ಕಲ್ಕೆರೆ- ಎಳತ್ತೂರು ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ : ಗ್ರಾಮೀಣ ರಸ್ತೆಯ ಅಭಿವೃದ್ಧಿಯೇ ಸಿದ್ದರಾಮಯ್ಯ ಸರಕಾರದ ಜನಪರ ಕಾಳಜಿಯಾಗಿದೆ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕೆರೆ – ಎಳತ್ತೂರು ರಸ್ತೆಗೆ 50 ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನಡೆಸಿ ಮಾತನಾಡಿ ಮೂಲ್ಕಿ – ಮೂಡಬಿದಿರೆ ಕ್ಷೇತ್ರದ ಗ್ರಾಮೀಣ ಭಾಗಗಳ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದರು.
ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ಶಾಸಕರ ಅನುದಾನದಿಂದ ಮೂಲ್ಕಿ ಬ್ಲಾಕ್ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆಗಳ ಕಾಂಕ್ರೀಟಿಕರಣ, ಕಿಂಡಿ ಅಣೆಕಟ್ಟು, ಶಾಲೆಗಳ ಅಭಿವೃದ್ಧಿ ಮುಂತಾದ ಯೋಜನೆಗಳು ಅನುಷ್ಟಾನ ಗೊಂಡಿವೆ ಎಂದು ಹೇಳಿದರು.
ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ದ. ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಬಿ. ಎಮ್ ಅಸೀಫ್ ಮೂಲ್ಕಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ಅರುಣ್ ಕುಮಾರ್, ಟಿ. ಎಚ್ ಮಯ್ಯದ್ದಿ, ಸಂತೋಷ್, ಚಂದ್ರಶೇಖರ್, ತಾಳಿಪಾಡಿ ಮಸೀದಿ ಧರ್ಮಗುರು ಹಸನ್ ಸಖಾಫಿ, ಟಿ. ಕೆ. ಅಬ್ದುಲ್ ಕಾದರ್, ಅರೀಫ್, ನೌಫಲ್ ಕಲ್ಕೆರೆ, ರಫೀಕ್ ಶಾಲೆಮನೆ, ಜಿಯಾಜ್ ಕಲ್ಕೆರೆ, ನಂದಾ ಪಾಯಸ್, ಗುತ್ತಿಗೆದಾರ ಟಿ. ಹನೀಫ್, ಪ್ರಕಾಶ್ ಆಚಾರ್, ಶಾಂತಾ ಗುತ್ತಕಾಡು ಮತ್ತಿತರರು ಉಪಸ್ಥಿತರಿದ್ದರು.

Kinnigoli-27021806

Comments

comments

Comments are closed.

Read previous post:
Kinnigoli-27021805
ಸೋಮಪ್ಪ ಸುವರ್ಣರ ಆದರ್ಶ ಆಧರಣೀಯ

ಕಿನ್ನಿಗೋಳಿ: ಜನಮಾನಸದಲ್ಲಿ ಉಳಿದುಕೊಂಡಿರುವ ಶಿಕ್ಷಣ ತಜ್ಞ ದಿ.ಸೋಮಪ್ಪ ಸುವರ್ಣ ಆದರ್ಶ ಆಧರಣೀಯ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು. ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು...

Close