ಗದ್ದಲದ ಗೂಡಾದ ಗ್ರಾಮಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ 2017-18 ರ ದ್ವಿತೀಯ ಹಂತದ ಗ್ರಾಮ ಸಭೆ ಕಾಂಗ್ರೇಸ್ ಬಿಜೆಪಿ ಜಟಾಪಟಿಯೊಂದಿಗೆ 2 ಗಂಟೆ ತಡವಾಗಿ ಆರಂಭಗೊಂಡಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಮಂಗಳವಾರ ನಡೆದ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಆರಂಭಕ್ಕೂ ಮೊದಲೇ ವಾರ್ಡ್ ಸಭೆ ನಡೆಸದೆ ಗ್ರಾಮ ಸಭೆ ನಡೆಸಬಾರದು ಎಂದು ಬಿಜೆಪಿ ಸದಸ್ಯ ದೇವಪ್ರಸಾದ್ ಪುನರೂರು ಹಾಗೂ ಸದಸ್ಯರು, ಗ್ರಾಮಸ್ಥರು ಮತ್ತಿತರರು ಪಟ್ಟು ಹಿಡಿದಾಗ ಬಿಜೆಪಿ ಮತ್ತು ಕಾಂಗ್ರೇಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರತಿಯೊಂದು ವಿಷಯದಲ್ಲಿಯೂ ಪಂಚಾಯಿತಿ ಅಧ್ಯಕ್ಷರು ರಾಜಕೀಯ ಮಾಡುತ್ತಿದ್ದಾರೆ ಪುನರೂರು ವಾರ್ಡ್ ನಲ್ಲಿ ವಾರ್ಡ್ ಸಭೆಯೇ ನಡೆಸದೆ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಿಜೆಪಿ ಬೆಂಬಲಿತ ಆರೋಪಿಸಿದರು ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಧ್ಯಕ್ಷೆ ವಾರ್ಡ್ ಸಭೆ 10 ತಾರೀಖಿಗೆ ನಡೆಸಲು ಉದ್ದೇಶಿಸಿದ್ದು ನಂತರ 14 ರಂದು ನಿರ್ಣಯಿಸಲಾಗಿದೆ . ಆ ವಾರ್ಡ್‌ನ ಸದಸ್ಯರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ ಎಂದು ಹೇಳಿದರು.
ಪಂಚಾಯಿತಿ ಪಿಡಿಓ ಅರುಣ್ ಪ್ರದೀಪ್ ಡಿಸೋಜ ಮಾತನಾಡಿ ವಾರ್ಡ ಸದಸ್ಯರು ಕರೆ ಸ್ವೀಕರಿಸದ ಕಾರಣ ಪಂಚಾಯಿತಿ ರಾಜ್ ಕಾನೂನಿನಂತೆ ನಾವು ವಾರ್ಡ್ ಸಭೆ ನಡೇಸಿದ್ದೇವೆ ಎಂದರು. ನಮ್ಮ ವಾರ್ಡ್ ನಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆ ಸಮಸ್ಯೆಗಳಿಗೆ ಸದಸ್ಯರಾದ ನಾವು ಉತ್ತರಿಸಬೇಕಾಗಿದೆ ಮೊದಲಿಗೆ ವಾರ್ಡ್ ಸಭೆ ನಡೆಸಿ ನಂತರ ಗ್ರಾಮ ಸಭೆಗೆ ದಿನ ನಿಗದಿ ಪಡಿಸಿ ಗ್ರಾಮ ಸಭೆ ಮಾಡಿ ಎಂದು ಬಿಜೆಪಿ ಬೆಂಬಲಿತ ಪಂಚಾಯಿತಿ ಸದಸ್ಯರು ಗ್ರಾಮ ಸಭೆ ಮುಂದುವರಿಯದಂತೆ ಪಟ್ಟು ಹಿಡಿದರು. ಮೂರು ಮೂರು ಬಾರಿ ಗ್ರಾಮ ಸಭೆ ನಡೆಸಲು ಪಂಚಾಯಿತಿ ಅಧ್ಯಕ್ಷರು ಅನುವಾದಾಗ ಅಧ್ಯಕ್ಷರ ವಿರುದ್ದವೇ ದಿಕ್ಕಾರ ಕೂಗಿ ಸಭೆಗೆ ತಡೆ ಒಡ್ಡಿದ್ದರು.
ಮೂಲ್ಕಿ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರು ಪಂಚಾಯಿತಿಗೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರೂ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಕೆಲ ಗ್ರಾಮಸ್ಥರು ತಮ್ಮ ಪಟ್ಟು ಸಡಿಲಿಸಲಿಲ್ಲ, ಸಭೆ ಮುಂದುವರಿಯಬೇಕೋ ಬೆಡವೋ ಅದು ನಿಮ್ಮಲ್ಲಿ ತೀರ್ಮಾನವಾಗಬೇಕು ನಮ್ಮದು ಕೇವಲ ರಕ್ಷಣೆ ಒದಗಿಸುವ ಕೆಲಸವಷ್ಟೆ ಎಂದು ಹೇಳಿದರು, ನೋಡೆಲ್ ಅಧಿಕಾರಿಯವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ಪಟ್ಟರು ಪ್ರಯೋಜನ ಕಾಣಲಿಲ್ಲ, 2 ಗಂಟೆ ಈ ಜಟಾಪಟಿ ಮುಂದುವರಿದ ನಂತರ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ನನ್ನದೇನು ತಪ್ಪಿಲ್ಲ ಎಂಬುದೂ ನನ್ನ ಭಾವನೆ, ನನ್ನದೆನಾದರೂ ತಪ್ಪಿದ್ದರೆ ಕ್ಷಮಿಸಿ ಎಂದು ಕ್ಷಮೆ ಯಾಚಿಸಿದ ನಂತರ ಗ್ರಾಮ ಸಭೆ ಪ್ರಾರಂಭವಾಯಿತು.
ಗ್ರಾಮ ಪಂಚಾಯಿತಿ ವಾರ್ಡ್ 4 ರಲ್ಲಿ ಕಸದ ತ್ಯಾಜ್ಯ ಸಮಸ್ಯೆ ಇದೆ ಎಂದು ಕಳೆದ 3 ವರ್ಷಗಳಿಂದ ತಿಳಿಸಲಾಗಿದೆ, ಹಾಗೂ ಪ್ರತಿ ಗ್ರಾಮ ಸಭೆ , ವಾರ್ಡ್ ಸಭೆಯಲ್ಲಿ ತಿಳಿಸಿದರು ಪ್ರಯೋಜನವಾಗಿಲ್ಲ ಅಧಿಕಾರಿ ವರ್ಗವು ಕೂಡ ಜಾರಿ ಕೊಳ್ಳುತ್ತಾರೆ ಯಾಕೆ ಎಂದು ಗ್ರಾಮಸ್ಥ ಜೊಸೆಫ್ ಕ್ವಾಡ್ರಸ್ ತಿಳಿಸಿದಾಗ ಈ ಬಗ್ಗೆ ಗಮನ ಹರಿಸಲಾಗಿದೆ ಕೆಲವೊಂದು ತಾಂತ್ರಿಕ ಸಮಸ್ಯೆಯಿದೆ ಎಂದು ಪಿಡಿಒ ಅರುಣ್ ಪ್ರದೀಪ್ ಡಿಸೋಜ ಹೇಳಿದರು.
