ಸೋಮಪ್ಪ ಸುವರ್ಣರ ಆದರ್ಶ ಆಧರಣೀಯ

ಕಿನ್ನಿಗೋಳಿ: ಜನಮಾನಸದಲ್ಲಿ ಉಳಿದುಕೊಂಡಿರುವ ಶಿಕ್ಷಣ ತಜ್ಞ ದಿ.ಸೋಮಪ್ಪ ಸುವರ್ಣ ಆದರ್ಶ ಆಧರಣೀಯ. ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣಕ್ಕೆ ದಿ.ಸೋಮಪ್ಪ ಸುವರ್ಣ ಹೆಸರಿನ ಸಭಾಂಗಣ ಮಂಗಳವಾರ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೋಮಪ್ಪ ಸುವರ್ಣರ ದೂರದೃಷ್ಟಿತ್ವದ ಈ ಸರ್ಕಾರಿ ಕಾಲೇಜು ಸತತ ಮೂರು ಭಾರಿ ನ್ಯಾಕ್‌ನಿಂದ ಬಿ. ಶ್ರೇಷ್ಠ ದರ್ಜೆಯ ಮಾನ್ಯತೆ ಪಡೆದು ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡಿದೆ. ಪ್ರಿನ್ಸಿಪಾಲ್ ಸಹಿತ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ಸಮುದಾಯವು ಕಾಲೇಜಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದರು.
ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪ್ರಮೋದ್‌ಕುಮಾರ್ ಮಾತನಾಡಿ, ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿಯೂ ಬಡ ವಿದ್ಯಾರ್ಥಿಗಳು ಮುಕ್ತ ಮನಸ್ಸಿನಿಂದ ವಿದ್ಯಾರ್ಜನೆ ಮಾಡಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭ ಕಾಲೇಜಿನ ಬೆಳವಣಿಗೆಯಲ್ಲಿ ವಿಶೇಷ ಕಾಳಜಿ ವಹಿಸಿದ ಪ್ರಿನ್ಸಿಪಾಲ್ ಪ್ರೊ.ವಿಶ್ವನಾಥ್ ಭಟ್ ಅವರನ್ನು ಅಭಿನಂದಿಸಲಾಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಚ್.ವಸಂತ ಬೆರ್ನಾಡ್, ಯುವ ಉದ್ಯಮಿ ಮಿಥುನ್ ರೈ, ಕಿಲ್ಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ ಮಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಬ್ದುಲ್ ಅಜೀಜ್, ಶರ್ಮಿಳಾ ಕೋಟ್ಯಾನ್, ಹಮೀದ್ ಸಾಗ್, ಚಿತ್ರಾ ಸುರೇಶ್, ಬಶೀರ್, ಹಳೆಯಂಗಡಿ ಪಂಚಾಯಿತಿ ಪಿ.ಡಿ.ಓ. ಅಬೂಬಕ್ಕರ್, ಕಾರ್ಯದರ್ಶಿ ಕೇಶವ ದೇವಾಡಿಗ, ಮಾಜಿ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಾಲೆಟ್ ಪಿಂಟೋ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಪ್ರಿನ್ಸಿಪಾಲ್ ಪ್ರೊ. ವಿಶ್ವನಾಥ್ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು, ಉಪನ್ಯಾಸಕಿ ಮಂಜುಳಾ ಮಲ್ಯ ವಂದಿಸಿದರು, ಹರ್ಷಿತಾ ಟಿ. ಕಾರ್ಯಕ್ರಮ ನಿರೂಪಿಸಿದರು.

Kinnigoli-27021805

Comments

comments

Comments are closed.

Read previous post:
Kinnigoli-27021804
ಪಕ್ಷಿಕೆರೆ : ಸ್ವಚ್ಚತಾ ಹಾಗೂ ಶ್ರಮದಾನ

ಕಿನ್ನಿಗೋಳಿ: ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ, ನೆಹರು ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ,...

Close