ಹಳೆಯಂಗಡಿ ನೂತನ ಕಟ್ಟಡ ಶಿಲಾನ್ಯಾಸ

ಕಿನ್ನಿಗೋಳಿ : ಕೇಂದ್ರ ಸರಕಾರದ ರೂಸ ಯೋಜನೆಯಲ್ಲಿ ಹಳೆಯಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ಕೋಟಿ ಅನುದಾನವನ್ನು ಒದಗಿಸಲಾಗಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ರೂಸಾ ಯೋಜನೆಯಿಂದ ನಿರ್ಮಾಣವಾಗಲಿರುವ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಹಳೆಯಂಗಡಿಯ ಸರಕಾರಿ ಕಾಲೇಜು ಮಾತ್ರವಲ್ಲದೆ ಮಂಗಳೂರು ಯೂನಿವರ್ಸಿಟಿ ಸಮೇತ ರಾಜ್ಯದ ಹಲವು ಸರಕಾರಿ ಕಾಲೇಜಿಗೆ ಅನುದಾನ ಒದಗಿಸಲಾಗಿದೆ, ಗ್ರಾಮೀಣ ಬಾಗದ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಅನುದಾನವನ್ನು ಒದಗಿಸಿದ್ದು ಮೊದಲ ಹಂತದಲ್ಲಿ 70 ಲಕ್ಷದ ಕಾಮಗಾರಿ ನಡೆಯಲಿದೆ ಎಂದರು. ಈ ಸಂದರ್ಭ ಕಾಲೇಜು ಪ್ರಾಶುಂಪಾಲ ವಿಶ್ವನಾಥ್ ಭಟ್, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ಶರತ್ ಕುಬೆವೂರು, ಜೀವನ್ ಪ್ರಕಾಶ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಸದಸ್ಯರಾದ ವಿನೋದ್, ಸುಕೇಶ್, ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಸತೀಶ್ ಭಟ್ ಹಳೆಯಂಗಡಿ, ನರೇಂದ್ರ ಪ್ರಭು, ಸಂತೋಷ್ ಶೆಟ್ಟಿ, ಮನೋಜ್ ಕುಮಾರ್, ಹಿಮಕರ್, ಶೋಭೇಂದ್ರ ಸಸಿಹಿತ್ಲು, ರಾಮಚಂದ್ರ ಶೆಣೈ, ಸುಭಾಸ್ ಕರ್ಕೇರ, ಕೇಶವ, ಲೋಕೋಪಯೋಗಿ ಇಲಾಖಾಧಿಕಾರಿ ಗೋಪಾಲ್, ಗುತ್ತಿಗೆದಾರ ಪುರುಷೋತ್ತಮ್ ಕುಲಾಲ್ ಮತ್ತಿತರರು ಇದ್ದರು.

Kinnigoli-10031803

Comments

comments

Comments are closed.

Read previous post:
ಮಾ. 12-15 ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕಿನ್ನಿಗೋಳಿ: ಶಾಂತಿನಗರ ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಳದಲ್ಲಿ ಮಾ. 12 ರಿಂದ 15 ತನಕ 37 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಮಾ. 11 ರಂದು ಸಂಜೆ ಕಿನ್ನಿಗೋಳಿಯಿಂದ...

Close