ಪಾವಂಜೆ ವಿಶ್ವ ಜಿಗೀಷದ್ ಯಾಗ : ಪೂರ್ವ ಭಾವಿ ಸಭೆ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ವಠಾರದಲ್ಲಿ ಏ.10ರಿಂದ 17ರವರೆಗೆ ನಡೆಯಲಿರುವ ವಿಶ್ವ ಜಿಗೀಷದ್ ಯಾಗದ ಪೂರ್ವಭಾವಿಯಾಗಿ ಭಾನುವಾರ ದೇವಳದಲ್ಲಿ ವಿವಿಧ ಉಪ ಸಮಿತಿಯ ಸಭೆ ನಡೆಯಿತು.
ಯಾಗದ ಯಾನ ತಾಣ ಮಂಡಳಿ, ಸಭಾ ಸೌಧ ನಿರ್ಮಾಣ ಮಂಡಳಿ, ಆಗತಂ ಸ್ವಾಗತಂ ಮಂಡಳಿ, ನಮಾಮಿ ಗಂಗಾ ಮಂಡಳಿಯ ಸದಸ್ಯರ ಹಾಗೂ ಪ್ರಮುಖರ ಸಭೆಯು ನಡೆಯಿತು.
ಯಾಗ ಸಮಿತಿಯ ಸಹ ಕಾರ್ಯದರ್ಶಿ ಎಸ್. ಎಸ್. ಸತೀಶ್ ಭಟ್ ಮಾತನಾಡಿ ಪಾವಂಜೆ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗವು ಜನರ ಸಹಭಾಗಿತ್ವದಲ್ಲಿಯೇ ಪೂರ್ಣಾಹುತಿ ಆಗುವುದರಿಂದ ಭಕ್ತರ ಸಂಖ್ಯೆಯಲ್ಲಿ ಈ ಹಿಂದಿನ ಯಾಗಕ್ಕಿಂತಲೂ ಹೆಚ್ಚಾಗುವ ನಿರೀಕ್ಷೆ ಇದೆ. ಎಲ್ಲಾ ಉಪ ಸಮಿತಿಯ ಸದಸ್ಯರು ಪರಸ್ಪರ ಸಂಪರ್ಕ ಇಟ್ಟುಕೊಂಡು ಯಾಗವನ್ನು ಯಶಸ್ವಿಗೊಳಿಸಲು ಪೂರ್ವ ತಯಾರಿ ನಡೆಸಬೇಕು ಎಂದರು.
ಸಹ ಕಾರ್ಯದರ್ಶಿ ಎಚ್.ರಾಮಚಂದ್ರ ಶೆಣೈ ಮತ್ತು ಕಾರ್ಯಾಲಯ ಮಂಡಳಿಯ ಪ್ರಧಾನರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು ಅವರು ಮುಂದಿನ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಉಪ ಸಮಿತಿಯ ನರೇಂದ್ರ ಪ್ರಭು, ಶುಬ್ರತ್ ದೇವಾಡಿಗ, ಉಮೇಶ್ ಪೂಜಾರಿ ಪಡುಪಣಂಬೂರು, ಜಗದೀಶ್ ಐತಾಳ್, ಸದಾನಂದ ಗಾಂಭೀರ್, ದಿವಾಕರ ಸಾಮಾನಿ, ಜಯಶೀಲ ಕೋಟ್ಯಾನ್, ಶೋಭೇಂದ್ರ ಸಸಿಹಿತ್ಲು, ಸದಾಶಿವ ಕರ್ಕೇರ, ಸಂದೇಶ್ ಪೂಜಾರಿ ಪೆರ್ಮುದೆ, ಅನಿಲ್ ಕುಂದರ್ ಸಸಿಹಿತ್ಲು, ವಾಸುದೇವ ಸಾಲ್ಯಾನ್, ಹಿಮಕರ್ ಪುತ್ರನ್, ಸುಖೇಶ್ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.
ಸುಧಾಕರ ಆರ್. ಅಮೀನ್ ಸ್ವಾಗತಿಸಿ, ವಂದಿಸಿದರು.

Comments

comments

Comments are closed.

Read previous post:
Kinnigoli-06021805
ಕಣಿಯೂರು : ಭಜನಾ ಸಂಕೀರ್ತನೆ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ನಡೆಯುತ್ತಿರುವ ಸರಣಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕಣಿಯೂರು ಮಲೆಗಾಂಲು ಶ್ರಿ ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯರಿಂದ ಭಜನಾ...

Close