ಅಧ್ಯಕ್ಷ, ಬಿ ಎಲ್ ಎ ಮತ್ತು ವಲಯಾಧ್ಯಕ್ಷರ ಸಭೆ

ಕಿನ್ನಿಗೋಳಿ: ಕಾಂಗ್ರೇಸ್ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಪ್ರತೀ ಚುನಾವಣೆಯೂ ಹೊಸ ಚುನಾವಣೆಯಾಗಿರಬೇಕು ಪಕ್ಷದಲ್ಲಿ ವೈಮನಸ್ಸು ಇಲ್ಲದೆ ದುಡಿದರೆ ಮಾತ್ರ ನಮಗೆ ಪ್ರತಿಫಲ ಸಿಗುತ್ತದೆ ಎಂದು ಕಾಂಗ್ರೇಸ್ ಮುಖಂಡ ನವಾಝ್ ಜಪ್ಪು ಹೇಳಿದರು.
ಮುಲ್ಕಿ ಬ್ಲಾಕ್ ಕಾಂಗ್ರೇಸ್ ಸಮಿತಿಯಿಂದ ಮುಲ್ಕಿ ಬ್ಲಾಕ್ ಕಾಂಗ್ರೇಸ್ ಕಟ್ಟಡದಲ್ಲಿ ನಡೆದ ಬ್ಲಾಕ್ ವ್ಯಾಪ್ತಿಯ ಬೂತ್ ಅಧ್ಯಕ್ಷ, ಬಿ ಎಲ್ ಎ ಮತ್ತು ವಲಯಾಧ್ಯಕ್ಷರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಬಿ ಎಲ್ ಎ, ವಲಯ ಮತ್ತು ಬೂತ್ ಅಧ್ಯಕ್ಷರುಗಳು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಿ, ಚುನಾವಣೆಗೂ ಮುಂಚೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದ್ದು ಅದಕ್ಕೆ ಬಿ.ಎಲ್.ಎ ಅಧಿಕಾರಿಗಳಿಗೆ ಸಹಕರಿಬೇಕು ಎಂದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಮಾತನಾಡಿ ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಅನೇಕ ಜನಪರ ಕಾರ್ಯಕ್ರಮಗನ್ನು ಹಮ್ಮಿಕೊಂಡಿದ್ದು ಅದನ್ನು ಸಾಮಾನ್ಯ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು, ಅನ್ನಬಾಗ್ಯ ಕ್ಷೀರ ಭಾಗ್ಯ ಮತ್ತಿತರ ಯೋಜನೆಗಳಿಂದ ಕಾಂಗ್ರೇಸ್ ಸರಕಾರ ಮಾದರಿ ಸರಕಾರವಾಗಿದೆ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಮೂಲ್ಕಿ ಮೂಡಬಿದ್ರೆ ವೀಕ್ಷಕರಾದ ರಾಜಶೇಖರ ಕೋಟ್ಯಾನ್, ದ.ಕ ಜಿಲ್ಲಾ ಯೂತ್ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ, ದ,ಕ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ. ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕೆ.ಪಿ.ಸಿ.ಸಿ ಸದಸ್ಯ ವಸಂತ ಬೆರ್ನಡ್, ಮಮತಾ ಗಟ್ಟಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಆಸೀಪ್, ಮೂಲ್ಕಿ ಯೂತ್ ಕಾಂಗೇಸ್ ಅಧ್ಯಕ್ಷ ಹಕಿಂ, ಪ್ರಚಾರ ಸಮಿತಿಯ ಶಶಿಕಾಂತ ಶೆಟ್ಟಿ, ಪದ್ಮಾವತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-08031807

Comments

comments

Comments are closed.

Read previous post:
Kinnigoli-08031806
ತಾಳಿಪಾಡಿ ಖಿಲ್ ರ್ ಮೌಲೂದ್ ಕಾರ್ಯಕ್ರಮ

ಕಿನ್ನಿಗೋಳಿ: ಸೌರ್ಹಾದತೆ ಸಹಬಾಳ್ವೆ ಮೂಲಕವಾಗಿ ಬಾಳಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯವಿದೆ ಎಂದು ದ. ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು. ಗುತ್ತಕಾಡು ಮಸೀದಿ...

Close