ಕಿನ್ನಿಗೋಳಿ : ಬಿಜೆಪಿ ನವಶಕ್ತಿ ಸಮಾವೇಶ

ಕಿನ್ನಿಗೋಳಿ: ದೇಶದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಇತರ ದೇಶಗಳು ಕೂಡಾ ನರೇಂದ್ರ ಮೋದಿಯವರ ಆಡಳಿತ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಎಂದು ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗುರುವಾರ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಕಾರ್ಯಕರ್ತರ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿ
ಸಿದ್ದರಾಮಯ್ಯ ಸರಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಆಡಳಿತ ಇರುವ ಸಂದರ್ಭ ಜಾತಿ ರಾಜಕಾರಣ ಮಾಡಿಲ್ಲ ಆದರೇ ಸಿದ್ದರಾಮಯ್ಯ ಸರಕಾರ ಮತಗಳ ಲಾಲಸೆಯಿಂದ ಸಮಾಜದಲ್ಲಿ ಒಡಕು ಮೂಡಿಸಿದೆ. ಕೇಂದ್ರ ಸರಕಾರದ ಅನುದಾನಗಳನ್ನು ತನ್ನದೆಂದು ಬಿಂಬಿಸುತ್ತಿರುವುದು ವಿರ್ಪಯಾಸ. ಕಳೆದ ನಾಲ್ಕು ವರ್ಷಗಳಿಂದ 24 ಹಿಂದು ಯುವಕರ ಹತ್ಯೆ ನಡೆದಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಪಿಎಫ್‌ಐ ಸಂಘಟನೆಯ ಮೇಲೆ ಇದ್ದ ಕೇಸುಗಳು ಹಾಗೂ ಗೋಹತ್ಯೆ ನಿಷೇಧವನ್ನು ಹಿಂದಕ್ಕೆ ತೆಗೆದಿದೆ. ಒಡೆದು ಆಳುವ ನೀತಿ ರಾಜ್ಯ ಸರ್ಕಾರದ್ದಾಗಿದೆ. ಮಠ ಮನ್ಯಗಳನ್ನು ಮೂಡನಂಬಿಕೆಯ ಕಾನೂನು ಒಳಪಡಿಸಿ ದೇವಳಗಳನ್ನು ಹದ್ದು ಬಸ್ತಿನಲ್ಲಿಡಲು ಪ್ರಯತ್ನಿಸುತ್ತಿದ್ದಾರೆ. ಡ್ರಗ್ಸ್ ಮಾಫಿಯಾದ ನಿಯಂತ್ರಣ ಮಾಡುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಮೂಲ್ಕಿ ಮೂಡಬಿದಿರೆ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮತದಾರನ್ನು ಓಲೈಸಿ ಸಾಮಾಜಿಕ ಬದ್ದತೆಯ ರಾಜಕಾರಣ ಮಾಡಬೇಕಾಗಿದೆ ಎಂದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷರಾದ ಉಮಾನಾಥ ಕೊಟ್ಯಾನ್, ಜಗದೀಶ ಅಧಿಕಾರಿ, ಸುದರ್ಶನ ಎಮ್ ಮೂಡಬಿದಿರೆ, ಮೂಲ್ಕಿ ಮೂಡಬಿದಿರೆ ಮಂಡಲದ ಕಾರ್ಯದರ್ಶಿ ಜಯಾನಂದ ಮೂಲ್ಕಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಕೆ. ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಮೂಡಬಿದಿರೆ ಮಂಡಲ ಅಧ್ಯಕ್ಷ ಈಶ್ವರ್ ಕಟೀಲು ಸ್ವಾಗತಿಸಿದರು. ಕಾರ್ಯದರ್ಶಿ ಸುಖೇಶ್ ಶೆಟ್ಟಿ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.

ಮಾರ್ಚ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ 3 ದಿನ ಪಾದಯತ್ರೆ ನಡೆಯಲಿದೆ. ಮಡಿಕೇರಿಯಿಂದ ಮಂಗಳೂರಿಗೆ ಸಂಸದ ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಹಾಗೂ ಅಂಕೋಲದಿಂದ ಮಂಗಳೂರು ತನಕ ಸಂಸದ ಅನಂತ ಕುಮಾರ್ ಹೆಗಡೆ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿಕ್ಕೆ ಮೂಡಬಿದ್ರೆಯಲ್ಲಿ ಸಮಾಪನಗೊಳ್ಳಲಿದೆ.

Kinnigoli-02031802

Comments

comments

Comments are closed.

Read previous post:
Kinnigoli-01031805
ಪಾವಂಜೆ ವಿಶ್ವ ಜಿಗೀಷದ್ ಯಾಗ:ಚಪ್ಪರ ಮುಹೂರ್ತ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಏಪ್ರಿಲ್ 10 ರಿಂದ 17 ರವರೆಗೆ ನಡೆಯಲಿರುವ ವಿಶ್ವ ಜಿಗೀಷದ್ ಯಾಗಕ್ಕಾಗಿ ಗುರುವಾರ ಚಪ್ಪರ ಮುಹೂರ್ತವನ್ನು ನೆರವೇರಿಸಲಾಯಿತು. ಪಾವಂಜೆ ದೇವಳದಲ್ಲಿ...

Close