ಪಾವಂಜೆ ಅಪಘಾತದ ಗಾಯಾಳು ಯುವಕ ಸಾವು

ಕಿನ್ನಿಗೋಳಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಪಾವಂಜೆಯ ಬಳಿ ಕಾರಿನ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಕಳೆದ ಫೆ.12ರಂದು ನಡೆದಿದ್ದು ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೆರೆಕಾಡು ನಿವಾಸಿ ಸಚಿನ್ ಶೆಟ್ಟಿಗಾರ್ (24) ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದ್ದಾರೆ.
ಕಾರನ್ನು ಚಲಾಯಿಸುತ್ತಿದ್ದ ಕಾರ್ನಾಡು ನಿವಾಸಿ ಶಾಖಿರ್ (27) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆರೆಕಾಡಿನಲ್ಲಿ ಟೈಲರ್ ವೃತ್ತಿಯನ್ನು ನಡೆಸುತ್ತಿರುವ ಪ್ರಭಾಕರ್ ಶೆಟ್ಟಿಗಾರ್ ಅವರ ಹಿರಿಯ ಪುತ್ರನಾಗಿದ್ದ ಸಚಿನ್ ಬೆಂಗಳೂರಿನಲ್ಲಿ ಐಟಿಐ ಕಲಿತು ಆರಂಭದಲ್ಲಿ ಅಲ್ಲಿಯೇ ಉದ್ಯೋಗವನ್ನು ಮಾಡಿಕೊಂಡಿದ್ದರು. ವರ್ಷದ ಹಿಂದೆ ಊರಿಗೆ ಹಿಂದುರುಗಿ, ಕಾರ್ನಾಡು ನಿವಾಸಿ ಶಾಖಿರ್‌ರೊಂದಿಗೆ ಮೂಲ್ಕಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ದುಡಿಯುತ್ತಾ ಮನೆಗೆ ಆಸರೆಯಾಗಿದ್ದರು.
ಅಪಘಾತದಲ್ಲಿ ಸಚಿನ್‌ನ ತಲೆಗೆ ಗಂಭೀರ ಗಾಯವಾಗಿದ್ದರಿಂದ ಆರಂಭದಲ್ಲಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬುಧವಾರ ವೆನ್‌ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದಾಗ ಮೂಲ್ಕಿ ಹಾಗೂ ಕಾರ್ನಾಡುವಿನ ಕೆಲವು ಸೇವಾ ಸಂಸ್ಥೆಗಳು ಸಾಕಷ್ಟು ಹಣಕಾಸಿನ ನೆರವನ್ನು ನೀಡಿ ಸಚಿನ್ ಮರಳಿ ಹಿಂದಿನಂತಾಗಲಿ ಎಂದು ಪ್ರಾರ್ಥಿಸಿದರಲ್ಲದೆ ಸ್ಥಳೀಯರು ಸಾಮಾಜಿಕ ಜಾಲತಾಣದ ಮೂಲಕ ಆತನಿಗೆ ನೆರವು ನೀಡಲು ಮನವಿ ಮಾಡಿಕೊಂಡಿದ್ದರು.
ಮೃತರು ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

Kinnigoli-02031804

Comments

comments

Comments are closed.

Read previous post:
Kinnigoli-02031803
ಮಿತ್ತಬೈಲು ಕೆರಮ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಮೋದಿ ಸರಕಾರದ ಮಹತ್ವದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು. ಕಟೀಲು ಗ್ರಾಮ ಪಂಚಾಯಿತಿ...

Close