ಮಾ. 3-4 ಅತ್ತೂರು ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಶ್ರೀ ಕೋರ‍್ದಬ್ಬು ದೈವಸ್ಥಾನ (ರಿ) ಅತ್ತೂರು ಮಾಗಣೆಯ ವರ್ಷಾವಧಿ ನೇಮೋತ್ಸವ ಮಾರ್ಚ್ 3 ಮತ್ತು 4 ರಂದು ನಡೆಯಲಿದೆ. ಮಾ. 3 ರಂದು ಸಂಜೆ 6 ಗಂಟೆಗೆ ಭಂಡಾರ ಸ್ಥಾನದಿಂದ ಕೊರ‍್ದಬ್ಬು, ಧೂಮಾವತಿ ದೈವಗಳ ದರ್ಶನದೊಂದಿಗೆ ಭಂಡಾರ ಹೊರಟು ಕೋರ‍್ದಬ್ಬು ದೈವಸ್ಥಾನಕ್ಕೆ ಭಂಡಾರ ಆಗಮಿಸಿ ಕೊಡಿಯಡಿಗೆ ರಾತ್ರಿ 8.00 ಗಂಟೆಗೆ ಮಹಾ ಅನ್ನಸಂತರ್ಪಣೆ, 10.00 ಗಂಟೆಗೆ ಕೊರ‍್ದಬ್ಬು ದೈವಗಳ ಗಗ್ಗರ ಸೇವೆ, 1.00 ಗಂಟೆಗೆ ತನಿಮಾನಿಗ ದೈವದ ಗಗ್ಗರ ಮಾ. 4 ರಂದು ಬೆಳಿಗ್ಗೆ 7.00 ಗಂಟೆಗೆ ಧೂಮಾವತಿ ಬಂಟ ದೈವಗಳ ಗಗ್ಗರ ನಂತರ ನೇಮೋತ್ಸವ ನಡೆಯಲಿದೆ 8.30 ಕ್ಕೆ ಗಡುವಿನಲ್ಲಿ ಅತ್ತೂರು ಮಾಗಣೆಯವರ ಕೋಳಿ ಹರಕೆ ನಡೆದು ಭಂಡಾರ ನಿರ್ಗಮನವಾಗಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಐಕಳ ಗಣೇಶ ವಿ ಶೆಟ್ಟಿ ಮತ್ತು ಅನುವಂಶಿಕ ಆಡಳಿತ ಮೊಕ್ತೇಸರ ಬಾಡ ಶೆಟ್ಟು ಅತ್ತೂರಗುತ್ತು ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-01031804
ಕಲ್ಲಾಪು ವಾರ್ಷಿಕ ಜಾತ್ರಾ ಮಹೋತ್ಸವ

ಕಿನ್ನಿಗೋಳಿ: ಕಲ್ಲಾಪು ಶ್ರೀವೀರಭದ್ರ ಮಹಮ್ಮಾಯಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಾರಿಪೂಜೆಯ ಅಂಗವಾಗಿ ಕ್ಷೇತ್ರದಲ್ಲಿ ಉತ್ಸವ ಬಲಿ ಜರುಗಿತು.

Close