ಪಂಜ ಕೊಯಿಕುಡೆ : ಸಂಪತ್ತು ಕಾರ್ಯಕ್ರಮ

ಕಿನ್ನಿಗೋಳಿ: ಅಂಚೆ ಇಲಾಖೆಯು ಸೇವೆ ಗ್ರಾಮೀಣ ಜನರ ಮನೆ ಬಾಗಿಲಿಗೆ ಬರಲಿದ್ದು ಕೇಂದ್ರ ಸರಕಾರದ ಆರಂಭಿಸಿದ ಸುಕನ್ಯಾ ಸಮೃದ್ಧಿ, ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳು ಗ್ರಾಮೀಣ ಜನರಿಗೆ ವರದಾನವಾಗಲಿದೆ ಎಂದು ಮಂಗಳೂರು ಅಂಚೆ ಇಲಾಖಾ ಉತ್ತರ ವಿಭಾಗದ ನೀರಿಕ್ಷಕ ದಯಾನಂದ ದೇವಾಡಿಗ ಹೇಳಿದರು.
ಭಾರತ ಸರಕಾರ ಯುವ ಕಾರ‍್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಯಿಕುಡೆ ಇದರ ಆಶ್ರಯದಲ್ಲಿ ಶನಿವಾರ ಪಂಜ – ಕೊಯಿಕುಡೆ ನವಜ್ಯೋತಿ ಮಹಿಳಾ ಮಂಡಲದಲ್ಲಿ ನಡೆದ ನೆರೆಹೊರೆ- ಯವ ಸಂಪತ್ತು ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಮಾಹಿತಿ ನೀಡಿ ಮಾತನಾಡಿದರು.
ಯೋಗಗುರು ಜಯ ಮುದ್ದು ಶೆಟ್ಟಿ ಮಾತನಾಡಿ ಯೋಗದ ಮೂಲಕ ರೋಗ ಮುಕ್ತ ಜೀವನ ನಡೆಸಲು ಸಾಧ್ಯ ಆದ್ದರಿಂದ ನಿಯಮಿತವಾಗಿ ಕೆಲವು ಯೋಗಾಸನಗಳನ್ನು ತಮ್ಮ ನಿತ್ಯ ಜೀವನದಲ್ಲಿ ಆಳವಡಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.
ಪಕ್ಷಿಕೆರೆ ವಿಜಯಾ ಬ್ಯಾಂಕ್ ಪ್ರಬಂಧಕ ಗೌತಮ್ ಎನ್ ಸರವು ಪ್ರಧಾನ ಮಂತ್ರಿ ಜನಧನ್ ಯೋಜನೆ ನಗದು ರಹಿತ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಕೆಮ್ರಾಲ್ ಗ್ರಾಮ ಪಂಚಾಯಿತಿ ಪಿಡಿಓ ರಮೇಶ್ ರಾಥೋಡ್ ನಿರ್ಮಲ ಭಾರತ ಬಗ್ಗೆ ಮಾಹಿತಿ ನೀಡಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರು.
ನವಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಶೈಲಜಾ ಎನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವಿಠೋಭ ಭಜನಾ ಮಂಡಳಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ನೆಹರು ಯುವ ಕೇಂದ್ರದ ಅಪ್ಸಾನ ಉಪಸ್ಥಿತರಿದ್ದರು. ತಾರಾ ಶೆಟ್ಟಿ ಸ್ವಾಗತಿಸಿದರು. ಕುಶಲ ಶೇಖರ್ ಕಾರ್ಯಕ್ರಮ ನಿರೂಪಿಸಿದರು. ಅಮಿತಾ ದೇವಾಡಿಗ ವಂದಿಸಿದರು.

Kinnigoli-07031803

Comments

comments

Comments are closed.

Read previous post:
Kinnigoli-07031802
ಕಿನ್ನಿಗೋಳಿ ಬೀಡಿ ಕಾರ್ಮಿಕರ ಮಾಹಿತಿ ಶಿಬಿರ

ಕಿನ್ನಿಗೋಳಿ: ಮಾಹಿತಿಗಳ ಕೊರತೆಯಿಂದ ಬೀಡಿ ಕಾರ್ಮಿಕರಿಗೆ ಹಲವು ಯೋಜನೆಗಳ ಮಾಹಿತಿಗಳು ಸಿಗುತ್ತಿಲ್ಲ. ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿ ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಭಾರತ ಸರಕಾರದ ಕಾರ್ಮಿಕ ಕಲ್ಯಾಣ ಇಲಾಖೆಯ...

Close