ಮರ ಬಿದ್ದು ವಿದ್ಯುತ್ ಪರಿವರ್ತಕಕ್ಕೆ ಹಾನಿ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಚಿಗುಡ್ಡೆ ಬಳಿ ಕುಂರ್ಬಿಲ್ ಹೋಗುವ ರಸ್ತೆಯಲ್ಲಿ ಶುಕ್ರವಾರ ಸಂಜೆ ಹೊಂಗೆ ಮರ ಬಿದ್ದು 7 ವಿದ್ಯುತ್ ಕಂಬಗಳು ಸಹಿತ ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿ ಸುಮಾರು 2 ಲಕ್ಷರೂ ನಷ್ಟ ಉಂಟಾಗಿದೆ.
ಕುಂರ್ಬಿಲ್ ಕಡೆಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದು ಸಂಚಾರ ವ್ಯತಯವಾಗಿದೆ. ಕುಂರ್ಬಿಲ್ ಪರಿಸರದ ಸುಮಾರು 20 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಸ್ಥಳಕ್ಕೆ ಮೂಲ್ಕಿಯ ಮೆಸ್ಕಾಂ ಕಚೇರಿಯ ಹಿರಿಯ ಅಧಿಕಾರಿ ರಾಮಕೃಷ್ಣ ಐತಾಳ್ ಹಾಗೂ ಕಿನ್ನಿಗೋಳಿ ವಿಭಾಗದ ಚಂದ್ರಹಾಸ್ , ಸುಧಾಕರ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.

Kinnigoli-24021705

Comments

comments

Comments are closed.

Read previous post:
Kinnigoli-24021704
ಸಸಿಹಿತ್ಲು – ಚಂಡಿಕಾಯಾಗ

ಕಿನ್ನಿಗೋಳಿ: ಸಸಿಹಿತ್ಲು ಶ್ರೀ ಭಗವತೀ ದೇವಳದಲ್ಲಿ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ಚಂಡಿಕಾಯಾಗ ನಡೆಯಿತು. ಕ್ಷೇತ್ರದ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ, ಆಡಳಿತ ಮಂಡಳಿಯ ವಾಮನ ಇಡ್ಯಾ, ಸಾರಂತಾಯ ಗರೋಡಿಯ...

Close