ಮಾ.10-11ಅತ್ತೂರು ಪುನಃ ಪ್ರತಿಷ್ಠೆ ಕಲಶಾಭಿಷೇಕ

ಕಿನ್ನಿಗೋಳಿ: ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು ಕೆಮ್ರಾಲ್ ಕಿಲೆಂಜೂರು ಪುನರ್ ನಿರ್ಮಾಣಗೊಂಡ ಅತ್ತೂರು ಶ್ರೀ ಅರಸು ಕುಂಜಿರಾಯರ ಭಂಡಾರ ಸ್ಥಾನದಲ್ಲಿ ಶ್ರೀ ಅರಸು ಕುಂಜಿರಾಯರ ಪುನಃ ಪ್ರತಿಷ್ಠೆ ಹಾಗೂ ಕಲಶಾಭಿಷೇಕ ಮಾ. 10 ಮತ್ತು 11 ರಂದು ನಡೆಯಲಿದೆ.
ಮಾ. 10 ರಂದು ಬೆಳಿಗ್ಗೆ 9 ಗಂಟೆಗೆ ಆಲಯ ಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ತೋರಣ ಪ್ರತಿಷ್ಟೆ, ಗಣಪತಿ ಹೋಮ. ಸಂಜೆ 3 ಗಂಟೆಗೆ ಪಕ್ಷಿಕೆರೆ ಪೇಟೆಯಿಂದ ಭಂಡಾರ ಸ್ಥಾನದವರೆಗೆ, ಭಂಡಾರ ಮನೆ ದಿ. ಸುಂದರಿ ಮಂಜಯ್ಯ ಶೆಟ್ಟಿ ಸ್ಮರಣಾರ್ಥ ಶಶಿಕರ ಶೆಟ್ಟಿ, ಆಶಾಲತಾ ನಾರಾಯಣ ಶೆಟ್ಟಿ ಭಂಡಾರ ಮನೆ ಮತ್ತು ಭಂಡಾರ ಮನೆ ದಿ. ಸುಂದರಿ ಮಂಜಯ್ಯ ಶೆಟ್ಟಿ ಸ್ಮರಣಾರ್ಥ ರಾಘು ಶೆಟ್ಟಿ ಸೇವಾ ರೂಪದ ಅತ್ತೂರು ಅರಸು ಕುಂಜಿರಾಯ ಸ್ವರ್ಣ ಮೂರ್ತಿ, ಸುವರ್ಣ ಗಜ, ಸುವರ್ಣ ಪೀಠ, ರಜತ ಪಲ್ಲಕಿ ಸಮೇತ ಇತರ ಅಭರಣಗಳ ಭವ್ಯ ಮೆರವಣಿಗೆ, ಸಂಜೆ 4 ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ, ವಾಸ್ತು ಪೂಜೆ ವಾಸ್ತು ಹೋಮ, ವಾಸ್ತು ಬಲಿ, ಸಪ್ತ ಶುದ್ದಿ, ಪ್ರಸಾದ ಶುದ್ದಿ, ಪ್ರಾಕಾರ ಬಲಿ, ರಾಕ್ಷೋಘ್ನ ಹೋಮ, ಸುದರ್ಶನ ಹೋಮ, ಭೂವರಾಹ ಹೋಮ, ಕೋಪ ಶಾಂತಿ, ಬಿಂಬ ಶುದ್ದಿ, ಬಿಂಬಾಧಿವಾಸ ಕಲಶ ಮಂಡಲ ರಚನೆ, ಪಲ್ಲಕ್ಕಿ ಶುದ್ದ.
ಮಾ. 11 ರಂದು ಬೆಳಿಗ್ಗೆ 7 ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ಕಲಶ ಅಧಿವಾಸ, ಪ್ರತಿಷ್ಟಾ ಹೋಮ, ಪ್ರಧಾನ ಹೋಮ ನವಗ್ರಹ ಶಾಂತಿ ಹೋಮ 10.45 ಕ್ಕೆ ಅತ್ತೂರು ಬೈಲು ಗಣಪತಿ ಉಡುಪರ ನೇತೃತ್ವದಲ್ಲಿ ಶ್ರೀ ಅರಸು ಕುಂಜಿರಾಯರ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಪ್ರಸನ್ನ ಪೂಜೆ, ಮಧ್ಯಾಹ್ನ 1.00 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿರುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ ತಿಳಿಸಿದ್ದಾರೆ.

Kinnigoli-08031809

Comments

comments

Comments are closed.

Read previous post:
Kinnigoli-08031808
ಉಲ್ಲಂಜೆ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪಿಯ ಉಲ್ಲಂಜೆ ಕೊರಗಜ್ಜ ಕ್ಷೇತ್ರಕ್ಕೆ ಹೋಗುವ ಕಾಂಕ್ರೀಟೀಕರಣ ಗೊಂಡ ರಸ್ತೆಯನ್ನು ಮೂಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಿದರು. ಈ...

Close