ಪೊಂಪೈ ಕಾಲೇಜು ಐಕಳ ಮಹಿಳಾ ದಿನಾಚರಣೆ

ಕಿನ್ನಿಗೋಳಿ: ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಯೂತ್ ರೆಡ್ ಕ್ರಾಸ್ ಜಂಟಿಯಾಗಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಮ್ಮೊಳಗಿನ ಸಾಧಕರು ಎಂಬ ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಪರಿಸರದ ಮಹಿಳಾ ಸಾಧಕಿಯರಾದ ಮೀನು ವ್ಯಾಪಾರಿ ಅಹಲ್ಯ ಎಸ್. ಕಾಂಚನ್, ಉದ್ಯಮಿ ಪೂರ್ಣಿಮ ಎಸ್. ಶೆಟ್ಟಿ, ಕೃಷಿಕೆ ಸಂಗೀತ ಬಿ. ದೇವಸ್ಯ, ಆಟೋಚಾಲಕಿ ಲಕ್ಷ್ಮಿ ಕಲ್ಲಮುಂಡ್ಕೂರು, ಹೂವು ವ್ಯಾಪಾರಿ ಸಿಂತಿಯ ಡಿಸೋಜ, ಯೂತ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕ ಮಹಿಳಾ ಅಧಿಕಾರಿ ಸಿಲ್ವಿಯ ಪಾಯ್ಸ್ ಅವರನ್ನು ಸನ್ಮಾನಿಸಲಾಯಿತು.
ಪೊಂಪೈ ಕಾಲೇಜು ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷೆ ಸೆವ್ರಿನ್ ಲೋಬೊ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಾಂಭವಿ ಶಿವರಾಮ ಶೆಟ್ಟಿ, ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಕೆ. ಜಗದೀಶ ಹೊಳ್ಳ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಯೋಜನಾಧಿಕಾರಿ ಡಾ. ವಿಕ್ಟರ್ ವಾಜ್ ಇ., ಪ್ರೊ. ಯೋಗಿಂದ್ರ ಬಿ., ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕ ವಿಶಾಲ್ ಬಿ. ಕುಲಾಲ್, ವರ್ಷಿಣಿ ಹಾಗೂ ಯೂತ್ ರೆಡ್ ಕ್ರಾಸ್ ಘಟಕದ ನಾಯಕಿ ತ್ರಿಷಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-10031801

Comments

comments

Comments are closed.

Read previous post:
ಮಾ.10-11ಗೋಳಿಜೋರ ಕೋರ‍್ದಬ್ಬು ನೇಮ

ಕಿನ್ನಿಗೋಳಿ: ಶ್ರೀ ಕೋರ‍್ದಬ್ಬು ದೈವಸ್ಥಾನ ಗೋಳಿಜೋರ ವರ್ಷಾವಧಿ ನೇಮೋತ್ಸವ ಮಾ. 10 ಮತ್ತು 11 ರಂದು ನಡೆಯಲಿದೆ. ಮಾ.10 ರಂದು ರಾತ್ರಿ 11 ಗಂಟೆಗೆ ಶ್ರೀ ಕೋರ‍್ದಬ್ಬು ಮತ್ತು...

Close