ಕಿನ್ನಿಗೋಳಿ ಬೀಡಿ ಕಾರ್ಮಿಕರ ಮಾಹಿತಿ ಶಿಬಿರ

ಕಿನ್ನಿಗೋಳಿ: ಮಾಹಿತಿಗಳ ಕೊರತೆಯಿಂದ ಬೀಡಿ ಕಾರ್ಮಿಕರಿಗೆ ಹಲವು ಯೋಜನೆಗಳ ಮಾಹಿತಿಗಳು ಸಿಗುತ್ತಿಲ್ಲ. ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಭಾರತ ಸರಕಾರದ ಕಾರ್ಮಿಕ ಕಲ್ಯಾಣ ಇಲಾಖೆಯ ಆಯುಕ್ತ ಕೆ. ಶೇಖರ್ ಹೇಳಿದರು.
ಶನಿವಾರ ಕಿನ್ನಿಗೋಳಿ ಶ್ರೀರಾಮ ಮಂದಿರ ಸಭಾಭವನದಲ್ಲಿ ಕೇಂದ್ರ ಸರಕಾರ, ಕಾರ್ಮಿಕ ಸಚಿವಾಲಯ ಕಾರ್ಮಿಕ ಕಲ್ಯಾಣ ಸಂಘನೆ ಬೆಂಗಳೂರು ಮತ್ತು ಕರಾವಳಿ ಬೀಡಿ ಕಂಟ್ರಾಕ್ಟದಾರರ ಸಂಘ ಇದರ ಸಹಯೋಗದಲ್ಲಿ ಬೀಡಿ ಕಾರ್ಮಿಕರಿಗಾಗಿ ನಡೆದ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಕರಾವಳಿ ಬೀಡಿ ಕಂಟ್ರಾಕ್ಟ್ ದಾರರ ಸಂಘದ ಅಧ್ಯಕ್ಷ ಕೆ. ಕೃಷ್ಣ ರೈ, ಗುರುಪುರ ಕೈಕಂಬದ ಮುಖ್ಯ ವೈದಾಧಿಕಾರಿ ಪಿ. ರಾಮಕೃಷ್ಣ ಭಟ್, ಆರೋಗ್ಯ ಅಧಿಕಾರಿ ಡಾ. ಭಾಗ್ಯಲಕ್ಷ್ಮೀ, ಶ್ರೀರಾಮ ಮಂದಿರ ಸಭಾಭವನದ ಪ್ರಬಂಧಕ ರಾಮಚಂದ್ರ ಕಾಮತ್ ಪಿಎಮ್‌ಕೆಕೆ ಕಾರ್ತಿಕ್, ಬೆಂಗಳೂರಿನ ಸಂದೀಪ ಚೌರಶಿಯ ಉಪಸ್ಥಿತರಿದ್ದರು.
ವಿವಿಧ ಯೋಜನೆಯ ಬಗ್ಗೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಸಂಘದ ಅಬ್ದುಲ್ ಕಾದರ್ ಸ್ವಾಗತಿಸಿದರು. ಮೋಹನ್‌ದಾಸ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-07031802

Comments

comments

Comments are closed.

Read previous post:
Kinnigoli-07031801
ಶಾಂತಿಪಲ್ಕೆ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ

ಕಿನ್ನಿಗೋಳಿ: ತಾಳಿಪಾಡಿ ಶಾಂತಿಪಲ್ಕೆ ಶ್ರೀ ಬ್ರಹ್ಮಮುಗೇರ ಮಹಾಂಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮದ ಅಂಗವಾಗಿ ಅಲೇರ ಪಂಜುರ್ಲಿ ದೈವದ ನೇಮ ನಡೆಯಿತು.

Close