ಮಿತ್ತಬೈಲು ಕೆರಮ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಮೋದಿ ಸರಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಬೈಲು ಕೆರಮ ಸಂಸದ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಎನ್ ಆರ್‌ಇಜಿ ಅನುದಾನದಲ್ಲಿ 9 ಲಕ್ಷರೂ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಅರುಣ್ ಕುಮಾರ್, ತಿಲಕ್ ರಾಜ್, ದಯಾನಂದ, ಜಯಂತಿ, ಬೇಬಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಬಿಜೆಪಿ ಯುವಮೋರ್ಚ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಕೆ. ಭುವನಾಭಿರಾಮ ಉಡುಪ, ಗುರುರಾಜ್ ಮಲ್ಲಿಗೆಯಂಗಡಿ, ಲೋಕಯ್ಯ ಸಾಲ್ಯಾನ್, ಶಾಲಿನಿ, ಸುನಿಲ್, ಶಶಿಕಲಾ, ಲೀಲಾ, ದುರ್ಗಾಪ್ರಸಾದ್, ಸುಶಾಂತ್, ಅಶ್ವತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-02031803

Comments

comments

Comments are closed.

Read previous post:
ನಿಡ್ಡೋಡಿ : ಮಾ. 4 ಕಣ್ಣು ತಪಾಸಣಾ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್ ಕ್ಲಬ್, ನಿಡ್ಡೋಡಿ ಮಾತೃಭೂಮಿ ಸೇವಾ ಪ್ರತಿಷ್ಠಾನ, ಶ್ರೀ ಬಾಪೂಜಿ ಕಲ್ಚರಲ್ ಮತ್ತು ಗೇಮ್ಸ್ ಕ್ಲಬ್ (ರಿ) ಶುಂಠಿಲಪದವು ಇದರ ಆಶ್ರಯದಲ್ಲಿ ಖ್ಯಾತ ಕಣ್ಣಿನ...

Close