ಮಲ್ಲಿಗೆಯಂಗಡಿ ತಂಡ್ರಾಪು ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಜಿಲ್ಲಾ ಪಂಚಾಯಿತಿ ಅನುದಾನದಿಂದ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ, ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಕೇಂದ್ರ ಸರಕಾರದ ಮತ್ತಷ್ಟು ಅನುದಾನವನ್ನು ತರಲಾಗುವುದು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆಯಂಗಡಿ ತಂಡ್ರಾಪು ರಸ್ತೆ ಕಾಂಕ್ರೀಟೀಕರಣ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಸದಸ್ಯರಾದ ಅರುಣ್ ಕುಮಾರ್, ತಿಲಕ್ ರಾಜ್ ಶೆಟ್ಟಿ, ದಯಾನಂದ, ಜಯಂತಿ, ಬೇಬಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಈಶ್ವರ್ ಕಟೀಲ್, ಬಿಜೆಪಿ ಯುವಮೋರ್ಚದ ಅಭಿಲಾಷ್ ಶೆಟ್ಟಿ, ಕೆ. ಭುವನಾಭಿರಾಮ ಉಡುಪ, ಲೋಕಯ್ಯ ಸಾಲಿಯಾನ್, ಗುರುರಾಜ್ ಮಲ್ಲಿಗೆಯಂಗಡಿ, ಗಣೇಶ್ ಶೆಟ್ಟಿ ಮಿತ್ತಬೈಲ್, ಶಾಲಿನಿ, ಸುನಿಲ್ ಶಶಿಕಲಾ, ಲೀಲಾ, ದುರ್ಗಾಪ್ರಸಾದ್, ಸುಶಾಂತ್, ಅಶ್ವತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021803

Comments

comments

Comments are closed.

Read previous post:
Kinnigoli-06021802
ನವೋದಯ ನಗರ ಕಾಂಕ್ರೀಟೀಕರಣ ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ: ಜನರಿಗೆ ಮೂಲಭೂತ ಸೌಕರ್ಯಕ್ಕಾಗಿ ಕಾಂಗ್ರೇಸ್ ಸರಕಾರ ಅನೇಕ ಯೋಜನೆಗಳನ್ನು ಕೈಗೊಂಡಿದೆ. ಹಲವು ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಇದ್ದ ಲಕ್ಷಾಂತರ ಕುಟುಂಬಗಳಿಗೆ 94 ಸಿ.ಸಿ ಯ ಮೂಲಕ ಹಕ್ಕುಪತ್ರ ಒದಗಿಸುವ...

Close