಕಾಡು, ಜೀರ್ಣೋದರ ಸಮಿತಿ ಅಧ್ಯಕ್ಷ ವೆಂಕಪ್ಪ ಕೋಟ್ಯಾನ್, ಕಾರ್ಯದರ್ಶಿ ದಿವಾಕರ ಕರ್ಕೇರ, ಕೋಶಾಧಿಕಾರಿ ನವೀನ್ ಬಿ. ಕುಕ್ಯಾನ್, ಮಹಿಳಾ ಮಂಡಳಿ ಅಧ್ಯಕ್ಷೆ ಜಲಜ ಕೋಟ್ಯಾನ್, ಉಪಾಧ್ಯಕ್ಷೆ ಶಹನಾ ಪ್ರಮೋದ್, ಕಾರ್ಯದರ್ಶಿ ವಾಣಿ, ಉದ್ಯಮಿ ಶೇಖರ ಕರ್ಕೇರ ಹೆಜಮಾಡಿ, ಪ್ರಮೋದ್ ಕುಮಾರ್, ಧರ್ಮದರ್ಶಿ ವಿವೇಕಾನಂದ, ತಾಲೂಕು ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು, ಗೀತಾಂಜಲಿ ಸುವರ್ಣ, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ನಾರಾಯಣ ಅಂಚನ್, ಉಮೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17021801 Kinnigoli-17021802 Kinnigoli-17021803 Kinnigoli-17021804 Kinnigoli-17021805

Comments

comments

Comments are closed.

Read previous post:
ಎ.29 : ಕಟೀಲು ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇವರ ಜಂಟಿ ಆಶ್ರಯದಲ್ಲಿ ಸಾಮೂಹಿಕ ವಿವಾಹ ಸಮಾರಂಭವು 2018 ರ ಎಪ್ರಿಲ್...

Close