ಮಾ.2 ಮೂಡಬಿದಿರೆ ಪ್ರತಿಭಟನೆ

ಕಿನ್ನಿಗೋಳಿ: ಕರಾವಳಿ ಜಿಲ್ಲೆಯ ಜನರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ನೆಪವೊಡ್ಡಿ ಅಡಿಕೆ ಉತ್ಪನ್ನಗಳ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಲು ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿಸೋಜಾ ಅವರ ನೇತೃತ್ವದಲ್ಲಿ ಕೈಗೊಂಡಿರುವ ಬೃಹತ್ ಪ್ರತಿಭಟನೆಗೆ ಮೂಲ್ಕಿ ಹಾಗೂ ಮೂಡಬಿದಿರೆ ಭಾಗದ ರೈತರು ಮುಕ್ತವಾಗಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುರಾಜ್ ಎಸ್. ಪೂಜಾರಿ ಹಳೆಯಂಗಡಿ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮಾಹಿತಿ ನೀಡಿ, ಮಾರ್ಚ್ 2ರಂದು ಮೂಡಬಿದಿರೆಯ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಈ ಪ್ರತಿಭಟನೆಯಲ್ಲಿ ರಾಜಕೀಯ ರಹಿತವಾಗಿ ಕೃಷಿಕರು ಹಾಗೂ ಅಡಿಕೆಯ ಉದ್ಯಮವನ್ನೇ ಅವಲಂಬಿಸಿರುವ ಉದ್ಯಮಿಗಳು, ಕಾರ್ಮಿಕರರ ಸಹಿತ ಪ್ರಜ್ಞಾವಂತ ನಾಗರಿಕರು, ಸಮಾನ ಮನಸ್ಕ ಸಂಘ ಸಂಸ್ಥೆಗಳು ಮುಕ್ತವಾಗಿ ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಕುಟುಂಬ ಕಲ್ಯಾಣ ರಾಜ್ಯ ಸಚಿವ ಅನುಪ್ರಿಯ ಪಟೇಲ್ ಅವರು ಅಧಿಕಾರಿಗಳು ಕೊಟ್ಟ ಮಾಹಿತಿಯನ್ನೇ ನಂಬಿ ಅಡಿಕೆ ಕ್ಯಾನ್ಸರ್ ಕಾರಕ ಎಂಬ ನಿರ್ಧಾರಕ್ಕೆ ಬಂದು ಅಡಿಕೆ ನಿಷೇಧಕ್ಕೆ ರಾಜ್ಯಗಳಿಗೆ ಸೂಚನೆ ನೀಡಿರುವುದರಿಂದ ಜಿಲ್ಲೆಯ ಅಡಿಕೆ ಬೆಳೆಗಾರರು ಸಹ ಆತಂಕ್ಕಕ್ಕೊಳಗಾಗಿದ್ದಾರೆ. ಮೂಲ್ಕಿ ಹೋಬಳಿಯ ಸುಮಾರು 39 ಗ್ರಾಮದ ಸಾವಿರಾರು ಮಂದಿ ಕೃಷಿಕರ ಜೀವನಾಡಿಯಾಗಿರುವುದರಿಂದ ಇದೀಗ ಅಡಿಕೆಯ ನಿಷೇಧದ ವಿರುದ್ಧ ಮುಕ್ತವಾಗಿ ಭಾಗವಹಿಸಿ ಪ್ರತಿಭಟನೆಯಲ್ಲಿ ತಮ್ಮ ಧ್ವನಿಯನ್ನು ಎತ್ತಿಹಿಡಿಯಬೇಕು ಎಂದು ಗುರುರಾಜ್ ಎಸ್. ಪೂಜಾರಿ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

Comments

comments

Comments are closed.

Read previous post:
ಮಾ. 3-4 ಅತ್ತೂರು ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಶ್ರೀ ಕೋರ‍್ದಬ್ಬು ದೈವಸ್ಥಾನ (ರಿ) ಅತ್ತೂರು ಮಾಗಣೆಯ ವರ್ಷಾವಧಿ ನೇಮೋತ್ಸವ ಮಾರ್ಚ್ 3 ಮತ್ತು 4 ರಂದು ನಡೆಯಲಿದೆ. ಮಾ. 3 ರಂದು ಸಂಜೆ 6 ಗಂಟೆಗೆ...

Close