ಪಾವಂಜೆ ವಿಶ್ವ ಜಿಗೀಷದ್ ಯಾಗ:ಚಪ್ಪರ ಮುಹೂರ್ತ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಏಪ್ರಿಲ್ 10 ರಿಂದ 17 ರವರೆಗೆ ನಡೆಯಲಿರುವ ವಿಶ್ವ ಜಿಗೀಷದ್ ಯಾಗಕ್ಕಾಗಿ ಗುರುವಾರ ಚಪ್ಪರ ಮುಹೂರ್ತವನ್ನು ನೆರವೇರಿಸಲಾಯಿತು.
ಪಾವಂಜೆ ದೇವಳದಲ್ಲಿ ಧರ್ಮದರ್ಶಿ ಯಾಜಿ ಡಾ.ನಿರಂಜನ ಭಟ್ ಅವರು ವಿಶೇಷ ಪ್ರಾರ್ಥನೆ ನಡೆಸಿದರು. ಸಭಾ ಸೌಧದ ನಿರ್ಮಾಣ ಮಂಡಳಿಯ ಅಧ್ಯಕ್ಷ ಉಮೇಶ್ ಪೂಜಾರಿ ಪಡುಪಣಂಬೂರು ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಬೋಳ ಕೃಷ್ಣ ರಾವ್, ಶ್ರೀಕಾಂತ್ ಭಟ್, ವಿದ್ಯಾಶಂಕರ್, ಪಿಸಿಎ ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಚಪ್ಪರ ಸಮಿತಿಯ ಸದಾನಂದ ಗಾಂಭೀರ್, ಜಗದೀಶ್ ಐತಾಳ್, ಸದಾಶಿವ ಕರ್ಕೇರ, ಉದಯ ದೇವಾಡಿಗ, ರಮೇಶ್ ದೇವಾಡಿಗ ತೋಕೂರು, ವಿವಿಧ ಸಮಿತಿಯ ಜಗದೀಶ್ ಶೇಣವ, ಶೋಭೇಂದ್ರ ಸಸಿಹಿತ್ಲು, ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಎಚ್.ರಾಮಚಂದ್ರ ಶೆಣೈ, ಪ್ರಶಾಂತ್ ಕೆ.ಎಂ., ಸುಧಾಕರ ಆರ್. ಅಮೀನ್, ರಮೇಶ್ ಕೋಟ್ಯಾನ್, ಮನೋಜ್ ಕರ್ಕೇರ, ಹಿಮಕರ್ ಪುತ್ರನ್ ಕದಿಕೆ, ಜಗನ್ನಾಥ ಕರ್ಕೇರ, ಸುಖೇಶ್ ಪಾವಂಜೆ, ಜೈಕೃಷ್ಣ ಕೋಟ್ಯಾನ್, ರಾಘು ದೇವಾಡಿಗ, ವಿಶ್ವನಾಥ ಪಾವಂಜೆ, ಯತೀಶ್ ಸಾಲ್ಯಾನ್, ಸಾವಿತ್ರಿ ದಿವಾಕರ ಭಟ್, ಪ್ರಭಾವತಿ, ಬೇಬಿ ಸುಂದರ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-01031805

Comments

comments

Comments are closed.

Read previous post:
ಮಾ.2 ಮೂಡಬಿದಿರೆ ಪ್ರತಿಭಟನೆ

ಕಿನ್ನಿಗೋಳಿ: ಕರಾವಳಿ ಜಿಲ್ಲೆಯ ಜನರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ನೆಪವೊಡ್ಡಿ ಅಡಿಕೆ ಉತ್ಪನ್ನಗಳ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಲು ಮುಂದಾಗಿರುವ ಕೇಂದ್ರ ಸರಕಾರದ...

Close