ತೋಕೂರು : ಹಕ್ಕುಪತ್ರ ವಿತರಣೆ

ಕಿನ್ನಿಗೋಳಿ: ಗ್ರಾಮೀಣ ಭಾಗದ ಜನಸಾಮಾನ್ಯರ ಗಂಭೀರ ಸಮಸ್ಯೆಯಾಗಿದ್ದ ಹಕ್ಕುಪತ್ರ ವಿತರಣೆಯಿಂದ ರಾಜ್ಯ ಸರಕಾರವು ಜನಪರ ಸಮಸ್ಯೆಗಳಿಗೆ ಪ್ರಥಮ ಆದ್ಯತೆ ನೀಡಿ ಸ್ಪಂದಿಸಿದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ತೋಕೂರು ಹಿಂದೂಸ್ತಾನಿ ಶಾಲೆಯ ವಠಾರದಲ್ಲಿ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಮತ್ತು ತೋಕೂರು ಗ್ರಾಮದ ನಿವಾಸಿಗಳಿಗೆ 94 ಸಿ ಹಕ್ಕುಪತ್ರವನ್ನು ವಿತರಿಸಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ಒಟ್ಟು 64 ಮಂದಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ವಸಂತ್ ಬೆರ್ನಾಡ್, ತಾ.ಪಂ. ಸದಸ್ಯ ಶರತ್ ಕುಬೆವೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಾಹುಲ್, ಪಡುಪಣಂಬೂರು ಗ್ರಾ.ಪಂ. ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಲೀಲಾ ಬಂಜನ್, ಹೇಮಂತ್ ಅಮೀನ್, ಪುಷ್ಪಾವತಿ, ಸಂಪಾವತಿ, ಕುಸುಮಾ ಚಂದ್ರಶೇಖರ್, ವನಜಾ, ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ಇಲಾಖೆಯ ಭಾಗ್ಯ ರಾಜೇಶ್, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯಿತಿ ಕಾರ್ಯದರ್ಶಿ ಲೋಕನಾಥ ಭಂಡಾರಿ ಸ್ವಾಗತಿಸಿದರು, ಗ್ರಾಮ ಕರಣಿಕ ಮೋಹನ್ ಹಕ್ಕುಪತ್ರ ಪಟ್ಟಿ ವಾಚಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ ವಂದಿಸಿದರು, ಮೂಲ್ಕಿ ಕಂದಾಯ ನಿರೀಕ್ಷಕ ದಿಲೀಪ್ ರಾಥೋಡ್ ಕಾರ್ಯಕ್ರಮ ನಿರೂಪಿಸಿದರು.

Kinnigoli-06021808

Comments

comments

Comments are closed.

Read previous post:
Kinnigoli-06021807
ಸ್ವಚ್ಚತೆಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು

ಕಿನ್ನಿಗೋಳಿ: ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಿದಾಗ ಪರಿಸರದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಿದೆ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕನಾಥ ಭಂಡಾರಿ ಹೇಳಿದರು....

Close