ಕಮ್ಮಾಜೆ: ಕಟ್ಟಡ ಕಾಮಗಾರಿ ಶಿಲಾನ್ಯಾಸ

ಕಿನ್ನಿಗೋಳಿ: ಮೋರಾರ್ಜಿ ದೇಸಾಯಿ ವಿದ್ಯಾ ಸಂಸ್ಥೆಗೆ ಸಿದ್ದರಾಮಯ್ಯನವರು 9.50 ಕೋಟಿ ರೂಪಾಯಿ ಒದಗಿಸಿದ್ದಾರೆ ವಿದ್ಯಾ ಸಂಸ್ಥೆಗೆ ಇಷ್ಟು ದುಡ್ಡ ಮೊತ್ತದ ಅನುದಾನ ಒದಗಿಸಿದ್ದು ರಾಜ್ಯದ ಇತಿಹಾಸದಲ್ಲೇ ಮೊದಲು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಮಂಗಳವಾರ ಕಮ್ಮಾಜೆ ಮೋರಾರ್ಜಿ ದೇಸಾಯಿ ಶಾಲೆಯ ನೂತನ ಪಿ.ಯು.ಸಿ ವಿಭಾಗಕ್ಕೆ 9.50 ಕೋಟಿ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ಮೂಡಬಿದ್ರೆ ಮೋರಾರ್ಜಿ ವಸತಿ ಶಾಲೆಗೆ 6.50 ಕೋಟಿ ಮತ್ತು 9.50 ಕೋಟಿ ಅನುದಾನ ಒದಗಿಸಿದ್ದು ಇದು ಅತ್ಯಂತ ದೊಡ್ದ ಮೊತ್ತದ ಅನುದಾನವಾಗಿದೆ, ಬಡ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭವಾಗಿದೆ, ಅಂದಿನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಂಜೀವ ಶೆಟ್ಟಿಯವರು ಶಂಕು ಸ್ಥಾಪನೆ ಮಾಡಿ ಇದೀಗ ಉತ್ತಮ ಸವಲತ್ತುಗಳಿಂದ ಕೂಡಿದೆ ಎಂದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ಮಾತನಾಡಿ ಕಮ್ಮಾಜೆಯ ಮೋರಾರ್ಜಿ ದೇಸಾಯಿ ಶಾಲೆ ಉತ್ತಮವಾಗಿ ಕಾರ್ಯಾನಿರ್ವಹಿಸುತ್ತಿದೆ. ಅಲ್ಲದೆ ಇತರ ಪಠ್ಯೇತರ ಚಟುವಟಿಕೆಗಳಿಗೂ ಅಧ್ಯಾಪಕ ವೃಂದ ಪ್ರೋತ್ಸಾಹ ನೀಡುತ್ತಿದೆ ಎಂದರು.
ಈ ಸಂದರ್ಭ ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಸದಸ್ಯೆ ಸುಶೀಲಾ, ಸುನಿಲ್ ಸಿಕ್ವೇರ, ಶೈಲಾ ಸಿಕ್ವೇರ, ಅನಿತಾ, ಯೋಗೀಶ್ ಕೋಟ್ಯಾನ್, ಪದ್ಮಿನಿ ವಸಂತ್, ಸಮಾಜ ಕಲ್ಯಾಣ ಇಲಾಖಾ ಉಪನಿರ್ದೇಶಕಿ ಅನಿತಾ, ತಾಲೂಕು ಸಹಾಯಕ ನಿರ್ದೇಶಕ ಸುನೀತಾ, ಪ್ರಿನ್ಸಿಪಾಲ್ ಡಾ. ಪುಟ್ಟ ಸ್ವಾಮಿ ಮತ್ತಿತರರುಲುಪಸ್ಥಿತರಿದ್ದರು.
ಶಾಲಾ ಶಿಕ್ಷಕ ಪ್ರವೀಣ್ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23021801

Comments

comments

Comments are closed.

Read previous post:
ಅತ್ತೂರು ಅಮಂತ್ರಣ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಮಾರ್ಚ್ 10 ಮತ್ತು 11 ಹಾಗೂ ಮಾರ್ಚ್ 28 ರಿಂದ 31 ವರೆಗೆ ನಡೆಯಲಿರುವ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ನೂತನ ಭಂಡಾರ ಸ್ಥಾನದ ಉದ್ಘಟನೆ, ಪುನ:...

Close