ಫೆ. 25-ಮಾ.5 : ಶಿಮಂತೂರು ಜಾತ್ರಾ ಮಹೋತ್ಸವ

ಮೂಲ್ಕಿ: ಶಿಮಂತೂರಿನ ಶ್ರೀ ಆದಿ ಜನಾರ್ದನ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ತಾಮ್ರಾಚ್ಚಾದಿತ ಗೋಪುರ. ಸುತ್ತು ಪೌಳಿ ಮತ್ತು ಭಿತ್ತಿ ಶಿಲ್ಪಗಳ ಲೋಕಾರ್ಪಣೆ ಸಮಾರಂಭವು ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಫೆಬ್ರವರಿ 25ರಿಂದ ಮಾರ್ಚ್ 5 ರ ವರೆಗೆ ನಡೆಯಲಿದ್ದು ಉತ್ಸವ ಸಂದರ್ಭದಲ್ಲಿ ಶಿಮಂತೂರಿನ ಶ್ರೀ ಆದಿ ಜನಾರ್ದನ ಯುವಕ ಮಂಡಲದ ವತಿಯಿಂದ ಪ್ರತಿದಿನ ರಾತ್ರಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಫೆಬ್ರವರಿ 25 ರ ಬೆಳಿಗ್ಗೆ ಗಣಯಾಗ, ಮಧ್ಯಾಹ್ನ ಅನ್ನ ಸಂತರ್ಪಣೆ, ಜನವರಿ 27 ರ ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ ಅಂಕುರಾರೋಣೆ, ಭೂತ ಬಲಿ, ರಂಗಪೂಜೆ, ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾಣ ಮಂಡಳಿಯಿಂದ ಕೃಷ್ಣ ಕೃಷ್ಣ ಶ್ರೀ ಕೃಷ್ಣ ಯಕ್ಷಗಾನ, 28ರ ಮಧ್ಯಾಹ್ನ ಧ್ವಜಾರೋಹಣ, ಅನ್ನ ಸಂತರ್ಪಣೆ, ರಾತ್ರಿ ಸಾಲಿಗ್ರಾಮದ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಪುಷ್ಪ ಚಂದನ ಯಕ್ಷಗಾನ, ಮಾರ್ಚ್ 1 ರ ಬೆಳಿಗ್ಗೆ ಚಂಡಿಕಾಯಾಗ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಬಲಿ, ಪಂಜಿನಡ್ಕ ಸವಾರಿ, ಮಾರ್ಚ್ 2 ರಂದು ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಬಲಿ, ಕುಬೆವೂರು ಸವಾರಿ, ರಾತ್ರಿ ಪೆರ್ಡೂರು ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯಿಂದ ದೇವಗಂಗೆ ಯಕ್ಷಗಾನ, ಮಾರ್ಚ್ 3 ರಂದು ಮಧ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ, ರಾತ್ರಿ ಬಾಕಿಮಾರು ದೀಪ, ಕೆರೆ ದೀಪ, ಸಂಜೆ ಅರಸಿಕೆರೆ ವಂದೇ ಮಾತರಂ ಕಲಾ ರಂಗದಿಂದ ಜಾನಪದ ಭಕ್ತಿ ಸುಗಮ ಸಂಗೀತ, ರಾತ್ರಿ ನಮ್ಮ ಕಲಾವಿದೆರ ಬೆದ್ರ ತಂಡದಿಂದ ಪಾಂಡುನ ಅಲಕ್ಕ ಪೋಂಡು ತುಳು ನಾಟಕ. ಮಾರ್ಚ್ 4 ರ ಮಧ್ಯಾಹ್ನ ಹಗಲು ರಥೋತ್ಸವ, ಭೂರಿ ಭೋಜನ, ರಾತ್ರಿ ಭೂತ ಬಲಿ, ಶಯನ, ಕವಾಟ ಬಂಧನ, ಸಂಜೆ ಶೃಂಗೇರಿಯ ಶ್ರೀ ಶಾರದಾ ಅಂಧರ ಗೀತಾ ಗಾಯನ ಕಲಾ ತಂಡದಿಂದ ಭಕ್ತಿ ರಸ ಮಂಜರಿ, ಮಾರ್ಚ್ 5 ರ ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾ ಪೂಜೆ, ಆನ್ನ ಸಂತರ್ಪಣೆ, ರಾತ್ರಿ ಓಕುಳಿ, ಮಹಾ ರಥೋತ್ಸವ, ಅವಭೃತ, ಧ್ವಜಾವರೋಹಣ, ರಾತ್ರಿ ನಮ್ಮ ಟಿವಿಯ ಬಲೆ ತೆಲಿಪಾಲೆ ಖ್ಯಾತಿಯ ಮಸ್ಕಿರಿ ಕುಡ್ಲ ತಂಡದಿಂದ ಕೆಲಿಕೆ ಬಂಜಿ ನಿಲಿಕೆ, ಮಾರ್ಚ್ 6 ರ ಬೆಳಿಗ್ಗೆ ಮಹಾ ಸಂಪ್ರೋಕ್ಷಣೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಮಾರ್ಚ್ 7 ರ ಸಂಜೆ ದೇವಳದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 9ರಂದು ಬ್ರಹ್ಮಕಲಶೋತ್ಸವ ದಿನಾಚರಣೆ ಪ್ರಯುಕ್ತ ಬೆಳಿಗ್ಗೆ ತುಲಾಭಾರ ಸೇವೆ, 108ತೆಂಗಿನ ಕಾಯಿಗಳ ಗಣಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Kinnigoli-24021709

Comments

comments

Comments are closed.