ಬಾಬಾಕೋಡಿ ಪರಿಸರದಲ್ಲಿ ಹಲವು ಮನೆಗಳಿಗೆ ನೀರಿನ ಸಮಸ್ಯೆ ಇದೆ , ನವಂಬರ ತಿಂಗಳಿನಿಂದ ನೀರು ಬರುತ್ತಿಲ್ಲ ಯಾಕೇ ನಾವು ಗ್ರಾಮಸ್ಥರಲ್ಲವೇ ಯಾಕೇ ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ ಕೇವಲ 1 ಗಂಟೆ ನೀರು ಬಿಟ್ಟರೆ ಸಾಕಾಗುವುದಿಲ್ಲ ಎಂದು ಪವಿತ್ರ ಹಾಗೂ ಇನ್ನಿತರರು ದೂರಿದರು ಅದಕ್ಕೆ ಪಂಚಾಯಿತಿ ಅಧ್ಯಕ್ಷೆ ಮಾತನಾಡಿ ನೀರಿನ ಸಮಸ್ಯೆ ಇದೆ, ನೀರು ಬಿಡುವವರಿಗೂ ತಿಳಿಸಲಾಗಿದೆ
ಎಳತ್ತೂರು ಗ್ರಾಮದಲ್ಲಿ ಖಾಸಗಿ ಸ್ಥಳದಲ್ಲಿ ಬೊರವೆಲ್ ಹಾಕಿದ್ದಾರೆ, ಹಾಗೂ ಗುತ್ತಕಾಡು ತಿರುವಿನ ರಸ್ತೆಯ ಬದಿಯ ಕೆರೆಗೆ ತಡೆಗೋಡೆ ಇಲ್ಲ ಕಳೆದ ಕಲವು ದಿನಗಳಿಂದ ದ್ವಿಚಕ್ರದಲ್ಲಿ ಸಾಗುತ್ತಿದ್ದ ಮಗು ಮತ್ತು ಮಹಿಳೆ ಕೆರೆಗೆ ಬಿದ್ದ ಘಟನೆ ನಡೆದಿದೆ ಹಾಗೂ ಅಲ್ಲಿನ ಮುಂದಿನ ಕೋಲ್ಲೂರು ಪದವು ರಸ್ತೆ ಶೋಚನಿಯವಾಗಿದೆ. ಕೆರೆ ಖಾಸಗಿ ಜಾಗದಲ್ಲಿ ಇದೆ ಹಾಗಾಗಿ ನಾವು ಪಂಚಾಯಿತಿನಿಂದ ವೆಚ್ಚ ಮಾಡುವಂತಿಲ್ಲ, ರಸ್ತೆ ದುರಸ್ಥಿಗೆ ಜಿಲ್ಲಾ ಪಂಚಾಯಿತಿಗೆ ತಿಳಿಸಲಾಗುವುದು ಎಂದು ಪಿಡಿಒ ಅರುಣ್ ಪ್ರದೀಪ್ ಡಿಸೋಜ ತಿಳಿಸಿದರು.
ತೆರಸ ರಸ್ತೆಯಲ್ಲಿ ಸಂತೆ
ಕಿನ್ನಿಗೋಳಿ ಮಾರ್ಕೆಟ್ ಹೊಸ ಕಟ್ಟಡ ಆಗಿದೆ ಆದರ ಮೊದಲು ಕಟ್ಟಡ ಆಗಲಿ ಮತ್ತೆ ರಸ್ತೆಯಲ್ಲಿ ಸಂತೆ ವ್ಯಾಪರ ಮಾಡುವುದಿಲ್ಲ ಎಂದು ಹೇಳಿದ್ದರು ಆದರೆ ಈಗ ನಮಗೆ ಅಲ್ಲಿನ ಗ್ರಾಮಸ್ಥರಿಗೆ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಲ್ಯಾನ್ಸಿ ಡಿಸೋಜ ತಿಳಿಸಿದಾಗ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ತಿಳಿಸಿದರು.

