ನವೋದಯ ನಗರ ಕಾಂಕ್ರೀಟೀಕರಣ ರಸ್ತೆ ಶಿಲಾನ್ಯಾಸ

ಕಿನ್ನಿಗೋಳಿ: ಜನರಿಗೆ ಮೂಲಭೂತ ಸೌಕರ್ಯಕ್ಕಾಗಿ ಕಾಂಗ್ರೇಸ್ ಸರಕಾರ ಅನೇಕ ಯೋಜನೆಗಳನ್ನು ಕೈಗೊಂಡಿದೆ. ಹಲವು ವರ್ಷಗಳಿಂದ ಹಕ್ಕುಪತ್ರವಿಲ್ಲದೆ ಇದ್ದ ಲಕ್ಷಾಂತರ ಕುಟುಂಬಗಳಿಗೆ 94 ಸಿ.ಸಿ ಯ ಮೂಲಕ ಹಕ್ಕುಪತ್ರ ಒದಗಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಿದೆ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯತಿ ವ್ಯಾಪಿಯ ನವೋದಯ ನಗರದ ನೂತನ ಕಾಂಕ್ರೀಟೀಕರಣ ರಸ್ತೆಗೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ಚರ್ಚ್ ಧರ್ಮ ಗುರು ವಿನ್ಸೆಂಟ್ ಮೊಂತೆರೋ, ಸಹಾಯಕ ಧರ್ಮಗುರು ಸುನೀಲ್ ಪಿಂಟೋ, ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕೆ.ಗಣೇಶ್ ಮಲ್ಯ, ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ಮೂಡಾ ಸದಸ್ಯ ವಸಂತ್ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಮುಲ್ಕಿ ನಗರ ಪಂಚಾಯಿತಿ ಸದಸ್ಯ ಬಿ.ಎಂ. ಆಸೀಫ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ತಿಮಪ್ಪ ಕೋಟ್ಯಾನ್, ಉದ್ಯಮಿ ಡೊಲ್ಪಿ ಸಂತುಮಯೋರ್, ದೇವದಾಸ್, ನವೀನ್ ಕುಮಾರ್ ಕಟೀಲು, ಗುತ್ತಿಗೆದಾರ ಹನೀಫ್, ದಿನೇಶ್ ಶೆಣೈ, ಉದ್ಯಮಿ ದೀಪಕ್, ಸುಭಾಸ್ ಕಾಪಿಕಾಡ್, ಟಿ.ಎಚ್ ಮೈಯದಿ, ಅರಿಫ್ ಗುತ್ತಕಾಡು, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021802

Comments

comments

Comments are closed.

Read previous post:
Kinnigoli-06021801
ಕಟೀಲು ಮಲ್ಲಿಗೆಯಂಗಡಿ ದುರ್ಗಾಪುರ ರಸ್ತೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟೀಲು ಮಲ್ಲಿಗೆಯಂಗಡಿ ದುರ್ಗಾಪುರ ರಸ್ತೆಯನ್ನು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿನ ನಾಲ್ಕು ಲಕ್ಷರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು...

Close