ಎನ್ ಪಿ ಶೆಟ್ಟಿ

ಮೂಲ್ಕಿ: ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಿರಿಯ ಸಾಹಿತಿ ನಾರಾಯಣ ಪಿ ಶೆಟ್ಟಿ(ಎನ್ ಪಿ ಶೆಟ್ಟಿ) (71)ಯವರು ಅನಾರೋಗ್ಯದಿಂದ ಶುಕ್ರವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಬ್ರ್ಯೆನ್ ಹೆಮರೇಜ್ ಆಗಿ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಎನ್. ಪಿ. ಶೆಟ್ಟಿ ಹುಟ್ಟಿದ್ದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಾದೂರು ತೆಂಕರಗುತ್ತುನಲ್ಲಿ ಮೂಲ್ಕಿ ಕಾರ್ನಾಡಿನ ಕನ್ನಡರಬೆಟ್ಟು ಐಸಿರಿಯಲ್ಲಿ ವಾಸವಾಗಿದ್ದರು. ತಂದೆ ದಿ. ಕುಬೆವೂರು ಮೂಡುಮನೆ ಪುಟ್ಟಣ್ಣ ಶೆಟ್ಟಿ ಅರ್ಥಧಾರಿ, ಪ್ರಸಂಗಕರ್ತ, ಪುರಾಣ ಪ್ರವಚನಕಾರ ಪೊಳಲಿ ಶಾಸ್ತ್ರಿ ಪ್ರಶಸ್ತಿ ಸಂನ್ಮಾನಿತರಾಗಿದ್ದು ತಾಯಿ ಪಾದೂರು ತೆಂಕರಗುತ್ತು ಕಿಟ್ಟಿ ಶೆಟ್ಟಿ ಮೂಲ್ಕಿ ಸರ್ಕಾರಿ ಫ್ರೌಢ ಶಾಲೆಯಲ್ಲಿ ಮಾಧ್ಯಮಿಕ ಹಂತದ ಶಿಕ್ಷಣ,1972 ರಲ್ಲಿ ಅರ್ಥಶಾಸ್ತ್ರದಲ್ಲಿ ಮುಂಬೈ ಪಾರ್ಲೇ ಕಾಲೇಜಿನಲ್ಲಿ ಪದವಿ, ಮುಂಬೈ ವಿ ವಿ ಯಲ್ಲಿ 1974ರಲ್ಲಿ ಕನ್ನಡ ಸಾಹಿತ್ಯ ಮತ್ತು ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂಬಾಯಿ ಕೆ.ಪಿ.ಬಿ. ಹಿಂದುಜಾ ಕಾಲೇಜು, ಬಿ.ಇ.ಎಸ್. ಕಾಲೇಜು ಮತ್ತು ಸಿದ್ಧಾರ್ಥ ಕಾಲೇಜುಗಳಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಅನುಭವ. ಸುಮಾರು ಎರಡು ದಶಕಕ್ಕೂ ಹೆಚ್ಚು ಮುಂಬೈ ವಾಸ. ವಿಜಯಾ ಬ್ಯಾಂಕ್ ಅಧಿಕಾರಿ, ಶಾಖಾಧಿಕಾರಿ ಮತ್ತು ಪ್ರಶಿಕ್ಷಣ ಕೇಂದ್ರದಲ್ಲಿ ತರಬೇತುದಾರರಾಗಿ ಒಟ್ಟು 26 ವರ್ಷಗಳ ಸೇವೆ ಮತ್ತು ಸ್ವಯಂ ನಿವೃತ್ತಿ. ಪ್ರಶಿಕ್ಷಕನಾಗಿ ಎರಡು ವರ್ಷದ ಅನುಭವ ಹೊಂದಿದ್ದರು. ಸ್ಥಾಪಕ ಅಧ್ಯಕ್ಷ, ಶಾಂಭವಿ ಸಾಹಿತ್ಯ ಕಲಾವೇದಿಕೆ ಮೂಲ್ಕಿ, ಸಂಚಾಲಕ -ಕುಬೆವೂರು ಪುಟ್ಟಣ್ಣ ಶೆಟ್ಟಿ ಯಕ್ಷಗಾನ ಸಾಹಿತ್ಯ ಪ್ರಶಸ್ತಿ ಸಮಿತಿ, ಮುಂಬಾಯಿ ಮತ್ತು ಕರ್ನಾಟಕ ಅನೇಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಘಟನೆಗಳ ಸಕ್ರಿಯ ಸದಸ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯ, ವರ್ಧಮಾನ ಪ್ರಶಸ್ತಿ ಸಮಿತಿ ಸದಸ್ಯ, ಅಲ್ಲಮಪ್ರಭು ಪೀಠ(ಕಾಂತಾವರ)ದ ಸದಸ್ಯ, *ನುಡಿಸಿರಿ ಸಮಿತಿ* (ಆಳ್ವಾಸ್ ಮೂಡಬಿದ್ರಿ) ಇದರ ಸದಸ್ಯ,ಇನ್ನೂ ಅನೇಕ ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಸದಸ್ಯ. ಯೋಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂಲ್ಕಿ ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷ ಮತ್ತು ಅದರ ಮುಖವಾಣಿ ಮೂಲಿಕಾದ ಸಂಪಾದಕ. 2013-14ರ ರೋಟರಿ ಜಿಲ್ಲೆ 3180ವಲಯ 3ರ ವಲಯ ಸೇನಾನಿಯಾಗಿ ಸೇವೆ ಸಲ್ಲಿಸಿದ್ದು ಹಲವಾರು *ಪ್ರಾಣಾಯೋಗ* ತರಬೇತಿ ಶಿಬಿರಗಳನ್ನು ನಡೆಸಿದ ಅನುಭವ ಹೊಂದಿದ್ದರು., ಮೂಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಇದರ ಸಂಚಾಲಕರಾಗಿ ಸೇವೆ (2017) ಪ್ರಸ್ತುತ ಸೇವೆ ಸಲ್ಲಿಸುತ್ತದ್ದರು, ಮುಂಬೈ ಮತ್ತು ಕರ್ನಾಟಕದಲ್ಲಿ ಸುಮಾರು 250 ಕ್ಕಿಂತಲೂ ಹೆಚ್ಚು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ಸಂಪಾದಿತ ಕೃತಿಗಳು(ಇತರರೊಂದಿಗೆ): ಬಪ್ಪನಾಡಮ್ಮ ,. ಶ್ರೀ ಕ್ಷೇತ್ರ ಶಿಮಂತೂರು (ಕ್ಷೇತ್ರ ಪರಿಚಯ) .. ಹರಿಹರ ದರ್ಶನ .. ಯೋಗಾನುಭವ (ಒಬ್ಬನೇ)ಪುರಸ್ಕಾರಗಳು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ *ತಪ್ಪುಗು ತರೆದಂಡ* ಕಾವ್ಯಕ್ಕೆ ಅತ್ಯುತ್ತಮ ಕೃತಿ ಪ್ರಶಸ್ತಿ (2004), ತುಳು ಮಹನೀಯರ್ ಪ್ರಶಸ್ತಿ (ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ – 2007), 2013ರ ಗಡಿನಾಡ ಸಾಹಿತ್ಯ ಸಮ್ಮೇಳನಾಧ್ಯಕ್ಷ – (ಕನ್ಯಾನ – ಅಧ್ಯಕ್ಷತನ ಮತ್ತು ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿದೆ.

Kinnigoli-24021701

Comments

comments

Comments are closed.

Read previous post:
Kinnigoli-23021803
ಹಕ್ಕುಪತ್ರ ನೀಡಿಕೆಯಿಂದ ಬಡವರ ಕನಸು ನನಸಾಗಿದೆ

ಕಿನ್ನಿಗೋಳಿ: ಯಾವುದೇ ರಾಜ್ಯದಲ್ಲಿ ಇಲ್ಲದ ಅನ್ನಬಾಗ್ಯ ಯೋಜನೆಯಿಂದ ಸಿದ್ದರಾಮಯ್ಯನವರ ಸರಕಾರ ಮಾದರಿಯಾಗಿದೆ. ಹಲವು ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಜನರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು ಈ ವರ್ಷ ಹೆಚ್ಚಿನ ಜನರಿಗೆ ಹಕ್ಕುಪತ್ರ...

Close