ಹಕ್ಕುಪತ್ರ ನೀಡಿಕೆಯಿಂದ ಬಡವರ ಕನಸು ನನಸಾಗಿದೆ

ಕಿನ್ನಿಗೋಳಿ: ಯಾವುದೇ ರಾಜ್ಯದಲ್ಲಿ ಇಲ್ಲದ ಅನ್ನಬಾಗ್ಯ ಯೋಜನೆಯಿಂದ ಸಿದ್ದರಾಮಯ್ಯನವರ ಸರಕಾರ ಮಾದರಿಯಾಗಿದೆ. ಹಲವು ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು ಈ ವರ್ಷ ಹೆಚ್ಚಿನ ಜನರಿಗೆ ಹಕ್ಕುಪತ್ರ ಲಭಿಸಿದೆ, ಬಡವರ ಬಹಳ ದಿನದ ಕನಸು ನನಸಾಗಿದೆ, ಸಿದ್ದರಾಮಯ್ಯನವರ ಸರಕಾರ ಅನ್ನಬಾಗ್ಯ, ಕ್ಷೀರ ಬಾಗ್ಯ ಮತ್ತಿತರ ಸಮಾಜಮುಖಿ ಕೆಲಸದಿಂದ ಜನ ಮೆಚ್ಚುಗೆಯ ಸರಕಾರವಾಗಿದೆ ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ವ್ಯಾಪ್ತಿಯ 101 ಜನರು 94ಸಿಸಿಯಲ್ಲಿ ಅರ್ಜಿ ಸಲ್ಲಿಸಿದ್ದು ೮೭ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭ ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಶರತ್ ಕುಬೆವೂರು, ಕಿನ್ನಿಗೋಳಿ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರ್ತಿ, ಪಂಚಾಯಿತಿ ಸದಸ್ಯರಾದ ಅರುಣ್ ಕುಮಾರ್, ಸುನೀತಾ ರೋಡ್ರಿಗಸ್, ಸಂತೋಷ್, ಚಂದ್ರಶೇಖರ್, ಟಿ.ಎಚ್ ಮಯ್ಯದಿ, ಸಂತಾನ್ ಡಿಸೋಜ, ಪೂರ್ಣಿಮ, ಗ್ರಾಮಕರಣಿಕ ಕಿರಣ್, ವಿಶೇಷ ತಹಶೀಲ್ದಾರ್ ಮಾಣಿಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರದೀಪ್ ರೋಡ್‌ಕರ್ ಸ್ವಾಗತಿಸಿದರು. ಪಂಚಾಯಿತಿ ಪಿಡಿಒ ಅರುಣ ಪ್ರದೀಪ್ ಡಿಸೋಜ ವಂದಿಸಿದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-23021803

Comments

comments

Comments are closed.

Read previous post:
Kinnigoli-23021802
ಗದ್ದಲದ ಗೂಡಾದ ಗ್ರಾಮಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ 2017-18 ರ ದ್ವಿತೀಯ ಹಂತದ ಗ್ರಾಮ ಸಭೆ ಕಾಂಗ್ರೇಸ್ ಬಿಜೆಪಿ ಜಟಾಪಟಿಯೊಂದಿಗೆ 2 ಗಂಟೆ ತಡವಾಗಿ ಆರಂಭಗೊಂಡಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ...

Close