ಮೆನ್ನಬೆಟ್ಟು ಹಕ್ಕು ಪತ್ರ ವಿತರಣೆ

ಕಿನ್ನಿಗೋಳಿ : ಕಳೆದ 25 ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದ ಬಡವರ ಕನಸು 94 ಸಿ ಸಿ ಅನುಷ್ಠಾನದಿಂದ ನನಸ್ಸಾಗುತ್ತಿದೆ. ಜನಪರ ಯೋಜನೆಗಳನ್ನು ಜನತೆಗೆ ಒದಗಿಸುವ ಮೂಲಕ ಸಿದ್ದರಾಮಯ್ಯ ಅವರ ಸರಕಾರ ಮಾದರಿ ಸರಕಾರವಾಗಿದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ 94 ಸಿ ಸಿಯ ಫಲಾನುಭವಿಗಳಿಗೆ ಸೋಮವಾರ ಹಕ್ಕು ಪತ್ರ ವಿತರಿಸಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಹಲವು ವರ್ಷಗಳಿಂದ ಹಕ್ಕುಪತ್ರಗಳಿಲ್ಲದೆ ತೊಂದರೆಗೊಳಗಾಗಿದ್ದು ಇದೀಗ ಬಡವರ ಸಮಸ್ಯೆ ನಿವಾರಣೆಯಾಗಿ ಸರಕಾರದಿಂದ ಮೂಲಭೂತ ಸೌಕರ್ಯ ಪಡೆಯಲು ಅರ್ಹರಾಗಿದ್ದಾರೆ ಎಂದರು.
ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 408 ಅರ್ಜಿಗಳು ಬಂದಿದ್ದು, ಮೊದಲ ಹಂತದಲ್ಲಿ 282 ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಮೆನ್ನಬೆಟ್ಟು ಪಂಚಾಯತಿ ಅಧ್ಯಕ್ಷೆ ಸರೋಜಿನಿ ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್, ಪಂಚಾಯತಿ ಸದಸ್ಯರಾದ ಸುಶೀಲಾ, ಲಕ್ಷ್ಮೀ, ಮಲ್ಲಿಕಾ, ಶಾಲಿನಿ, ಬೇಬಿ, ಮೀನಾಕ್ಷಿ, ರೋಕಿ ಡಿ ಸೋಜ, ಮತ್ತಿತರರು ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ದಿಲೀಪ್ ಸ್ವಾಗತಿಸಿದರು, ಮೂಲ್ಕಿ ವಿಶೇಷ ತಹಶೀಲ್ದಾರ್ ಎನ್ ಮಾಣಿಕ್ಯ ಪ್ರಸ್ತಾವನೆಗೈದರು, ಗ್ರಾಮಕರಣಿಕ ಕಿರಣ್ ವಂದಿಸಿದರು. ರೇವತಿ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.

Kinnigoli-27021803

Comments

comments

Comments are closed.

Read previous post:
Kinnigoli-27021802
ದಾಮಸಕಟ್ಟೆ ಕುಕ್ಕಟ್ಟೆ ರಸ್ತೆ ಮರುಡಾಮರೀಕರಣ

ಕಿನ್ನಿಗೋಳಿ: ಸಿದ್ದರಾಮಯ್ಯ ಸರಕಾರ ಜನಪರ ಯೋಜನೆಗಳಿಂದ ಇತಿಹಾಸ ನಿರ್ಮಾಣ ಮಾಡಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರಜೈನ್ ಹೇಳಿದರು. ದಾಮಸಕಟ್ಟೆ...

Close