ಕಿಂಡಿ ಅಣೆಕಟ್ಟುವಿಗೆ ಹಲಗೆ ಹಾಕಿದ ಹಣ ಇನ್ನು ಬಂದಿಲ್ಲ
ಪುನರೂರು ಮಸೀದಿಯ ಬಳಿಯಲ್ಲಿ ಕಿಂಡಿ ಅಣೆ ಕಟ್ಟುವಿಗೆ ನನ್ನ ಸ್ವಂತ 20,000 ರೂ ಹಣದಲ್ಲಿ ಹಲಗೆ ಹಾಕಲಾಗಿದೆ, ಪಂಚಾಯಿತಿನಿಂದ ಕೊಡಲಾಗುವುದು ಎಂದು ತಿಳಿಸಿದ್ದರು. ಆದರೇ ಯಾಕೆ ಕೊಟ್ಟಿಲ್ಲ ಸರಕಾರ ಕೃಷಿ ಕಾರ್ಯಕ್ಕೆ ಅಷ್ಟು ಸವಲತ್ತು ನೀಡುತ್ತಿದೆ ಆದರೇ ಇದಕ್ಕೆ ಹಣ ಇಲ್ಲವೆ ಅಲ್ವಿನ ಕೇಳಿದಾಗ ಈ ಕಿಂಡಿ ಅಣೆಕಟ್ಟು ಜಲಾನಯನ ಇಲಾಖೆಯಿಂದ ಮಾಡಿದ್ದು ಈ ಸಂದರ್ಭ ಸಮಿತಿ ರಚಿಸಲಾಗಿದೆ ಸಮಿತಿಯ ಮೂಲಕವಾಗಿ ಹಣದ ವ್ಯವಸ್ಥೆ ಮಾಡಲಾಗುವುದು ಎಂದು ನೋಡಲ್ ಅಧಿಕಾರಿ ಹಾಗೂ ಪಿಡಿಒ ತಿಳಿಸಿದರು.
ಕಿನ್ನಿಗೋಳಿಯಲ್ಲಿ ಮಾರುಕಟ್ಟೆ ಹಾಗೂ ಬಸ್ ನಿಲ್ದಾಣದಲ್ಲಿಶೌಚಾಲಯ ಸರಿ ಇಲ್ಲ ಎಲ್ಲಾ ಮಾರ್ಕೆಟ್ ಹಿಂದುಗಡೆ ಶೌಚಕ್ಕೆ ಬುರುತ್ತಾರೆ ಯಾಕೇ ಈ ಸಮಸ್ಯೆ ಹಾಗೂ ಬಿತ್ತುಲ್ ಪರಿಸರದಲ್ಲಿ ದ್ರವತ್ಯಾಜ್ಯ ಘಟಕ ನಿರ್ಮಾಣ ಆಗಿದೆ ಆದರೇ ಬಸ್ ನಿಲ್ದಾಣದ ಶೌಚಾಲಯದ ನೀರು ಅದರಕ್ಕೆ ಯಾಕೇ ಜೋಡಣೆ ಆಗಿಲ್ಲ ತರೆದ ಚರಂಡಿಯಲ್ಲಿ ಹರಿಯುತ್ತಿದೆ ಯಾಕೇ ಎಂದು ಲ್ಯಾನ್ಸಿ ಕೇಳಿದಾಗ ಈ ವಿಷಯದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಡಿಒ ತಿಳಿಸಿದರು.
