ಅಂಗರಗುಡ್ಡೆ ಕೆರೆ ಒತ್ತುವರಿ ಸಮಸ್ಯೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಅಂಗರಗುಡ್ಡೆಯಲ್ಲಿ ನಿರ್ಮಾಣಗೊಂಡ ಕೆರೆಗೆ ಕಪ್ಪು ಕಲ್ಲು ಹಾಕಿ ಸಮಸ್ಯೆ ತಂದೊಡ್ಡಿದ ಘಟನೆ ನಡೆದಿದೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಿಂದ ಗ್ರಾಮ ಪಂಚಾಯಿತಿ ಅನುದಾನದಿಂದ 2016-17ನೇ ಸಾಲಿನಲ್ಲಿ ಸುಮಾರು 1.30 ಲಕ್ಷ ವೆಚ್ಚದಲ್ಲಿ ಕೆರೆಗೆ ಆವರಣಗೋಡೆ ನಿರ್ಮಿಸಲಾಗಿದ್ದು ಈ ಸ್ಥಳದಲ್ಲಿ ಖಾಸಗಿ ವ್ಯಕ್ತಿಗಳು ಕೆರೆಗೆ ಕಲ್ಲು ಹಾಕಿ ಒತ್ತುವರಿ ಮಾಡುವ ಯತ್ನ ನಡೆದಿದೆ ಎಂದು ಗುಮಾನಿ ಪಡಲಾಗಿದೆ.
ಇಲಾಖೆಯ ಮಾಹಿತಿ ಪ್ರಕಾರ ಅಂಗರಗುಡ್ಡೆ ಕೆರೆ ನಿರ್ಮಾಣ ಸ್ಥಳ ಸರಕಾರಿ ಜಾಗವಾಗಿದ್ದು ಮಳೆಗಾಲದಲ್ಲಿ ಇಂಗು ಗುಂಡಿಯಲ್ಲಿ ನೀರಿ ನಿಂತು ಪರಿಸರದ ನೀರಿನ ಒರತೆಗೆ ಸಹಕಾರಿಯಾಗಿತ್ತು. ಆದರೆ ಆವರಣ ತಡೆಗೋಡೆ ಇಲ್ಲದೆ ನೀರು ನಿಂತು ಅಪಾಯಕಾರಿಯಾಗಿತ್ತು.
ಗ್ರಾಮಸ್ಥರ ಹಾಗೂ ಪಂಚಾಯಿತಿ ಸದಸ್ಯರ ಮನವಿ ಮೇರೆಗೆ ಕಳೆದ ವರ್ಷ ಪಂಚಾಯಿತಿ ಅನುದಾನದಿಂದ ಆವರಣ ಗೋಡೆ ನಿರ್ಮಾಣ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳು ರಸ್ತೆ ಮಾಡುವ ಉದ್ದೇಶದಿಂದ ಕೆರೆಗೆ ಕಲ್ಲು ಹಾಕಿರುವುದು ಪಂಚಾಯಿತಿ ಆಡಳಿತದ ಗಮನಕ್ಕೆ ಬಂದಿರುತ್ತದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕ್ಥಗೊಳ್ಳಲಾಗುವುದು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ತಿಳಿಸಿದ್ದಾರೆ.

Kinnigoli-27021801

Comments

comments

Comments are closed.

Read previous post:
Kinnigoli-24021709
ಫೆ. 25-ಮಾ.5 : ಶಿಮಂತೂರು ಜಾತ್ರಾ ಮಹೋತ್ಸವ

ಮೂಲ್ಕಿ: ಶಿಮಂತೂರಿನ ಶ್ರೀ ಆದಿ ಜನಾರ್ದನ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಮತ್ತು ತಾಮ್ರಾಚ್ಚಾದಿತ ಗೋಪುರ. ಸುತ್ತು ಪೌಳಿ ಮತ್ತು ಭಿತ್ತಿ ಶಿಲ್ಪಗಳ ಲೋಕಾರ್ಪಣೆ ಸಮಾರಂಭವು ವೇದಮೂರ್ತಿ...

Close