ಪಡುಪಣಂಬೂರು: ಸ್ವಚ್ಚ ಅಭಿಯಾನ

ಕಿನ್ನಿಗೋಳಿ: ಸ್ವಚ್ಚತೆಗಾಗಿ ಪಡುಪಣಂಬೂರು ಗ್ರಾಮ ಪಂಚಾಯತ್‌ನ ದೂರದೃಷ್ಟಿಯ ಯೋಜನೆಯ ಯೋಚನೆಯಿಂದ ಇಂದು ಮಾದರಿಯಾಗಿ ಬೆಳೆಯುತ್ತಿದೆ. ಪ್ರತೀ ಗ್ರಾಮಸ್ಥರು ಗ್ರಾಮ ಪಂಚಾಯತ್‌ನೊಂದಿಗೆ ಕೈ ಜೋಡಿಸಬೇಕು ಎಂದು ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಸಿ.ಕೋಟ್ಯಾನ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಹಾಗೂ ರಾಮಕೃಷ್ಣ ಮಿಷನ್ ಇವರ ಸಹಕಾರದಲ್ಲಿ ಭಾನುವಾರ ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ದೇವಳದ ಬಳಿಯಲ್ಲಿ ನಡೆದ ಸ್ವಚ್ಚ ಪಡುಪಣಂಬೂರು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ ಕುಮಾರ್, ಹೇಮಂತ್ ಅಮೀನ್, ಮಂಜುಳಾ, ಕುಸುಮಾ, ಲೀಲಾ ಬಂಜನ್, ಪುಷ್ಪಾವತಿ, ಕುಸುಮಾವತಿ, ಕಾರ್ಯದರ್ಶಿ ಲೋಕನಾಥ ಭಂಡಾರಿ, ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್, ವಿಶ್ವ ಬ್ಯಾಂಕ್‌ನ ಕ್ಲಸ್ಟರ್ ೧ರ ಅಧ್ಯಕ್ಷರು, ವಿನೋದ್‌ಕುಮಾರ್, ಮಹಿಳಾ ಮಂಡಳಿಯ ಅಧ್ಯಕ್ಷ ವಿನೋದಾ ಭಟ್, ರಾಮಚಂದ್ರ ಶೆಟ್ಟಿ , ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಪಡುಪಣಂಬೂರು ಗ್ರಾ.ಪಂ.ನ ಅಭಿಜಿತ್ ಸ್ವಾಗತಿಸಿದರು, ದಿನಕರ್ ವಂದಿಸಿದರು.

Kinnigoli-06021806

Comments

comments

Comments are closed.

Read previous post:
ಪಾವಂಜೆ ವಿಶ್ವ ಜಿಗೀಷದ್ ಯಾಗ : ಪೂರ್ವ ಭಾವಿ ಸಭೆ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ವಠಾರದಲ್ಲಿ ಏ.10ರಿಂದ 17ರವರೆಗೆ ನಡೆಯಲಿರುವ ವಿಶ್ವ ಜಿಗೀಷದ್ ಯಾಗದ ಪೂರ್ವಭಾವಿಯಾಗಿ ಭಾನುವಾರ ದೇವಳದಲ್ಲಿ ವಿವಿಧ ಉಪ ಸಮಿತಿಯ ಸಭೆ ನಡೆಯಿತು....

Close