ಮಾ 8.-11 ಕೊಡೆತ್ತೂರು ನೇಮೋತ್ಸವ

ಕಿನ್ನಿಗೋಳಿ: ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಮಾ. 8 ರಿಂದ 11 ವರೆಗೆ ನಡೆಯಲಿದೆ. ಮಾ. 8 ರಂದು ಬೆಳಿಗ್ಗೆ 8.30 ಕ್ಕೆ ಕುಂಜರಾಯ ದೈವದ ಭಂಡಾರ, ಭಂಡಾರ ಮನೆಯಿಂದ ಆಗಮನ ನಂತರ ಧ್ವಜಾರೋಹಣ, ರಾತ್ರಿ 8 ಗಂ. ಶ್ರೀ ದುರ್ಗಾಂಬ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಇವರಿಂದ ಯಕ್ಷಗಾನ ತಾಳ ಮದ್ದಳೆ ಮೀನಾಕ್ಷಿ ಕಲ್ಯಾಣ, ರಾತ್ರಿ 9 ಗಂ. ಕುಂಜರಾಯ ದೈವದ ನೆಮೋತ್ಸವ, ಕೊಂಡೇಲ್ತಾಯ, ಮೈಸಂದಾಯ ದೈವಗಳ ಕಟ್ಟು ಕಟ್ಟಲೆ ನೆಮೋತ್ಸವ, ಮಾ. 9 ರಂದು ಬೆಳಿಗ್ಗೆ ಉಳ್ಳಾಯ ದೈವದ ನೆಮೋತ್ಸವ, ರಾತ್ರಿ 7 ಗಂ. ಉಲ್ಲಂಜೆ ದ.ಕ.ಜಿಲ್ಲಾ ಸರಕಾರಿ ಹಿರಿಯ ಪ್ರಥಮಿಕ ಶಾಲಾ ಮಕ್ಕಳು ಮತ್ತು ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಧಾರ್ಮಿಕ ಸಭಾ ಕಾರ್ಯಕ್ರಮ, 9.30 ರಿಂದ ಶ್ರೀ ಶಾರಾದ ಅಂಧರ ಗೀತಗಾಯನ ಕಲಾ ಸಂಘ (ರಿ) ಕಾಂಚಿನಗರ ಆಶ್ರಯ ಕಾಲೋನಿ ಶೃಂಗೇರಿ ಇವರಿಂದ ಸಂಗೀತ ರಸಮಂಜರಿ, 10 ಗಂ. ಕೊಡಮಣಿತ್ತಾಯ ದೈವದ ನೇಮೋತ್ಸವ, ರಾತ್ರಿ 1.30 ರಿಂದ ಕಾಂತೇರಿ ಧೂಮಾವತಿ ಬಂಟ, ಅಡ್ಯಂತ್ತಾಯ, ಬಬ್ಬರ್ಯೆ ದೈವದ ಕಟ್ಟು ಕಟ್ಟಲೆ ನೇಮೋತ್ಸವ, ಮಾ. 10 ರಂದು ರಾತ್ರಿ 7.30 ಕ್ಕೆ ಕ್ರೇಜೀ ಇನ್ ಕ್ರೈವ್ ಡ್ಯಾನ್ಸ್ ಸ್ಟೋಡಿಯೋ ಇದರ ಸದಸ್ಯರಿಂದ ನೃತ್ಯ ಪ್ರದರ್ಶನ, 9 ಗಂ. ತರುಣ ಶಕ್ತಿ ಕಲಾವಿದರು ಕೊಡೆತ್ತೂರು ಇದರ ಸದಸ್ಯರಿಂದ ತುಳುಹಾಸ್ಯಮಯ ನಾಟಕ ಅಂಚಿ ಇಂಚಿ ತೂವಡೆ ನಾಟಕ ಪ್ರದರ್ಶನ ರಾತ್ರಿ 8 ಗಂ. ಕೊರ‍್ದಬ್ಬು ದೈವದ ಭಂಡಾರ ಆಗಮನ, ರಾತ್ರಿ 10 ರಿಂದ ಜಾರಂದಾಯ ಬಂಟ ದೈವದ ನೇಮೋತ್ಸವ, ರಾತ್ರಿ 11 ಗಂ. ಕೊರ‍್ದಬ್ಬು ಹಾಗೂ ಜಾರಂದಾಯ ದೈವದ ಬೇಟಿ, ರಾತ್ರಿ 1.30 ರಿಂದ ಸರಳ ಧೂಮಾವತಿ ಬಂಟ ದೈವಗಳ ನೇಮೋತ್ಸವ, ಮಾ. 11 ರಂದು ಬೆಳಿಗ್ಗೆ ದ್ವಜಾವರೋಹಣ ಭಂಡರ ನಿರ್ಗಮನ, ಉತ್ಸವದ ಪ್ರತೀ ದಿನ ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-08031805
ಬಪ್ಪನಾಡು ಹೊರೆಕಾಣಿಕೆ ಪೂರ್ವಭಾವಿ ಸಭೆ

ಕಿನ್ನಿಗೋಳಿ: ಬಪ್ಪನಾಡು ದುರ್ಗಾಪರಮೇಶ್ವರೀ ದೇವಳ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಯಶಸ್ಸಿಗಾಗಿ ನಾವೆಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಪ್ರಿಲ್ 17 ರಂದು ಹೊರೆಕಾಣಿಕೆ ಸಮರ್ಪಿಸಲಾಗುತ್ತಿದೆ ಎಂದು ಅತ್ತೂರುಬೈಲು ವೆಂಕಟರಾಜ ಉಡುಪ ಹೇಳಿದರು....

Close