ಪೊಂಪೈ ಕಾಲೇಜು – ವಿದಾಯ ಸಮಾರಂಭ

ಕಿನ್ನಿಗೋಳಿ: ನಿವೃತ್ತ ಜೀವನದಲ್ಲಿ ಜೀವನೋತ್ಸಾಹವನ್ನು ಬೆಳೆಸಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಹೆಜ್ಜೆ ಇಟ್ಟು ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿದಾಗ ಜೀವನ ಪಾವನವಾಗುತ್ತದೆ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಡಾ. ಅಲೋಷಿಯಸ್ ಪಾವ್ಲ್ ಡಿಸೋಜ ಹೇಳಿದರು.
ದಾಮಸ್‌ಕಟ್ಟೆ ಕಿರೆಂ ಚರ್ಚ್ ದ್ವಿಶತಮಾನೋತ್ಸವ ಸ್ಮಾರಕ ಸಭಾ ಭವನದಲ್ಲಿ ಬುಧವಾರ ನಡೆದ ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಅವರ ವಿದಾಯ ಕೂಟ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದಾಯ ಕೂಟದ ಸನ್ಮಾನ ಸ್ವೀಕರಿಸಿದ ಐಕಳ ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಮಾತನಾಡಿ ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸುವ ಹಾಗೂ ತಪ್ಪಿದ್ದರೆ ಕ್ಷಮೆ ಕೇಳುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಹಿಡಿದ ಕೆಲಸವನ್ನು ಸಾಧಿಸಿಯೇ ತೀರಿಸುತ್ತೇನೆಂಬ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ಎಂದರು.
ಸನ್ಮಾನಿತರ ಬಗ್ಗೆ ಕಾಲೇಜು ವಿದ್ಯಾರ್ಥಿಗಳಾದ ಮೆಲ್ರೋಯ್, ಜೋಯಿಲಿನ್ ಕ್ಯಾರಲ್ ಡಿಸೋಜ ಹಾಗೂ ಪ್ರಭಾರಿ ಪ್ರಿನ್ಸಿಪಾಲ್ ಪ್ರೊ. ಜಗದೀಶ್ ಹೊಳ್ಳ ಸನ್ಮಾನಿತರ ಬಗ್ಗೆ ಮಾತನಾಡಿದರು.
ಕಲ್ಯಾಣಪುರ ಮಿಲಾಗ್ರೀಸ್ ಕಾಲೇಜು ಪ್ರಿನ್ಸಿಪಾಲ್ ಡಾ. ವಿನ್ಸೆಂಟ್ ಆಳ್ವ ಅಭಿನಂಧನಾ ಭಾಷಣಗೈದರು.
ಈ ಸಂದರ್ಭ ಮಂಗಳೂರು ಕೆಥೋಲಿಕ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರೆ. ಫಾ. ಜೆರಾಲ್ಡ್ ಡಿಸೋಜ, ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ. ಫಾ. ವಿನ್ಸೆಂಟ್ ಮೊಂತೆರೋ, ಪೊಂಪೈ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ. ವಿಕ್ಟರ್ ಡಿಮೆಲ್ಲೊ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಾಕ್ಸಿಂ ಪಿಂಟೊ, ಕಿರೆಂ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ, ಪ್ರಭಾರಿ ಪ್ರಿನ್ಸಿಪಾಲ್ ಪ್ರೊ. ಜಗದೀಶ್ ಹೊಳ್ಳ, ಡಯಾನಾ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು.
ಡಾ. ಮಂಜುನಾಥ ಎಸ್. ಎ. ಸ್ವಾಗತಿಸಿದರು, ಪುರುಷೋತ್ತಮ ಕೆ.ವಿ ಸನ್ಮಾನ ಪತ್ರ ವಾಚಿಸಿದರು. ನೇಮಿಚಂದ್ರ ಗೌಡ ಕಾರ್ಯಕ್ರಮ ನಿರೂಪಿಸಿದರು.

Kinnigoli-01031802

Comments

comments

Comments are closed.