ಕಮ್ಮಜೆ ಭಜನಾ ಮಂಗಳೋತ್ಸವ

ಕಿನ್ನಿಗೋಳಿ : ಏಕಾಗ್ರತೆಯ ಭಜನೆಯಿಂದ ಭಗವಂತನನ್ನು ಕಾಣಬಹುದು ಎಂಬುದಕ್ಕೆ ದಾಸ ಶ್ರೇಷ್ಟರು ಉದಾಹರಣೆ. ಪ್ರತಿ ಮನೆಯಲ್ಲಿ ಭಜನೆ ನಡೆಯಬೇಕು ನಮ್ಮ ಸಂಸ್ಕೃತಿ ಧಾರ್ಮಿಕತೆ ಉಳಿಸಿ ಮುಂದಿನ ಪೀಳಿಗಗೆ ತಲುಪಿಸಬೇಕು ಎಂದು ತಾಳಿಪಾಡಿ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ ಹೇಳಿದರು.
ಶನಿವಾರ ಕಮ್ಮಜೆ ನೇಕಾರ ಕಾಲೋನಿ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ರಂದು ಆಹೋರಾತ್ರಿ ಭಜನೆ ಹಾಗೂ ತೃತೀಯ ವರ್ಷದ ಭಜನಾ ಮಂಗಲೋತ್ಸವದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಯುಗಪುರುಷದ ಕೆ. ಭುವನಾಭಿರಾಮ ಉಡುಪ, ತಾಲೂಕು ಪಂಚಾಯಿತಿ ಅಧ್ಯಕ್ಷ ದಿವಾಕರ ಕರ್ಕೇರಾ, ಹೋಟೆಲ್ ಉದ್ಯಮಿ ಮೋಹನ್ ಸುವರ್ಣ, ಭಜನಾ ಮಂದಿರದ ಅಧ್ಯಕ್ಷ ನಾಗೇಶ ದೇವಾಡಿಗ, ಕಾರ್ಯದರ್ಶಿ ವಿಶ್ವನಾಥ ಸಿ, ಉಪಾಧ್ಯಕ್ಷ ದಾಮೋದರ ಶೆಟ್ಟಿಗಾರ್, ಕೋಶಾಧಿಕಾರಿ ಉಷಾದಾಸ್, ಜೊತೆಕಾರ್ಯದರ್ಶಿ ಸುನೀತ ದೇವಾಡಿಗ, ಶಿವರಾಮ ಆಚಾರ್ಯ, ಅರ್ಚಕ ಪುರಂದರ ಶೆಟ್ಟಿಗಾರ್, ಯಶೋದ, ಆಶಾಲತಾ, ಸುಜಾತಾ, ಹರಿಣಾಕ್ಷಿ, ಚಂದ್ರಶೇಖರ ಬಿ, ದೇವದಾಸ, ಚಂದ್ರಶೇಖರ ಎಸ್, ಸತೀಶ್ ಪೂಂಜ, ವೇದಾವತಿ, ಮಮತಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-24021707

Comments

comments

Comments are closed.

Read previous post:
Kinnigoli-24021706
ಏಳಿಂಜೆ -ಮಾನಂಪಾಡಿ -ಮುಲ್ಕಿ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಕಾರದ ಜನಪರ ಕಾರ್ಯಕ್ರಮಗಳಿಂದ ಗ್ರಾಮೀಣ ರಸ್ತೆಗಳಿಗೆ ಒತ್ತು ಕೊಟ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರಜೈನ್ ಹೇಳಿದರು....

Close