ತಾಳಿಪಾಡಿ ಖಿಲ್ ರ್ ಮೌಲೂದ್ ಕಾರ್ಯಕ್ರಮ

ಕಿನ್ನಿಗೋಳಿ: ಸೌರ್ಹಾದತೆ ಸಹಬಾಳ್ವೆ ಮೂಲಕವಾಗಿ ಬಾಳಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯವಿದೆ ಎಂದು ದ. ಕ. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಗುತ್ತಕಾಡು ಮಸೀದಿ ವಠಾರದಲ್ಲಿ ತಾಳಿಪಾಡಿ – ಶಾಂತಿನಗರ ಖಿಲ್‌ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ( ರಿ ) ಇದರ ಸಂಯೋಜನೆಯಲ್ಲಿ ಖಿಲ್‌ರ್ ಮೌಲೂದ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೆ. ಜೆ. ಎಮ್ ಅಧ್ಯಕ್ಷ ಅಬ್ದುಲ್ ರಹೆಮಾನ್ ಅಧ್ಯಕ್ಷತೆವಹಿಸಿದ್ದರು.
ಇಬ್ರಾಹಿಂ ರಝ್ವಿ ದುವಾ ಆಶೀರ್ವನ ನೀಡಿದರು.
ಈ ಸಂದರ್ಭ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ತಾಲೂಕ ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಹಳೆಯಂಗಡಿ ಉದ್ಯಮಿ ಅಬ್ದುಲ್ ಬಶೀರ್, ಮುಕ್ಕ ಜುಮ್ಮಾ ಜುಮ್ಮಾ ಮಸೀದಿಯ ಅಬ್ದುಲ್ ರಝಾಕ್, ಸುರತ್ಕಲ್ ಈದ್ಗಾ ಮಸೀದಿಯ ಅಭ್ದುಲ್ ಅಝೀಝ್, ಎಮ್ . ಜೆ. ಎಮ್ ಗೌರವಾಧ್ಯಕ್ಷ ಯಾಕೂಬ್ ಇಡ್ಯಾ, ಎಸ್. ಎಮ್. ಎ ಸುರತ್ಕಲ್ ರೇಂಜ್ ಅಬ್ದುಲ್ ಹಮೀದ್, ಕೃಷ್ಣಾಪುರ ತೈಬ್ ಮಸೀದಿಯ ಅಧ್ಯಕ್ಷ ಇಕ್ಬಾಲ್, ಶಾಂತಿನಗರ ಎನ್ ಎಚ್ ಎ ಅಧ್ಯಕ್ಷ ನೂರುದ್ದೀನ್, ಅಬ್ದುಲ್ ಹಮೀದ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಶಾಲಾ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಟಿ. ಎಚ್ ಮಯ್ಯದ್ದಿ ಸ್ವಾಗತಿಸಿದರು. ಟಿ. ಕೆ. ಅಬ್ದುಲ್ ಕಾದರ್ ಪ್ರಸ್ತಾವನೆಗೈದರು. ಕೆ. ಜಲೀಲ್ ಕಾರ್ಯಕ್ರಮ ನಿರೂಪಿಸಿದರು. ಟಿ. ಎ. ನಝೀರ್ ವಂದಿಸಿದರು.

Kinnigoli-08031806

Comments

comments

Comments are closed.

Read previous post:
ಮಾ 8.-11 ಕೊಡೆತ್ತೂರು ನೇಮೋತ್ಸವ

ಕಿನ್ನಿಗೋಳಿ: ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಮಾ. 8 ರಿಂದ 11 ವರೆಗೆ ನಡೆಯಲಿದೆ. ಮಾ. 8 ರಂದು ಬೆಳಿಗ್ಗೆ 8.30 ಕ್ಕೆ ಕುಂಜರಾಯ ದೈವದ...

Close