ಕಟೀಲು ಸ್ಟೋರ್ಟ್ಸ್ ಗೇಮ್ಸ್ ಕ್ಲಬ್ ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ: ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಕ್ರೀಡೆಗೆ ಸೀಮಿತವಾಗಿರದೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುದು ಅಭಿನಂದನೀಯ ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ ಹೇಳಿದರು.
ಶನಿವಾರ ಕಟೀಲಿನಲ್ಲಿ ಕಟೀಲ್ ಸ್ಟೋಟ್ಸ್ ಎಂಡ್ ಗೇಮ್ಸ್ ಕ್ಲಬ್ ಇದರ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಬಿಜೆಪಿ ಮೂಡಬಿದಿರೆ ಮಂಡಲಾಧ್ಯಕ್ಷ ಈಶ್ವರ್ ಕಟೀಲು, ಕಟೀಲು ಗ್ರಾಮ ಪಂಚಾಯತ್ ಸದಸ್ಯ ರಮಾನಂದ ಪೂಜಾರಿ, ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಅಧ್ಯಕ್ಷ ಕೇಶವ ಕಟೀಲು, ಬಿಜೆಪಿ ಯುವ ಮೋರ್ಚದ ಅಭಿಲಾಷ್ ಶೆಟ್ಟಿ ಕಟೀಲು, ಕಟೀಲು ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಜಯರಾಮ ರೈ , ದಾಮೋದರ ಆಚಾರ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ರೋಸಿ ಪಿಂಟೋ, ರಮೇಶ್ ಐ. ಕೆ, ದೇವಿಪ್ರಸಾದ್, ಪ್ರೆಸಿಲ್ಲ ಮಿಸ್ಕಿತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021804

Comments

comments

Comments are closed.