ಕಳವು ಪ್ರಕರಣ ಆರೋಪಿಗಳ ಬಂಧನ

ಕಿನ್ನಿಗೋಳಿ: ಅಂತರ ಜಿಲ್ಲಾ ದೇವಸ್ಥಾನ ಕಳವು, ಸುಲಿಗೆ ಹಾಗೂ ಕಳವು ಪ್ರಕರಣಕ್ಕೆ ಸಂಬಂದಿಸಿದ ಆರೋಪಿಗಳನ್ನು ಮುಲ್ಕಿ ಪೋಲಿಸರು ಬಂದಿಸಿದ್ದಾರೆ. ಬಂದಿತರನ್ನು ತುಮಕೂರು ನಿವಾಸಿ ನವೀನ್ ಕುಮಾರ್ ಮತ್ತು ಬೆಂಗಳೂರು ನಿವಾಸಿ ವೆಂಕಟೇಶ ಎಂದು ಗುರುತಿಸಲಾಗಿದೆ ಬಂಧಿತರಿಂದ ಎರಡು ಬೈಕ್ ಮಾಂಗಲ್ಯ ಸರ ಸೇರಿ ಒಟ್ಟು 2 ಲಕ್ಷ 45 ಸಾವಿರ ರೂಪಾಯಿ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 2017 ಜುಲೈ ಯಲ್ಲಿ ಮುಲ್ಕಿಯ ಕೋಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಗುತ್ತಕಾಡು ಮೂಕಾಂಬಿಕ ದೇವಸ್ಥಾನದಲ್ಲಿ ನಗ ನಗದು ಕಳವುಗೈದಿದ್ದಾರೆ ಅಲ್ಲದೆ 2017 ರಲ್ಲಿ ಬೆಂಗಳೂರು ದಾಬಸ್ ಪೇಟೆ ಪೂಲೀಸು ಠಾಣೆ ಹಾಗೂ 2018 ರಲ್ಲಿ ಬೇಲೂರು ಪೋಲೀಸು ಠಾಣಾ ವ್ಯಾಪ್ತಿಯಲ್ಲಿ ಎರಡು ಮೋಟಾರು ಸೈಕಲ್ ಕಳವುಗೈದಿದ್ದಾರೆ.
ಆರೋಪಿಗಳ ಪೈಕಿ ನವೀನ್ ಕುಮಾರ್ ಎಂಭಾತನು ತನ್ನ ಮೊಬೈಲ್ ನಲ್ಲಿ ದೇವಸ್ಥಾನಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ರೂಟ್ ಮ್ಯಾಪ್ ಮೂಲಕ ದೇವಸ್ಥಾನಗಳಿಗೆ ಮೊದಲೇ ಬೇಟಿ ಕೊಟ್ಟು ಕಳವಿಗೆ ತಯಾರಿ ನಡೆಸಿ ರಾತ್ರಿ ಸಮಯದಲ್ಲಿ ಕಳವು ನಡೆಸುತ್ತಿದ್ದರು. ಮೋಟಾರು ಸೈಕಲ್ ಗಳ ಶೂಕಿ ಹೊಂದಿದ ಈತ ದುಬಾರಿ ಬೆಲೆಯ ಮೋಟಾರು ಸೈಕಲ್ ಗಳನ್ನು ಕಳವು ಮಾಡುತ್ತಿದ್ದ, ಅಲ್ಲದೆ ಬೈಕ್ ಚಲಾಯಿಸುದರಲ್ಲಿ ನಿಸ್ಸಿಮನಾಗಿದ್ದ, ಈತ ಹಾಸನ ತುಮಾಕೂರು ಬೆಂಗಳೂರು ಮತ್ತಿತರ 53 ಕಳವು ಪ್ರಕರಣಗಳಿಗೆ ಪೋಲಿಸರಿಗೆ ಬೇಕಾಗಿರುತ್ತಾನೆ. ಆರೋಪಿಗಳನ್ನು ಪೂಲೀಸ್ ಆಯುಕ್ತರಾದ ಟಿ.ಎಸ್ ಸುರೇಶ್ ರವರ ಮಾರ್ಗದರ್ಶನದಂತೆ ಉಪ ಪೂಲೀಸ್ ಆಯುಕ್ತ ಹನುಮರಾಯ ಮತ್ತು ಅಪರಾಧ ವಿಭಾಗದ ಉಪ ಪೂಲೀಸ್ ಆಯುಕ್ತ ಉಮಾ ಪ್ರಶಾಂತ್ ನಿರ್ದೇಶನಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಆಯುಕ್ತ ರಾಜೇಂದ್ರರವರ ನೇತೃತ್ವದಲ್ಲಿ ಮೂಲ್ಕಿ ಪೀಲೀಸ್ ಠಾಣಾ ನಿರೀಕ್ಷಕ ಅನಂತ ಪದ್ಮನಾಭ, ಎಸ್.ಐ ಶೀತಲ್ ಅಲಗೂರು ಹಾಗೂ ಎ.ಎಸ್.ಐ ಚಂದ್ರಶೇಖರ್ ಸಿಬಂಧಿಗಳಾದ ದರ್ಮಣ್ಣ, ಅಣ್ಣಪ್ಪ, ಮಹಮದ್ ಹುಸೇನ್, ಸಿದ್ದು ಬಾಬನಗರ , ಸುರೇಶ್ ಬಸವರಾಜ ಹಾಗೂ ಮನೋಜ್ ಕುಮಾರ್ ಪತ್ತೆ ಕಾರ್ಯಾಚರಣೆಯಲ್ಲಿ ಬಾಗವಹಿಸಿರುತ್ತಾರೆ.

Kinnigoli-08031801 Kinnigoli-08031802 Kinnigoli-08031803

Comments

comments

Comments are closed.