ಫೆ. 26-ಮಾ.3: ಕಲ್ಲಾಪು ಜಾತ್ರಾ ಮಹೋತ್ಸವ

ಕಿನ್ನಿಗೋಳಿ : ಪಡುಪಣಂಬೂರು ಗ್ರಾಮದ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನದಲ್ಲಿ ಫೆ.26ರಿಂದ ಮಾ.3ರವರೆಗೆ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಾರಿಪೂಜಾ ಮಹೋತ್ಸವ ಜರಗಲಿದೆ.
ಫೆ.27ರಂದು ಗಣಹೋಮ, ಕಲಾಶಾಭಿಷೇಕ, ಧ್ವಜಾರೋಹಣ, ಸಂಜೆ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದಿಂದ ಅಭಿಮನ್ಯು ಕಾಳಗ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಫೆ. 28ರಂದು ಸಾಮೂಹಿಕ ಹೂವಿನ ಪೂಜೆ, ಬಲಿ ಉತ್ಸವ ಸಂಜೆ ಸಸಿಹಿತ್ಲುವಿನ ರಂಗ ಸುದರ್ಶನ ತಂಡದಿಂದ ಮಾಯದ ದೆವಂಗಲೂ ತುಳು ಗೀತಾ ನಾಟಕ ಪ್ರದರ್ಶನಗೊಳ್ಳಲಿದೆ.
ಮಾರ್ಚ್ 1ರಂದು ವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವ, ಧ್ವಜಾವರೋಹಣ, ಸಂಜೆ ನಿತಿನ್‌ಕುಮಾರ್ ಮೂಲ್ಕಿ ತಂಡದಿಂದ ಭಕ್ತಿಗಾನ ಸುಧೆ, ಮಾ.೨ರಂದು ಚಂಡಿಕಾಯಾಗ, ಮಾರಿಪೂಜಾ ಮಹೋತ್ಸವ, ಸಂಜೆ ಅಂಧ ಕಲಾವಿದ ಬಸವರಾಜ್ ಹುಬ್ಬಳ್ಳಿ ಅವರ ಜನನಿ ಮೆಲೋಡಿಸ್ ಅವರಿಂದ ವೈವಿಧ್ಯಮಯ ಸಂಗೀತ ಕಾರ್ಯಕ್ರಮವು ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕ ಮಂಡಲದ ಸಹಕಾರದಲ್ಲಿ ಜರಗಲಿದೆ. ಪ್ರತಿದಿನ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-24021707
ಕಮ್ಮಜೆ ಭಜನಾ ಮಂಗಳೋತ್ಸವ

ಕಿನ್ನಿಗೋಳಿ : ಏಕಾಗ್ರತೆಯ ಭಜನೆಯಿಂದ ಭಗವಂತನನ್ನು ಕಾಣಬಹುದು ಎಂಬುದಕ್ಕೆ ದಾಸ ಶ್ರೇಷ್ಟರು ಉದಾಹರಣೆ. ಪ್ರತಿ ಮನೆಯಲ್ಲಿ ಭಜನೆ ನಡೆಯಬೇಕು ನಮ್ಮ ಸಂಸ್ಕೃತಿ ಧಾರ್ಮಿಕತೆ ಉಳಿಸಿ ಮುಂದಿನ ಪೀಳಿಗಗೆ...

Close