ಮಲ್ಲಿಗೆಯಂಗಡಿ : ನೂತನ ರುದ್ರಭೂಮಿ ಲೋಕಾರ್ಪಣೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿಯ ಮಲ್ಲಿಗೆಯಂಗಡಿ ಪ್ರದೇಶದಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಗೊಂಡು ಪರಿಸರದ ಜನತೆಗೆ ಉಪಯೋಗವಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅನುದಾನದಿಂದ ನಿರ್ಮಾಣಗೊಂಡ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಯಂಗಡಿ ಬಳಿ ನೂತನ ಹಿಂದೂ ರುದ್ರಭೂಮಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ತಾಲೂಕು ಪಂಚಾಯತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪಿಡಿಒ ಪ್ರಕಾಶ್ ಬಿ., ಅರುಣ್ ಕುಮಾರ್, ತಿಲಕ್‌ರಾಜ್, ದಯಾನಂದ, ಜಯಂತಿ, ಬೇಬಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಕೆ. ಭುವನಾಭಿರಾಮ ಉಡುಪ, ಗುರುರಾಜ್ ಮಲ್ಲಿಗೆಯಂಗಡಿ, ಲೋಕಯ್ಯ ಸಾಲ್ಯಾನ್, ಗಣೇಶ್ ಶೆಟ್ಟಿ ಮಿತ್ತಬೈಲ್, ಶಾಲಿನಿ, ಸುನಿಲ್ ಶಶಿಕಲಾ, ಲೀಲಾ, ದುರ್ಗಾಪ್ರಸಾದ್, ಸುಶಾಂತ್, ಅಶ್ವತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-02031801

Comments

comments

Comments are closed.

Read previous post:
Kinnigoli-02031802
ಕಿನ್ನಿಗೋಳಿ : ಬಿಜೆಪಿ ನವಶಕ್ತಿ ಸಮಾವೇಶ

ಕಿನ್ನಿಗೋಳಿ: ದೇಶದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಇತರ ದೇಶಗಳು ಕೂಡಾ ನರೇಂದ್ರ ಮೋದಿಯವರ ಆಡಳಿತ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಎಂದು ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್...

Close