ಬಪ್ಪನಾಡು ಹೊರೆಕಾಣಿಕೆ ಪೂರ್ವಭಾವಿ ಸಭೆ

ಕಿನ್ನಿಗೋಳಿ: ಬಪ್ಪನಾಡು ದುರ್ಗಾಪರಮೇಶ್ವರೀ ದೇವಳ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಯಶಸ್ಸಿಗಾಗಿ ನಾವೆಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಪ್ರಿಲ್ 17 ರಂದು ಹೊರೆಕಾಣಿಕೆ ಸಮರ್ಪಿಸಲಾಗುತ್ತಿದೆ ಎಂದು ಅತ್ತೂರುಬೈಲು ವೆಂಕಟರಾಜ ಉಡುಪ ಹೇಳಿದರು.
ಬಪ್ಪನಾಡು ಬ್ರಹ್ಮಕಲಶೋತ್ಸವದ ಪ್ರಯುಕ್ತ ಸೋಮವಾರ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದಲ್ಲಿ ಬಪ್ಪನಾಡು ಬ್ರಹ್ಮಕಲಶೋತ್ಸವದ ಪ್ರಯುಕ್ತ ಅತ್ತೂರು ಮಾಗಣೆಯ ಹೊರೆಕಾಣಿಕೆ ಸಮರ್ಪಣೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತೀಯೊಂದು ಗ್ರಾಮದ ಜನತೆಗೆ ಅನುಕೂಲವಾಗುವಂತೆ ಅಲ್ಲಲ್ಲಿ ಹೊರೆ ಕಾಣಿಕೆ ಸಂಗ್ರಹಣಾ ಕೇಂದ್ರ ಸ್ಥಾಪಿಲಾಗುವುದು ಎಂದರು.
ಈ ಸಂದರ್ಭ ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ, ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಚರಣ್ ಶೆಟ್ಟಿ ಕೊಜಪಾಡಿಬಾಳಿಕೆ, ಅತ್ತೂರು ಕೊರ್ದಬ್ಬು ದೈವಸ್ಥಾನದ ಅನುವಂಶಿಕ ಮುಕ್ತೇಸರ ಬಾಡ ಶೆಟ್ಟಿ ಅತ್ತೂರಗುತ್ತು, ರಾಜೇಂದ್ರ ಶೆಟ್ಟಿ ಕುಡ್ತಿಮಾರಗುತ್ತು, ಪ್ರಸನ್ನ ಶೆಟ್ಟಿ ಅತ್ತೂರಗುತ್ತು, ಜಯ ಶೆಟ್ಟಿ ಕೊಜಪಾಡಿ ಬಾಳಿಕೆ, ಶಂಕರ ಶೆಟ್ಟಿ ಮೂಡ್ರಗುತ್ತು, ಶೇಖರ ಶೆಟ್ಟಿ ಮೇಗಿನ ಮನೆ, ಶಾಮರಾಯ ಶೆಟ್ಟಿ, ಧೂಮಾವತಿ ಮಿತ್ರಮಂಡಳಿಯ ಅಧ್ಯಕ್ಷ ಅರುಣ್ ಶೆಟ್ಟಿ ಮಜಲಗುತ್ತು, ಅಖಿಲಾಂಡೇಶ್ವರೀ ಸೇವಾ ಸಮಿತಿಯ ಅಧ್ಯಕ್ಷೆ ಲೀಲಾ, ಗಂಗಾಧರ ಶೆಟ್ಟಿ ಮೂಡ್ರಗುತ್ತು, ತಿಮಪ್ಪ ಶೆಟ್ಟಿ, ರಮೇಶ್ ಕಾಪಿಕಾಡ್, ಪ್ರಶಾಂತ್ ಪಕ್ಷಿಕೆರೆ, ಪೂವಪ್ಪಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

Kinnigoli-08031805

Comments

comments

Comments are closed.

Read previous post:
Kinnigoli-08031804
ಕಿನ್ನಿಗೋಳಿ ವಿದಾಯ ಸನ್ಮಾನ

ಕಿನ್ನಿಗೋಳಿ: 34 ವರ್ಷ ಕರ್ಯ ನಿರ್ವಹಿಸಿ ಕಿನ್ನಿಗೋಳಿಯ ಕೆನರಾ ಬ್ಯಾಂಕ್ ನಲ್ಲಿ ಸ್ವಯಂ ನಿವೃತ್ತಿಯಾದ ವಿನೋದ ಶೆಟ್ಟಿ ಅವರಿಗೆ ವಿದಾಯ ಸನ್ಮಾನ ಸೋಮವಾರ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ...

Close