ನಮ್ಮ ಯಾವ ಕಾರ್ಯಕ್ರಮಕ್ಕೆ ಕರೆದರೂ ಅಧ್ಯಕ್ಷರು ಬರುತ್ತಿಲ್ಲ ಯಾಕೇ ನಾವು ಏನು ಅಂತಾಹ ತಪ್ಪು ಮಾಡಿದ್ದೇವೆ, ಹೈಮಾಸ್ಟ್ ದೀಪ ಉದ್ಘಾಟನೆಗೂ ಕರೆಯಲಾಗಿದೆ ಬಂದಿಲ್ಲ ಎಂದು ಗ್ರಾಮಸ್ಥ ಕಪಿಲ ಅಂಚನ್ ಕೇಳಿದಾಗ ನನಗೆ ಯಾರ ಮೇಲೂ ಕೋಪ ಇಲ್ಲ ಆದರೇ ಹೈಮಾಸ್ ದೀಪದ ವಿಷಯದಲ್ಲಿ ಅಲ್ಲಿನ ವಾರ್ಡ್ ಸದಸ್ಯರು ಕರೆದಿಲ್ಲ ಎಂದು ವಾದವನ್ನು ಅಧ್ಯಕ್ಷರು ಮುಂದಿಟ್ಟಾಗ ದೇವಪ್ರಸಾದ್ ಮದ್ಯ ಪ್ರವೇಶ ಮಾಡಿ ವಾರ್ಡ್ ಸದಸ್ಯರು ಕರೆಯದೆ ಬರುದಿಲ್ಲ ಆದರೇ ನಮ್ಮನ್ನು ಬಿಟ್ಟು ವಾರ್ಡ್ ಸಭೆ ಮಾಡಲಾಗಿದೆ ಆದು ಹೇಗೆ ಎಂದು ಕೇಳಿ ಮಾತಿನ ಚಕಮಕಿ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯರಾದ ದಿವಾಕರ ಕರ್ಕೇರಾ, ಶರತ್ ಕುಬೆವೂರು, ಶಿಕ್ಷಣ ಇಲಾಖಾ ರಾಮದಾಸ ಭಟ್, ಆರೋಗ್ಯ ಇಲಾಖಾ ಡಾ.ಮಾಧವ ಕಿಣಿ, ಹೆದ್ದಾರಿ ಇಲಾಖಾ ರವಿ ಕುಮಾರ್, ಗೋಪಾಲ್, ತೋಟಗಾರಿಕೆ ಇಲಾಖಾ ಅಬ್ದುಲ್ ಬಶೀರ್, ಪ್ರದೀಪ್ ಕುಮಾರ್, ಪೂರ್ಣಿಮ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಸದಸ್ಯರಾದ ರವೀಂದ್ರ, ಸೇವಂತಿ, ಶಾಲಿನಿ, ಸುಲೋಚನಾ ಶೆಟ್ಟಿಗಾರ್, ಹೇಮಲತಾ, ಪೂರ್ಣಿಮ , ಶರತ್, ಚಂದ್ರಶೇಕರ್, ಟಿ. ಎಚ್ ಮಯ್ಯದ್ದಿ , ಜೋನ್ಸನ್ ಡಿಸೋಜ, ಸುನೀತಾ ಶ್ಯಾಮಲ ಹೆಗ್ಡೆ, ವಾಣಿ, ಸಂತಾನ್ ಡಿಸೋಜ, ಅರುಣ್ , ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಪಿಡಿಒ ಅರುಣ್ ಪ್ರದೀಪ್ ಡಿಸೋಜ ವಂದಿಸಿದರು.

Kinnigoli-23021802

Comments

comments

Comments are closed.

Read previous post:
Kinnigoli-23021801
ಕಮ್ಮಾಜೆ: ಕಟ್ಟಡ ಕಾಮಗಾರಿ ಶಿಲಾನ್ಯಾಸ

ಕಿನ್ನಿಗೋಳಿ: ಮೋರಾರ್ಜಿ ದೇಸಾಯಿ ವಿದ್ಯಾ ಸಂಸ್ಥೆಗೆ ಸಿದ್ದರಾಮಯ್ಯನವರು 9.50 ಕೋಟಿ ರೂಪಾಯಿ ಒದಗಿಸಿದ್ದಾರೆ ವಿದ್ಯಾ ಸಂಸ್ಥೆಗೆ ಇಷ್ಟು ದುಡ್ಡ ಮೊತ್ತದ ಅನುದಾನ ಒದಗಿಸಿದ್ದು ರಾಜ್ಯದ ಇತಿಹಾಸದಲ್ಲೇ ಮೊದಲು ಎಂದು...

Close